‘ಕಬ್ಜ’ ಬಿಡುಗಡೆಗೆ ಮೂರೇ ದಿನ ಬಾಕಿ: ವಿಶ್ವದಾದ್ಯಂತ 4000 ಸ್ಕ್ರೀನ್ ಗಳಲ್ಲಿ ಬಿಡುಗಡೆ!

masthmagaa.com:

ವಾರದ ಮೊದಲೇ “ಕಬ್ಜ”ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಕಳೆದ ಭಾನುವಾರ ಶೋ ಒಪನ್‌ ಆದ ಕೆಲವೇ ನಿಮಿಷಗಳಲ್ಲಿ ಟಿಕೆಟ್‌ಗಳು ಸೊಲ್ಡ್‌ ಔಟ್‌ ಆಗಿವೆ. ಬುಕ್‌ ಮೈ ಶೋನಲ್ಲಿ “ಕಬ್ಜ” ದಾಖಲೆ ಬರೆದಿದೆ, ಬರೀತಾ ಇದೆ. ಮಾರ್ಚ್‌ 17ಕ್ಕೆ ರಿಲೀಸ್‌ ಆಗೋಕೆ ರೆಡಿ ಆಗಿರುವ “ಕಬ್ಜ” ಮೂವಿ ಟಿಕೆಟ್‌ಗಳು ಬುಕ್‌ ಮೈ ಶೋನಲ್ಲಿ ಬಹುತೇಕ ಸೊಲ್ಡ್‌ ಔಟ್‌ ಆಗಿದೆ. ಕನ್ನಡ ಅಷ್ಟೇ ಅಲ್ಲದೇ ತಮಿಳ್‌, ತೆಲುಗು, ಹಿಂದಿಯವರು ಕೂಡ “ಕಬ್ಜ”ಗಾಗಿ ವೇಟ್‌ ಮಾಡ್ತಾ ಇದಾರೆ. ಟೀಸರ್‌ ಬಿಡುಗಡೆಯಾದ ಸಂದರ್ಭದಲ್ಲಿ ಏನೋ ಒಂದು ರೀತಿ ಕೆಜಿಎಫ್‌ ಫೀಲ್‌ ಬರ್ತಾ ಇದೆ, ಹಿನ್ನಲೆ ಸಂಗೀತ, ಮೇಕಿಂಗ್‌, ಸ್ಕೇಲ್‌ ಎಲ್ಲದರಲ್ಲೂ ನಿರ್ದೇಶಕ ಆರ್‌ ಚಂದ್ರು ಅವರು ಕೆಜಿಎಫ್‌ ನಿಂದ ಸಕತ್ತಾಗಿ ಇನ್ಫ್ಲೂಯನ್ಸ್‌ ಆಗಿದ್ದಿದ್ದು ಕಂಡುಬಂದಿತ್ತು.

ಆದರೆ ಕಬ್ಜ ಸಿನಿಮಾದ ಟ್ರೇಲರ್‌ ಬಂದಿದ್ದೇ ಬಂದಿದ್ದು ಕೆಜಿಎಫ್‌ ಹೊರತಾಗಿ ಈ ಸಿನಿಮಾದಲ್ಲಿ ಬೇರೆ ಎನೋ ಇದೆ ಅನ್ನೋದನ್ನ ನಿರ್ದೇಶಕ ಅರ್. ಚಂದ್ರು ಪ್ರೂವ್‌ ಮಾಡಿದ್ರು.

ಟ್ರೇಲರ್ ನೋಡಿ ಸಿನಿಮಾ ಮೇಲೆ ನಿರೀಕ್ಷೆ ಇಟ್ಕೊಳ್ಬಹುದು ಎನ್ನುವಂತ ನಂಬಿಕೆಯನ್ನ ಹುಟ್ಟುಹಾಕಿತು. ಸದ್ಯಕ್ಕೆ ಟ್ರೇಲರ್‌ ಮುಖಾಂತರ ಸೆನ್ಸೇಷನ್‌ ಕ್ರೀಯೆಟ್‌ ಮಾಡಿರುವ ಕಬ್ಜ ಸಿನಿಮಾ ಬಿಡುಗಡೆಯಾದ ಮೂರೇ ದಿನದಲ್ಲಿ ಹಾಕಿದ ಬಂಡವಾಳ ವಾಪಸ್‌ ಪಡೆಯುವ ಸೂಚನೆಯನ್ನ ಕೊಟ್ಟಿದೆ.


