ಚೀನಾ ಮ್ಯಾಪ್‌ ರಿಲೀಸ್‌ ಮಾಡಿದ್ರೆ ಅರುಣಾಚಲ ಪ್ರದೇಶ ಅವ್ರದಾಗಲ್ಲ: ಜೈಶಂಕರ್‌

masthmagaa.com:

ಭಾರತಕ್ಕೆ ಸೇರಿರೋ ಅರುಣಾಚಲ ಪ್ರದೇಶ ಹಾಗೂ ಅಕ್ಸಯ್‌ ಚಿನ್‌ನ್ನ ತನ್ನ ಪ್ರದೇಶ ಅಂತ ಹೇಳಿಕೊಂಡು ʻಸ್ಟ್ಯಾಂಡರ್ಡ್‌ ಮ್ಯಾಪ್‌ʼ ರಿಲೀಸ್‌ ಮಾಡಿರುವ ಚೀನಾದ ನಡೆಯನ್ನ ಭಾರತ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ʻಬೇರೆ ರಾಷ್ಟ್ರಗಳ ಪ್ರದೇಶಗಳನ್ನ ನಂದು ಅಂತ ಹೇಳ್ಕೊಂಡು ಈ ರೀತಿ ಮ್ಯಾಪ್‌ಗಳನ್ನ ರಿಲೀಸ್‌ ಮಾಡೋದು ಚೀನಾದ ಹಳೆಯ ಚಾಳಿ, ಬೇರೆ ದೇಶಗಳ ಭೂಭಾಗಗಳನ್ನ ತನ್ನ ಮ್ಯಾಪ್‌ನಲ್ಲಿ ಸೇರಿಸಿಕೊಂಡು ರಿಲೀಸ್‌ ಮಾಡುವ ಚೀನಾದ ನಡೆಗೆ ಯಾವ ಅರ್ಥವೂ ಇಲ್ಲ. ಯಾಕಂದ್ರೆ ನಮ್ಮ ಗಡಿಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯಿದೆ. ಈ ರೀತಿ ಅಸಂಬಂದ್ಧವಾಗಿ ಹಕ್ಕು ಸ್ಥಾಪನೆ ಮಾಡೋದ್ರಿಂದ ಇತರ ದೇಶಗಳ ಭೂಭಾಗಗಳು ನಿಮ್ದಾಗೋದಿಲ್ಲ ಅಂತ ಜೈಶಂಕರ್‌ ಚೀನಾವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಭಾರತದ ಭೂಪ್ರದೇಶದ ಮೇಲೆ ಹಕ್ಕು ಸಾಧಿಸೋಕೆ ಪ್ರಯತ್ನಿಸುತ್ತಿರುವ ಚೀನಾದ ನಡೆಯನ್ನ ರಾಜತಾಂತ್ರಿಕವಾಗಿಯೂ ಅಂದ್ರೆ ಅಫಿಷಿಯಲ್‌ ಆಗಿಯೂ ವಿರೋಧ ಮಾಡಿದ್ದೀವಿ ಅಂತ ವಿದೇಶಾಂಗ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ. ಇದೇ ವೇಳೆ ಚೀನಾ ಇಂತಹ ಪ್ರಯತ್ನ ಮಾಡ್ತಿರೋದು ಇದೇ ಮೊದಲಲ್ಲ. ನಾವು ಇದನ್ನ ಬಲವಾಗಿ ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶ ಯಾವಾಗಲೂ ಭಾರತದ ಅವಿಭಾಜ್ಯ ಅಂಗ ಮತ್ತು ಬೇರ್ಪಡಿಸಲಾಗದ ಭಾಗ. ಚೀನಾದ ಈ ನಡೆ ಗಡಿ ಸಮಸ್ಯೆಯನ್ನು ಮತ್ತಷ್ಟು ಗೊಂದಲ ಮಾಡ್ತವೆ ಅಂತ ಬಾಗ್ಚಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply