ಒಮೈಕ್ರಾನ್: ಇವತ್ತು ಯಾವ ದೇಶದಲ್ಲಿ ಏನೇನಾಯ್ತು?

masthmagaa.com:
ಬ್ರಿಟನ್​​ನಲ್ಲಿ ಮತ್ತೆ 86 ಮಂದಿಗೆ ಒಮೈಕ್ರಾನ್ ಕೊರೋನಾ ಬಂದಿದ್ದು, ನಿನ್ನೆ ಒಂದೇ ದಿನ 246 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಅಂತ ಬ್ರಿಟಿಷ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಒಟ್ಟು 160 ಮಂದಿಗೆ ಸೋಂಕು ಬಂದಿತ್ತು. ಆದ್ರೆ ನಿನ್ನೆ 50 ಪರ್ಸೆಂಟ್ ಜಾಸ್ತಿ ಕೊರೋನಾ ಪತ್ತೆಯಾಗಿದೆ.

ಒಮೈಕ್ರಾನ್ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕ ಅಧ್ಯಕ್ಷ ಬೈಡೆನ್​​​ರ ಚೀಫ್ ಮೆಡಿಕಲ್ ಅಡ್ವೈಸರ್ ಅಂಥೋಣಿ ಫೌಸಿ, ಒಮೈಕ್ರಾನ್​ನ ಆರಂಭಿಕ ಲಕ್ಷಣಗಳನ್ನು ನೋಡಿದ್ರೆ ಸ್ವಲ್ಪ ನೆಮ್ಮದಿ ವಿಚಾರ ಅಂತ ಹೇಳಿದ್ದಾರೆ. ಇದು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದರಿಂದ ಅಲ್ಲಿ ಹರಡೋ ಚಾನ್ಸಸ್ ಜಾಸ್ತಿ ಇದೆ. ಕೊರೋನಾದ ಉಳಿದ ವೇರಿಯಂಟ್​​ಗಳಿಗೆ ಹೋಲಿಸಿದ್ರೆ, ಒಮೈಕ್ರಾನ್ ಸ್ಪೈಕ್ ಪ್ರೊಟೀನ್​ಗಳು ಸ್ಟ್ರೈಟ್​ ಆಗಿವೆ. ಈ ಬಗ್ಗೆ ಈಗಲೇ ಹೇಳಿಕೆ ನೀಡೋದು ತುಂಬಾ ಕಷ್ಟ.. ಆದ್ರೂ ಕೂಡ ಸದ್ಯ ಲಭ್ಯವಿರೋ ಮಾಹಿತಿಯನ್ನು ಗಮನಿಸಿದ್ರೆ ಅದು ಗಂಭೀರ ಪರಿಣಾಮ ಬೀರೋ ಸಾಧ್ಯತೆ ಕಡಿಮೆ ಅಂತ ಹೇಳಿದ್ದಾರೆ.

ಸದ್ಯ ಲಭ್ಯವಿರೋ ಅಂಶಗಳನ್ನು ಗಮನಿಸಿದ್ರೆ ಒಮೈಕ್ರಾನ್ ವೇರಿಯಂಟ್​​ ಡೆಲ್ಟಾ ಮತ್ತು ಬೀಟಾ ವೇರಿಯಂಟ್​​​ಗಿಂತಲೂ ಹೆಚ್ಚು ಹರಡೋ ಮತ್ತು ರೀ ಇನ್ಫೆಕ್ಷನ್ ಸಾಮರ್ಥ್ಯ ಹೊಂದಿದೆ ಅಂತ ಸಿಂಗಾಪುರ್ ಆರೋಗ್ಯ ಸಚಿವಾಲಯ ಹೇಳಿದೆ. ಆದ್ರೆ ಆದ್ರೆ ಇದ್ರ ಲಕ್ಷಣಗಳು ತುಂಬಾ ಮೈಲ್ಡ್​ ಆಗಿವೆ.. ಇದ್ರಿಂದ ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ.. ಕೊರೋನಾ ಲಸಿಕೆ ತಗೊಳ್ಳದೇ ಇರೋರು ಲಸಿಕೆ ಹಾಕಿಸಿಕೊಳ್ಳಿ. ಇದ್ರಿಂದ ಒಮೈಕ್ರಾನ್ ಅಥವಾ ಕೊರೋನಾದ ಯಾವುದೇ ವೇರಿಯಂಟ್​​ನಿಂದ ರಕ್ಷಣೆ ಸಿಗುತ್ತೆ ಅಂತ ಕೂಡ ಸಿಂಗಾಪುರ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಮೊಟ್ಟ ಮೊದಲಿಗೆ ಒಮಿಕ್ರಾನ್ ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ 4ನೇ ಅಲೆಯಬ್ಬರ ಶುರುವಾಗಿದೆ. ದಿನೇ ದಿನೇ ಆಸ್ಪತ್ರೆಗಳಿಗೆ ಅಡ್ಮಿಟ್ ಆಗ್ತಿರೋರ ಸಂಖ್ಯೆ ಜಾಸ್ತಿಯಾಗ್ತಿದೆ. ಹೀಗಾಗಿ ಸರ್ಕಾರ ಆಸ್ಪತ್ರೆಗಳಲ್ಲಿ ಹೆಚ್ಚೆಚ್ಚು ಜನರನ್ನು ಅಡ್ಮಿಟ್ ಮಾಡ್ಕೊಂಡು ಚಿಕಿತ್ಸೆ ನೀಡಲು ಸಿದ್ಧತೆ ನಡೆಸ್ತಿದೆ. ದಿನಕ್ಕೆ 2 ಸಾವಿರದ ಆಸುಪಾಸಿನಲ್ಲಿ ಪತ್ತೆಯಾಗ್ತಿದ್ದ ಡೈಲಿ ಪ್ರಕರಣಗಳ ಸಂಖ್ಯೆ ಈಗ 16 ಸಾವಿರದ ಗಡಿ ದಾಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಧ್ಯಕ್ಷ ರಾಮಪೋಸಾ, ದೇಶದ 9 ಪ್ರಾಂತ್ಯಗಳಲ್ಲಿ ಹೊಸ ಪ್ರಕರಣಗಳ ಪೈಕಿ ಒಮೈಕ್ರಾನೇ ಜಾಸ್ತಿ ಇದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಲಸಿಕೆ ಹಾಕಿಸಿಕೊಳ್ಳಬೇಕು ಅಂತ ಹೇಳಿದ್ದಾರೆ.
-masthmagaa.com

Contact Us for Advertisement

Leave a Reply