ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಂದ ರಕ್ತದೋಕುಳಿ! ಇವತ್ತು ಏನಾಯ್ತು?

masthmagaa.com:

1)ಇವತ್ತು ಅಫ್ಘಾನಿಸ್ತಾನದಲ್ಲಿ 103ನೇ ಸ್ವಾತಂತ್ರ್ಯೋತ್ಸವ.. ಇಡೀ ದೇಶದೆಲ್ಲೆಡೆ ಅಫ್ಘಾನಿಸ್ತಾನದ ಕಪ್ಪು, ಕೆಂಪು ಮತ್ತು ಹಸಿರು ಬಣ್ಣದ ರಾಷ್ಟ್ರಧ್ವಜ ತೆಗೆದಿರೋ ತಾಲಿಬಾನಿಗಳು ತಮ್ಮ ಬಿಳಿ ಬಾವುಟ ಹಾರಿಸಿದ್ದಾರೆ. ಆದ್ರೆ ಕೆಲ ಸ್ಥಳೀಯರು ಧ್ವಜಕಂಬ ಏರಿ, ತಾಲಿಬಾನಿಗಳ ಬಾವುಟ ತೆಗೆದೆಸೆದು ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಅದ್ರಲ್ಲೂ ಕಾಬೂಲ್​​ನ ಅಬ್ದುಲ್ ಹಕ್ ಸ್ಕ್ವೇರ್ ಜಾಗ ಪ್ರಮುಖವಾಗಿದೆ. ಇಲ್ಲಿ 2001ರಲ್ಲಿ ಅಮೆರಿಕ ಸೇನೆ ಬರೋ ಸ್ವಲ್ಪ ಮುನ್ನ ತಾಲಿಬಾನ್ ವಿರೋಧಿ ಪಶ್ತೂನಿ ನಾಯಕ ಅಬ್ದುಲ್ ಹಕ್​ರನ್ನು ತಾಲಿಬಾನಿಗಳು ಗಲ್ಲಿಗೇರಿಸಿದ್ರು. ಇದಕ್ಕೆ ನಂತರದಲ್ಲಿ ಅಬ್ದುಲ್ ಹಕ್ ಸ್ಕ್ವೇರ್ ಅಂತ ಕರೆಯಲಾಯ್ತು. ಈ ಜಾಗದಲ್ಲೂ ತಾಲಿಬಾನಿಗಳು ತಮ್ಮ ಬಾವುಟ ಹಾರಿಸಿದ್ರು. ಈಗ ಅದನ್ನ ತೆಗೆದು, ಅಫ್ಘನ್ ರಾಷ್ಟ್ರಧ್ವಜ ಹಾರಿಸಲಾಗಿದೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

2) ದೇಶದಾದ್ಯಂತ ಸಾವಿರಾರು ಜನ ಬೀದಿಗೆ ಇಳಿದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೆರವಣಿಗೆ ನಡೆಸಿದ್ದಾರೆ. ಈ ಮೂಲಕ 1996ರಿಂದ 2001ಕ್ಕೆ ಹೋಲಿಸಿದ್ರೆ ನಾವು ತುಂಬಾ ಬದಲಾಗಿದ್ದೀವಿ ಅಂತ ತೋರಿಸಿದ್ದಾರೆ. ಪಾಕ್ ಗಡಿಭಾಗದಲ್ಲಿರೋ ಕುನಾರ್ ಪ್ರಾಂತ್ಯದ ಅಸದಾಬಾದ್​​ನಲ್ಲಿ ಜನ ಅಫ್ಘನ್ ರಾಷ್ಟ್ರಧ್ವಜ ಹಾರಿಸಿದ್ದಾರೆ. ಈ ವೇಳೆ ತಾಲಿಬಾನಿಗಳು ಫೈರಿಂಗ್ ಮಾಡಿದ್ದು, ಕನಿಷ್ಠ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಅಂತ ವರದಿಯಾಗಿದೆ. ಅಪ್ಘಾನಿಸ್ತಾನದ ಆ್ಯಕ್ಟಿಂಗ್ ಪ್ರೆಸಿಡೆಂಟ್​ ಅಂತ ಹೇಳಿಕೊಂಡಿರೋ ಅಮರುಲ್ಲಾ ಸಲೇ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ರಾಷ್ಟ್ರಧ್ವಜದ ಘನತೆ ಕಾಪಾಡಿದವರಿಗೆ ಸೆಲ್ಯೂಟ್ ಮಾಡಿ ಅಂತ ಹೇಳಿದ್ಧಾರೆ.