ಕರ್ನಾಟಕ ಮಾತ್ರವಲ್ಲದೇ ಮುಂಬೈ, ಹೈದರಾಬಾದ್‌ನಲ್ಲೂ ಪ್ರಮೋಷನ್‌ ಮಾಡಿ ಧೂಳ್‌ ಎಬ್ಬಿಸಿ ಬಂದಿದ್ದ ಕಬ್ಜ ಸಿನಿಮಾ ತಂಡ ಮಾರ್ಚ್‌ 17ಕ್ಕೆ ರಿಲೀಸ್‌ ಆಗೋಕೆ ಕಾಯ್ತಿದೆ. ಇದೀಗ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ- ರಿಲೀಸ್‌ ಇವೆಂಟ್‌ಗೆ “ಕಬ್ಜ” ಟೀಮ್‌ ರೆಡಿಯಾಗಿದೆ. ಮಂಗಳವಾರ (14 ಮಾರ್ಚ್‌)ರಂದು ಈ ಪ್ರೊಗ್ರಾಮ್‌ ನಡೆಯಲಿದೆ. ಈ ಪ್ರೀ- ರಿಲೀಸ್‌ ಇವೆಂಟ್‌ನಲ್ಲಿ ಮೂವಿಯ ತ್ರಿ-ರತ್ನಗಳಾದ ಉಪೇಂದ್ರ, ಸುದೀಪ್‌, ಹಾಗೂ ಶಿವಣ್ಣ ಇರಲಿದ್ದಾರೆ. ಜೊತೆಗೆ 50ಕ್ಕೂ ಹೆಚ್ಚು ಸಿನಿತಾರೆಯರು, ತಂತ್ರಜ್ಣರು ಪಾಲ್ಗೊಳ್ಳಲಿದ್ದಾರೆ.

ಇನ್ನು ಕಬ್ಜಸಿನಿಮಾಗೆ ಇರುವ ಫ್ಯಾನ್‌ ಕ್ರೇಜ್‌ ನೋಡಿದ್ರೆ ಬಾಕ್ಸ್‌ ಆಫಿಸ್‌ ಕಲೆಕ್ಷನ್‌ನಲ್ಲಿ ಪಠಾನ್‌ ಸಿನಿಮಾವನ್ನ ಹಿಂದಿಕ್ಕೋದು ಪಕ್ಕ ಅಂತ ಅನ್ಸತ್ತೆ.ವಿಶ್ವದೆಲ್ಲೆಡೆ 4000 ಸ್ಕೀನ್‌ಗಳಲ್ಲಿ 5 ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್‌ ಆಗಲಿದೆ. ಕೆಜಿಎಫ್‌, ಕಾಂತರದ ನಂತ್ರ ಸಿಕ್ಕಾಪಟ್ಟೆ ಕ್ರೇಜ್‌ ಹುಟ್ಟಿಸಿದಂತ ಸಿನಿಮಾ ಇದಾಗಿದೆ. ರಿಲೀಸ್‌ ಆಗೋದನ್ನೇ ಫ್ಯಾನ್ಸ್‌ ತುದಿಗಾಲಿನಲ್ಲಿ ಕಾಯ್ತಾ ಇದಾರೆ. ನಿರ್ದೇಶಕ ಆರ್‌ ಚಂದ್ರು ಈ ಬಾರಿ ದೊಡ್ಡದಾಗೆ ಗೇಲ್ತಾರೆ ಅನ್ನೋ ಮಾತುಗಳನ್ನ ಸಿನಿ ಪಂಡಿತರು ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply