ಆಪರೇಷನ್‌ ಕಮಲ 2.O: ಹಳೇ ಮೈಸೂರಿಗೆ ಬಿಜೆಪಿ ಲಗ್ಗೆ!

masthmagaa.com:

ಶತಾಯಗತಾಯ ಮುಂದಿನ ಚುನಾವಣೆಯಲ್ಲಿ ಸ್ವಂತಬಲದಿಂದಲೇ ಅಧಿಕಾರ ಹಿಡಿಬೇಕು ಅಂತ ನೋಡ್ತಿರೋ ಬಿಜೆಪಿ ಇದೀಗ ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಈಗ ಎರಡನೇ ಹಂತದ ಆಪರೇಷನ್‌ ಕಮಲಕ್ಕೆ ಕೈ ಹಾಕ್ತಿದೆ ಅಂತ ಹೇಳಲಾಗ್ತಿದೆ. ಇದಕ್ಕಾಗಿ ಜೆಡಿಎಸ್‌ನ ಜಿ.ಟಿ. ದೇವೇಗೌಡ, ಸುಮಲತಾ ಅಂಬರೀಷ್‌ ಮತ್ತು ಇತರೆ ನಾಯಕರಿಗೆ ಗಾಳ ಹಾಕಿದೆ. ಜೆಡಿಎಸ್‌ನಿಂದ ಆಲ್‌ರೆಡಿ ಒಂದು ಕಾಲು ಆಚೆ ಇಟ್ಟಿದ್ದ ಜಿ.ಟಿ.ದೇವೇಗೌಡ ಸದಾ ಬಿಜೆಪಿ ಪರ ಹೇಳಿಕೆ ಕೊಡ್ತಾ ಬಂದಿದ್ರು. ಇದ್ರ ಜೊತೆಗೆ ಇಲ್ಲೂ ಈ ಕಡೆಗೂ ಒಂದಿರಲಿ ಅಂತ ಕಾಂಗ್ರೆಸ್‌ ಕಡೆಗೂ ಒಂದು ಟವೆಲ್‌ ಹಾಕಿದ್ರು. ತನ್ನ ಪುತ್ರ ಹರೀಶ್‌ ಗೌಡನಿಗೆ ಕಾಂಗ್ರೆಸ್​​ನಿಂದ ಟಿಕೆಟ್‌ ಕೇಳ್ತಿದ್ದಾರೆ ಅಂತ ಕೂಡ ಹೇಳಲಾಗ್ತಿದೆ. ಆದ್ರೆ ಕೈ ನಾಯಕರಿಂದ ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಗದ ಕಾರಣ ಈಗ ಬಿಜೆಪಿ ಕಡೆ ವಾಲಿದ್ದಾರೆ ಎನ್ನಲಾಗ್ತಿದೆ. ಈ ಸಂಬಂಧ ನಿನ್ನೆ ಸಚಿವ ಎಸ್‌.ಟಿ ಸೋಮಶೇಖರ್‌ ಜೊತೆ ಅರ್ಧ ಗಂಟೆ ಮಾತುಕತೆ ನಡೆಸಿದ್ದಾರೆ. ಆ ನಂತ್ರ ಮಾತಾಡಿರೋ ಎಸ್.ಟಿ ಸೋಮಶೇಖರ್‌, ಸದ್ಯದಲ್ಲಿಯೇ ಎರಡೂ ಪಕ್ಷಗಳಿಂದ ದೊಡ್ಡದೊಡ್ಡ ನಾಯಕರು ಬಿಜೆಪಿಗೆ ಬರ್ತಾರೆ ಅಂತ ಹೇಳಿದ್ದಾರೆ. ಆಪರೇಷನ್ ಕಮಲ 2 ಆಗುತ್ತಾ ಅಂತ ಕೇಳಿದಾಗ ಸದ್ಯದಲ್ಲೇ ಆಗುತ್ತೆ ಅಂತ ಕೂಡ ಹೇಳಿದ್ದಾರೆ. ಇನ್ನು ಆ ಕಡೆ ಮಂಡ್ಯ-ಚಾಮರಾಜನಗರದಲ್ಲೂ ನೆಲೆ ಕಂಡುಕೊಳ್ಳೋಕೆ ಪ್ರಯತ್ನ ಮಾಡ್ತಿರೋ ಬಿಜೆಪಿ, ಸಂಸದೆ ಸುಮಲತಾ ಅಂಬರೀಷ್‌ ಮತ್ತು ಅವ್ರ ಪುತ್ರ ಅಭಿಷೇಕ್‌ ಅಂಬರೀಷ್‌ನ ಸೇರ್ಸ್ಕೋಳ್ಳೋಕೆ ನೋಡ್ತಿದೆ. ಈ ಪ್ರಯತ್ನದ ಭಾಗವಾಗಿ ಸುಮಲತಾ ಅವ್ರ ಆಪ್ತ ಸಚ್ಚಿದಾನಂದ ಅವ್ರನ್ನ ಮೊನ್ನೆ ಬಿಜೆಪಿ ಪಕ್ಷಕ್ಕೆ ಸೇರಿಸ್ಕೊಂಡಿದೆ. ಮುಂದಿನ ದಿನಗಳಲ್ಲಿ ಅವ್ರ ಮೂಲಕ ಸುಮಲತಾ ಮತ್ತು ಅಭಿಷೇಕ್‌ ಕೂಡ ಪಕ್ಷ ಸೇರ್ತಾರೆ ಎನ್ನಲಾಗ್ತಿದೆ. ಅಂದ್ಹಾಗೆ ಇತ್ತೀಚೆಗೆ ಅಭಿಷೇಕ್‌ ಅಂಬರೀಷ್‌ ಸಿಎಂ ಭೇಟಿ ಮಾಡಿದ್ರು.

-masthmagaa.com

Contact Us for Advertisement

Leave a Reply