3) ನ್ಯಾಷನಲ್ ರೆಸಿಸ್ಟನ್ಸ್​ ಫ್ರಂಟ್ ಆಫ್ ಅಫ್ಘಾನಿಸ್ತಾನ್ ನಾಯಕ ಅಮದ್ ಮಸ್ಸೌದ್​ ತಾಲಿಬಾನಿಗಳ ವಿರುದ್ಧ ತೊಡೆತಟ್ಟಲು ರೆಡಿಯಾಗಿದ್ದಾರೆ. ಪಂಜ್​​​ಶಿರ್ ಪ್ರಾಂತ್ಯದಲ್ಲಿ ಬಿಗಿ ಹಿಡಿತ ಹೊಂದಿರೋ ಈ ಸಂಘಟನೆ, ನಮಗೆ ಪಾಶ್ಚಿಮಾತ್ಯ ದೇಶಗಳು ಬೆಂಬಲ ನೀಡಬೇಕು.. ಶಸ್ತ್ರಾಸ್ತ್ರ ಪೂರೈಸಬೇಕು ಅಂತ ಹೇಳಿದ್ದಾರೆ. ಅಮದ್ ಮಸ್ಸೌದ್ ತಂದೆ ಅಹ್ಮದ್ ಶಾ ಮಸ್ಸೌದ್ ಕೂಡ ಈ ಹಿಂದೆ ಪಂಜ್​ಶಿರ್​ ಪ್ರಾಂತ್ಯದ ಸಿಂಹ ಅಂತಲೇ ಫೇಮಸ್ ಆಗಿದ್ರು. ತಾಲಿಬಾನಿಗಳ ವಿರುದ್ಧ ಹೋರಾಡುತ್ತಾ ಬಂದಿದ್ದ ಇವರನ್ನು 2001ರಲ್ಲಿ ಹತ್ಯೆ ಮಾಡಲಾಗಿತ್ತು.

4)ತಾಲಿಬಾನಿಗಳು ಕಾಬೂಲ್​​ನ್ನು ಕಂಟ್ರೋಲ್​​ಗೆ ತಗೊಂಡ ಬೆನ್ನಲ್ಲೇ ಅರಾಜಕತೆಯ ವಾತಾವರಣ ಸೃಷ್ಟಿಯಾಗಿದೆ. ಅಲ್ಲಿ ಲೆಕ್ಕವಿಲ್ಲದಷ್ಟು ಕಾರು ಸೇರಿದಂತೆ ಇತರೆ ವಾಹನಗಳು ಕಳವಾಗಿವೆ ಅಂತ ವರದಿಯಾಗಿದೆ.

5) ಅಪ್ಘಾನಿಸ್ತಾನದ ಮಹಿಳಾ ಫುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಟೀಂ ಆಟಗಾರರನ್ನು ಎಚ್ಚರಿಸಿದ್ದಾರೆ. ಎಲ್ಲರೂ ತಮ್ಮ ತಮ್ಮ ಪಬ್ಲಿಕ್ ಐಡೆಂಟಿಗಳನ್ನು ತೆಗೆದು ಹಾಕಿ ಅಂತ ತಿಳಿಸಿದ್ದಾರೆ. ಇಂಟರ್​​ವ್ಯೂ ಒಂದ್ರಲ್ಲಿ ಮಾತನಾಡಿದ ಖಲಿದಾ ಪೋಪಲ್​, ಎಲ್ಲಾ ಆಟಗಾರರು ತಮ್ಮ ಎಲ್ಲಾ ಸ್ಪೋಟ್ಸ್​ ಕಿಟ್​​ಗಳನ್ನು ಸುಟ್ಟುಹಾಕಿ.. ಸೋಷಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್ ಮಾಡಿ ಅಂತ ಕರೆ ನೀಡಿದ್ದಾರೆ. ಒಂದು ಟೈಮಲ್ಲಿ ಇವರು ಅಫ್ಘಾನಿಸ್ತಾನ ಫುಟ್ಬಾಲ್ ಟೀಂ ನಾಯಕಿಯಾಗಿದ್ರು. ಆದ್ರೆ ನಿರಂತರವಾಗಿ ಕೊಲೆ ಬೆದರಿಕೆ ಬಂದಿದ್ದರಿಂದ ಸದ್ಯ ಡೆನ್ಮಾರ್ಕ್​​ಗೆ ಹೋಗಿ ನೆಲೆಸಿದ್ದಾರೆ.

