ಹಾವನ್ನೇ ಹಾವು ನುಂಗುವಾಗ ಬಂದ ಜೇನು ನೊಣ ಮಾಡಿದ್ದೇನು..?

ಫ್ಲೋರಿಡಾ: ಒಂದು ಹಾವು ಮತ್ತೊಂದು ಹಾವನ್ನು ನುಂಗುವ ವಿಡಿಯೋ ಫುಲ್ ವೈರಲ್ ಆಗಿದೆ. ಫ್ಲೋರಿಡಾ ಯೂನಿವರ್ಸಿಟಿಯಲ್ಲಿ ಕೆಲಸ ಮಾಡುವ ಎವಾಂಜಲಿನ್ ಕಮ್ಮಿಂಗ್ಸ್​​ ಈ ವಿಡಿಯೋ ಮಾಡಿದ್ದಾರೆ. ನಂತರ ಅದನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಕೋರಲ್ ಹಾವು, ಸತ್ತು ಹೋಗಿರೋ ರ್ಯಾಟ್ ಹಾವನ್ನು ನುಂಗುತ್ತಿದೆ. ಈ ವೇಳೆ ಬಂದ ಜೇನು ನೊಣ ಕೋರಲ್ ಹಾವನ್ನು ಕಚ್ಚುತ್ತಿದೆ. ಈ ವಿಡಿಯೋವನ್ನು 42 ಸಾವಿರ ಜನ ನೋಡಿದ್ದು, ಅಪಾರ ಪ್ರಮಾಣದಲ್ಲಿ ಕಮೆಂಟ್ ಕೂಡ ಹರಿದುಬಂದಿದೆ.

Contact Us for Advertisement

Leave a Reply