ದಿವಾಳಿಯಾಗುತ್ತಾ ಚಾಟ್‌ಜಿಪಿಟಿ ಮಾತೃ ಕಂಪನಿ ಓಪನ್‌AI?

masthmagaa.com

ಇತ್ತೀಚೆಗೆ ಭಾರಿ ಸದ್ಧು ಮಾಡ್ತಿರುವ AI ಚಾಲಿತ ಚಾಟ್‌ಬಾಟ್‌ ಚಾಟ್‌ಜಿಪಿಟಿ ಅನ್ನ ಅಭಿವೃದ್ಧಿಪಡಿಸಿರುವ ಓಪನ್‌AI ಕಂಪನಿ ದಿವಾಳಿ ಭೀತಿ ಎದುರಿಸುತ್ತಿದೆ. ಕಂಪನಿ ಈಗಾಗಲೇ ಸುಮಾರು 4,500 ಕೋಟಿ ರೂಪಾಯಿ ನಷ್ಟದಲ್ಲಿದ್ದು, 2024ರ ವರ್ಷಾಂತ್ಯಕ್ಕೆ ದಿವಾಳಿಯಾಗಬಹುದು ಅಂತ ಅನಾಲಿಟಿಕ್ಸ್‌ ಇಂಡಿಯಾ ಮ್ಯಾಗಜೀನ್‌ ಭವಿಷ್ಯ ನುಡಿದಿದೆ. ಸ್ಯಾಮ್‌ ಆಲ್ಟ್‌ಮನ್‌ ನೇತೃತ್ವದ ಓಪನ್‌AI ಕಂಪನಿಯು ಚಾಟ್‌ಜಿಪಿಟಿ ಹೆಸರಿನ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ ಬಿಡುಗಡೆ ಮಾಡಿದ ಮೇಲೆ ಜಗತ್ತಿನಾದ್ಯಂತ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಆಕ್ರಮಣಕಾರಿ ನಡೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿತ್ತು. ಇದೇ ವೇಳೆ, ಓಪನ್‌AI ಕಂಪನಿಯ ಜನಪ್ರಿಯತೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆದರೆ ಆ ಜನಪ್ರಿಯತೆಯಿಂದ ಹಣ ಗಳಿಸುವ ಮಾರ್ಗವನ್ನು ಕಂಡುಕೊಳ್ಳುವಲ್ಲಿ ಕಂಪನಿ ವಿಫಲವಾಗಿದೆ. ಹೀಗಾಗಿ ಪ್ರತಿದಿನ 5.8 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ ಎನ್ನಲಾಗಿದೆ. ಅಲ್ದೆ ಇತ್ತೀಚಿನ ದಿನಗಳಲ್ಲಿ ಚಾಟ್‌ಜಿಪಿಟಿ ಬಳಕೆದಾರರ ಸಂಖ್ಯೆ ಇಳಿಕೆಯಾಗುತ್ತಿದೆ. ಈ ವರ್ಷದ ಜೂನ್‌ನಲ್ಲಿ 170 ಕೋಟಿ ಇದ್ದ ಬಳಕೆದಾರರ ಸಂಖ್ಯೆ ಜುಲೈನಲ್ಲಿ 150 ಕೋಟಿಗೆ ಇಳಿಕೆಯಾಗಿದೆ. ಈ ನಡುವೆ ಇತರ ಕಂಪನಿಗಳು ತಮಗೆ ಬೇಕಾದ ಚಾಟ್‌ಬಾಟ್‌ಗಳನ್ನ ಚಾಟ್‌ಜಿಪಿಟಿ ಮಾದರಿಯಲ್ಲಿ ತಾವೇ ಅಭಿವೃದ್ಧಿಪಡಿಸಿಕೊಳ್ಳುತ್ತಿವೆ. ಹೀಗಾಗಿ ಓಪನ್‌AI ಕಂಪನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply