ಪಶ್ಚಿಮ ಬಂಗಾಳದಲ್ಲಿ ಕೊರೋನಾ ತಾಂಡವ! ಟಫ್ ರೂಲ್ಸ್ ಜಾರಿ

masthmagaa.com:

ಪಶ್ಚಿಮ ಬಂಗಾಳದಲ್ಲೂ ಕೊರೋನಾ ನಿರಂತರವಾಗಿ ಏರಿಕೆಯಾಗ್ತಿದ್ದು, ನಿನ್ನೆ ಒಂದೇ ದಿನ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ ಬಂದಿದೆ. ಇದ್ರ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಮತ್ತೆ ಕೊರೋನಾ ನಿರ್ಬಂಧಗಳನ್ನು ವಿಧಿಸಲಾಗಿದೆ.

ದೀದಿ ಕೋಟೆಯಲ್ಲಿ ಟಫ್ ರೂಲ್ಸ್​​ (ಹೆಡ್)
ನಾಳೆಯಿಂದ ಶಾಲಾ- ಕಾಲೇಜುಗಳು ಬಂದ್
ಸ್ವಿಮ್ಮಿಂಗ್ ಪೂಲ್​, ಜಿಮ್, ಸ್ಪಾ, ಬ್ಯೂಟಿ ಸಲೂನ್ಸ್​ ಬಂದ್
ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ
ಸರ್ಕಾರಿ, ಖಾಸಗಿ ಕಚೇರಿಗಳು 50 ಪರ್ಸೆಂಟ್​​ನೊಂದಿಗೆ ಕಾರ್ಯ
ಸಾಧ್ಯವಾದಷ್ಟು ವರ್ಕ್​​ ಫ್ರಂ ಹೋಂ ಉತ್ತೇಜನಕ್ಕೆ ಕರೆ
ಮೆಟ್ರೋ, ಸಿನಿಮಾ ಹಾಲ್, ರೆಸ್ಟೋರಂಟ್, ಬಾರ್ 50 ಪರ್ಸೆಂಟ್​​​​​ ಮೂಲಕ ಓಪನ್
ಮದುವೆಗೆ 50 ಮತ್ತು ಅಂತ್ಯಕ್ರಿಯೆಯಲ್ಲಿ 20 ಮಂದಿ ಭಾಗಿಯಾಗಲು ಅವಕಾಶ

ಇನ್ನು ದೆಹಲಿಯಲ್ಲೂ ಕೊರೋನಾ ಹೆಚ್ಚುತ್ತಿದ್ದು, ಈಗಾಗಲೇ ಕೆಲವೊಂದು ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಅರವಿಂದ್ ಕೇಜ್ರಿವಾಲ್, ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ ನಿಜ.. ಆದ್ರೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಆಸ್ಪತ್ರೆಗೆ ದಾಖಲಾಗ್ತಿರೋರ ಪ್ರಮಾಣ ಕಡಿಮೆ ಇದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply