ಮಗು ಕಿಡ್ನಾಪ್ ಮಾಡಿದ ಮಹಿಳೆ..! ವಿಡಿಯೋ ನೋಡಿ…

ಓರ್ವ ವ್ಯಕ್ತಿ ಮತ್ತು ಮಹಿಳೆ 8 ವರ್ಷದ ಮಗುವೊಂದನ್ನು ಕಿಡ್ನಾಪ್ ಮಾಡಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್‍ನ ಗಲ್‍ಶಹೀದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಸ್ ಸ್ಟಾಂಡ್‍ನಲ್ಲಿ ಮಹಿಳೆ ತನ್ನ ಮಗುವಿನ ಜೊತೆ ಮಲಗಿದ್ದರು. ಈ ವೇಳೆ ಅಲ್ಲಿಗೆ ಬಂದ ಜೋಡಿ ಮಗುವನ್ನು ನಿಧಾನಕ್ಕೆ ಎತ್ತಕೊಂಡು ಎಸ್ಕೇಪ್ ಆಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಮೂಲಕ ಗುರುತು ಪತ್ತೆಹಚ್ಚಲು ಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇಬ್ಬರು ಆರೋಪಿಗಳು ಮೊದಲು ಮಹಿಳೆ ಜೊತೆ ಸ್ನೇಹ ಮಾಡಿಕೊಂಡಿದ್ದಾರೆ. ನಂತರ ಮಹಿಳೆಗೆ ಬೆಡ್ ಶೀಟ್ ಮತ್ತು ಮಗುವಿಗೆ ಕೆಲ ಮಡಿಸಿನ್ ಕೊಟ್ಟು ವಿಶ್ವಾಸ ಗಳಿಸಿಕೊಂಡಿದ್ದಾರೆ. ನಂತರ ಮಹಿಳೆ ನಿದ್ದೆ ಮಾಡಿದ ಬಳಿಕ ಮಗುವನ್ನು ಎತ್ತಿಕೊಂಡು ಎಸ್ಕೇಪ್ ಆಗಿದ್ದಾರೆ. ನಿದ್ದೆಯಿಂದ ಎದ್ದ ಬಳಿಕ ಮಹಿಳೆ ತನ್ನ ಮಗು ಮತ್ತು ಮಹಿಳೆಯನ್ನು ಹುಡುಕಾಡಲು ಯತ್ನಿಸಿದ್ದಾರೆ. ಆದ್ರೆ ಎಲ್ಲೂ ಪತ್ತೆಯಾಗದೇ ಇದ್ದಾಗ ಪೊಲೀಸರಿಗೆ ತಿಳಿಸಿದ್ರು ಎಂದು ಹಿರಿಯ ಪೊಲೀಸ್ ಅಧಿಕಾರಿ ಅಂಕಿತ್ ಮಿತ್ಥಲ್ ತಿಳಿಸಿದ್ದಾರೆ.

Contact Us for Advertisement

Leave a Reply