ಹೆಣ್ಣು ಹುಲಿಗಾಗಿ ಸಹೋದರರಿಬ್ಬರ ಕಾದಾಟ..! ಭಯಾನಕ ವಿಡಿಯೋ…

ರಾಜಸ್ಥಾನದ ರಂಥಂಬೋರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಎರಡು ಹುಲಿಗಳು ಭರ್ಜರಿಯಾಗಿ ಕಾದಾಟ ನಡೆಸಿವೆ. ಇವುಗಳನ್ನು ಟಿ57 ಮತ್ತು ಟಿ58 ಎಂದು ಗುರುತಿಸಲಾಗಿದೆ. ಈ ಕುರಿತು ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಐಎಫ್ಎಸ್​ ಅಧಿಕಾರಿ ಪ್ರವೀಣ್ ಕಸ್ವಾನ್​​, ಸಹೋದರರ ಭಯಾನಕ ಯುದ್ಧ ಎಂದು ಬರೆದುಕೊಂಡಿದ್ದಾರೆ. ಇಲ್ಲಿನ ಗೈಡ್ಸ್ ಪ್ರಕಾರ ಟಿ57  ಹೆಸರು ಸಿಂಗಸ್ತ್​ ಮತ್ತು ಟಿ58 ಹೆಸರು ರಾಖಿ. ಇವರಿಬ್ಬರೂ ಶರ್ಮಿಲಿ ಎಂಬ ಹುಲಿಯ ಮಕ್ಕಳಾಗಿದ್ದಾರೆ. ಇವರಿಬ್ಬರ ನಡುವೆ ನೂರ್ ಎಂಬ ಹೆಣ್ಣು ಹುಲಿಗಾಗಿ ಈ ಕಾದಾಟ ನಡೆದಿದೆ ಎನ್ನಲಾಗಿದೆ.

 

Contact Us for Advertisement

Leave a Reply