6)ತಾಲಿಬಾನಿಗಳು ಇವತ್ತು ಕಾಬೂಲ್​​ನಲ್ಲಿದ್ದ ಅಫ್ಘಾನಿಸ್ತಾನ ಕ್ರಿಕೆಟ್​ ಬೋರ್ಡ್​​ನ ಮುಖ್ಯ ಕಚೇರಿಗೂ ಭೇಟಿ ನೀಡಿದ್ದಾರೆ. ಇವರ ಜೊತೆಗೆ ಮಾಜಿ ಕ್ರಿಕೆಟ್ ಆಟಗಾರ ಅಬ್ದುಲ್ಲಾ ಮಜಾರಿ ಕೂಡ ಬಂದಿದ್ರು. ನಂತರ ತಾಲಿಬಾನಿಗಳು ಕಚೇರಿಯಲ್ಲಿರೋ ಫೋಟೋವನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಫೋಟೋದಲ್ಲಿ ಶಸ್ತ್ರಸಜ್ಜಿತ ತಾಲಿಬಾನಿಗಳು ಕಚೇರಿಯ ಕಾನ್ಫರೆನ್ಸ್ ಹಾಲ್​ನಲ್ಲಿ ಕೂತಿರೋದನ್ನು ನೋಡ್ಬೋದು. ತಾಲಿಬಾನಿಗಳ ಟೇಕೋವರ್​ನಿಂದ ಅಫ್ಘಾನಿಸ್ತಾನ ಕ್ರಿಕೆಟ್​​ಗೆ ಏನೂ ತೊಂದ್ರೆಯಾಗಲ್ಲ ಅಂತ ನಿನ್ನೆಯಷ್ಟೇ ಕ್ರಿಕೆಟ್ ಬೋರ್ಡ್​​ ಸಿಇಒ ಹಮೀದ್ ಶಿನ್ವಾರಿ ಹೇಳಿದ್ರು. ಅದ್ರ ಬೆನ್ನಲ್ಲೇ ಇವತ್ತು ಹೀಗಾಗಿದೆ.

7)ಅಫ್ಘನಿಸ್ತಾನದ ಪರಿಸ್ಥಿತಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವಿರುದ್ಧ ಟೀಕೆಗಳು ಕೇಳಿ ಬರ್ತಿರುವಾಗಲೇ ಅಮೆರಿಕ ಅಧ್ಯಕ್ಷರು ಎಬಿಸಿ ನ್ಯೂಸ್​​ಗೆ ನೀಡಿದ ಸಂದರ್ಶನದಲ್ಲಿ ತಮ್ಮ ನಡೆಯನ್ನ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಅಫ್ಘನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳನ್ನ ರಕ್ಷಿಸಲು ಯುದ್ಧವೊಂದೇ ಉತ್ತರವಲ್ಲ, ಪರಿಹಾರವಲ್ಲ. ಜಗತ್ತಿನ ಬೇರೆ ಬೇರೆ ಕಡೆಯೂ ಮಹಿಳೆಯರನ್ನ ಅದೀನಕ್ಕೆ ಒಳಪಡಿಸಲಾಗ್ತಿದೆ. ಅಂಥವರ ಮನಸ್ಥಿತಿಯನ್ನ ಬದಲಾಯಿಸಲು ಆರ್ಥಿಕ, ರಾಜತಾಂತ್ರಿಕ ಮತ್ತು ಅಂತಾರಾಷ್ಟ್ರೀಯ ಒತ್ತಡ ಹಾಕಿ ಅದನ್ನ ಡೀಲ್ ಮಾಡಬೇಕು ಅಂತ ಜೋ ಬೈಡೆನ್ ಹೇಳಿದ್ದಾರೆ. ಇದೇ ವೇಳೆ ತಾಲಿಬಾನಿಗಳು ತಮ್ಮನ್ನ ತಾವು ಜಗತ್ತಿಗೆ ಹೇಗೆ ತೋರಿಸಿಕೊಳ್ಳುತ್ತಾರೋ ಅದರ ಮೇಲೆ ಅವರ ಅಳಿವು ಉಳಿವು ನಿರ್ಧಾರವಾಗುತ್ತೆ ಅಂತಾನೂ ಹೇಳಿದ್ಧಾರೆ. ಜೊತೆಗೆ ಅಫ್ಘನಿಸ್ತಾನದಿಂದ ಅಮೆರಿಕನ್ನರನ್ನ ಹೊರಗೆ ತರೋವರೆಗೂ ಅಮೆರಿಕ ಸೇನೆ ಅಲ್ಲಿರುತ್ತೆ ಎಂದಿದ್ದಾರೆ.

8) ಇನ್ನು ಏರ್​ಪೋರ್ಟ್​​​ನಲ್ಲಿ ಗಲಾಟೆ ವೇಳೆ ಎತ್ತರದ ಕಾಂಪೌಂಡ್ ಒಂದರ ಬಳಿ ಅಮೆರಿಕದ ಯೋಧನ ಕೈಗೆ ತಾಯೊಬ್ಬರು ಚಿಕ್ಕ ಮಗುವನ್ನು ಕೊಡ್ತಿರೋ ಫೋಟೋ ತುಂಬಾ ಗಮನ ಸೆಳೆದಿದೆ.

-masthmagaa.com

Contact Us for Advertisement

Leave a Reply