ಹಿಂದೂ ದೇಗುಲ, ಮನೆಗಳ ಮೇಲೆ ದಾಳಿ: ಸಾವಿರಾರು ಜನರಿಂದ ಪ್ರತಿಭಟನೆ

masthmagaa.com:

ಹಿಂದೂ ದೇವಸ್ಥಾನ ಮತ್ತು ಮನೆಗಳ ಮೇಲಿನ ದಾಳಿಯನ್ನು ಖಂಡಿಸಿ ಹತ್ತಾರು ಸಾವಿರ ಜನ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿ ಢಾಕಾ ಸೇರಿದಂತೆ ಸುಮಾರು 60 ನಗರಗಳಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು. ಇದ್ರಲ್ಲಿ ಕ್ಯಾಂಡಲ್ ಹಿಡಿದು ಸಾವಿರಾರು ಜನ ಭಾಗಿಯಾಗಿದ್ರು. ಅಲ್ಪಸಂಖ್ಯಾತರನ್ನು ಅದ್ರಲ್ಲೂ ಹಿಂದೂ ಸಮುದಾಯದವರನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಎಲ್ಲಾ ಹಿಂಸಾಚಾರದ ಘಟನೆಗಳಿಗೆ ಕುಮಿಲಾದಲ್ಲಿ ದುರ್ಗಿಯ ಕಾಲ ಬಳಿ ಕುರಾನ್ ಇಟ್ಟಿರೋ ಒಂದು ವಿಡಿಯೋವೇ ಕಾರಣವಾಗಿತ್ತು. ಹೀಗಾಗಿ ಕುಮಿಲಾದಲ್ಲಿ ಅಕ್ಟೋಬರ್ 13ರಂದು ಹಿಂಸಾಚಾರ ಶುರುವಾಗುವ ಮುನ್ನವೇ ದೇವಸ್ಥಾನದ ಪೂಜೆ ಮ್ಯಾನೇಜ್ಮೆಂಟ್ ಕಮಿಟಿ ದಾಳಿಯ ಬಗ್ಗೆ ಪೊಲೀಸರಿಗೆ ಎಚ್ಚರಿಸಿದ್ರು. ಆದ್ರೂ ಕೂಡ ಪೊಲೀಸರು ಸಿದ್ಧತೆ ಮಾಡಿಕೊಳ್ಳಲೇ ಇಲ್ಲ. ಕೇರ್​ಲೆಸ್ ಮಾಡಿದ್ರು ಅಂತ ಹಿಂದೂ ಸಮುದಾಯದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಧಾನಿ ಶೇಖ್ ಹಸೀನಾ, ಕೆಲವು ದುಷ್ಕರ್ಮಿಗಳು ಬಾಂಗ್ಲಾದೇಶದಲ್ಲಿ ಕೋಮು ಸೌಹಾರ್ಧವನ್ನ ಹಾಳು ಮಾಡಲು, ಸಮುದಾಯಗಳನ್ನ ವಿಭಜಿಸಲು ಮತ್ತು ದೇಶದ ಪ್ರತಿಷ್ಠೆಯನ್ನು ಹಾಳು ಮಾಡೋಕೆ ಯತ್ನಿಸ್ತಿವೆ. ಆದ್ರೆ ಬಾಂಗ್ಲಾದೇಶವನ್ನು ಹಿಂದಕ್ಕೆ ಹೋಗುವಂತೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅಂತ ಕಿಡಿಕಾರಿದ್ದಾರೆ.

-masthmagaa

Contact Us for Advertisement

Leave a Reply