ಬ್ರಹ್ಮಾಂಡದ ಬೆಚ್ಚಿ ಬೀಳುವ ರಹಸ್ಯ ಬಿಚ್ಚಿಟ್ಟ ನಾಸಾ!

masthmagaa.com:

ನಾವು ಮನುಷ್ಯರು ನಮ್ಮನ್ನ ನಾವು ಬಹಳ ಇಂಪಾರ್ಟೆಂಟ್ ಅಂತಾ ಭಾವಿಸ್ತೀವಿ. ನಮ್ಮೊಳಗೆ ನಾವು ‘ನಾನು’ ಅನ್ನೋ ಕಾಲ್ಪನಿಕ ಕೋಟೆ ಕಟ್ಟಿಕೊಂಡು ಅದನ್ನ ಪಾಲಿಶ್ ಮಾಡ್ತಾನೇ ಬರ್ತಿರ್ತೀವಿ. ಆದ್ರೆ ಈ ಪ್ರಕೃತಿ ಪದೇ ಪದೇ ನಮಗೆ, ಈ ಬ್ರಹ್ಮಾಂಡದ ಮುಂದೆ ನಾವ್ ಎಷ್ಟು ಸಣ್ಣ ಧೂಳಿನ ಕಣಕ್ಕಿಂತಲೂ ಕಡೆ ಅಂತಾ ಪ್ರೂವ್ ಮಾಡ್ತಾನೆ ಇರುತ್ತೆ. ಈಗ ನಾಸಾ ತೆಗೆದಿರೋ ಒಂದು ಫೋಟೋ ನೋಡಿ ಇಡೀ ವಿಶ್ವ ಬೆರಗಾಗಿದೆ. ಇದು ನಾಸಾ ಹಾಗೂ ಈಸಾ ಸೇರಿ ಆಪರೇಟ್ ಮಾಡ್ತರೋ ಹಬಲ್ ಸ್ಪೇಸ್ ಟೆಲಿಸ್ಕೋಪ್ ನಿಂದ ತೆಗೆದ ಚಿತ್ರ. ಇದರಲ್ಲಿ ACO S 295 ಹೆಸರಿನ ಗ್ಯಾಲಾಕ್ಸಿ ಕ್ಲಸ್ಟರ್ ಸೆರೆಯಾಗಿದೆ. ಏನ್ ಹಂಗಂದ್ರೆ? ಗ್ಯಾಲಾಕ್ಸಿ ಕ್ಲಸ್ಟರ್ ಅಂದ್ರೆ? ಇದು ಅರ್ಥ ಆದ್ರೆ ಈ ಭೂಮಿಯಲ್ಲಿರೋ ನಾವು ಎಷ್ಟು ಸಣ್ಣವರು ಅಂತಾ ಗೊತ್ತಾಗುತ್ತೆ. ನೋಡಿ ನಾವು ಭೂಮಿ ಮೇಲೆ ವಾಸ ಇದೀವಿ. ಈ ಭೂಮಿ ಇರೋದು ಸೂರ್ಯ ಕೇಂದ್ರದಲ್ಲಿರೋ ನಮ್ಮ ಸೌರಮಂಡಲದಲ್ಲಿ. ಇದರಲ್ಲಿ ೮ ಗ್ರಹಗಳಿವೆ. ನಮಗೆ ಇನ್ನೂ ನಮ್ಮ ಈ ಪುಟಾಣಿ ಸೌರಮಂಡಲನೇ ಸರಿಯಾಗಿ ಅರ್ಥ ಆಗಿಲ್ಲ. ಆದ್ರೆ ಟೇಕ್ ಅ ಡೀಪ್ ಬ್ರೀದ್, ನಮ್ಮ ಗ್ಯಾಲಾಕ್ಸಿ ಮಿಲ್ಕಿ ವೇನಲ್ಲಿ ನಮ್ಮ ಸೌರಮಂಡಲದ ಥರ, ಸೂರ್ಯನ ಥರ 10 ಸಾವಿರ ಕೋಟಿಯಿಂದ 40 ಸಾವಿರ ಕೋಟಿ ತನಕ ಸ್ಟಾರ್ಸ್ ಇವೆ. ಹೌದು… ಸೂರ್ಯನ ಥರದ ಸಾವಿರ ಸಾವಿರ ಕೋಟಿ ನಕ್ಷತ್ರಗಳು ಸೇರಿ ನಮ್ಮ ಗ್ಯಾಲಾಕ್ಸಿ ಮಿಲ್ಕಿ ವೇ ನಿರ್ಮಾಣ ಆಗಿದೆ. ಅಯ್ಯೋ ದೇವರೇ ನಾವು ಬಿಡಿ, ನಮ್ಮ ಭೂಮಿ ಬಿಡಿ. ಇಡೀ 8 ಗ್ರಹಗಳ ಈ ಸೌರ ಮಂಡಲಾನೇ ಧೂಳಿನ ಕಣದ ಥರ ಆಗೋಯ್ತಲ್ಲ ಅಂತ ಯೋಚನೆ ಮಾಡ್ತಿರ್ಬೋದು ನೀವು. ಎಷ್ಟು ದೊಡ್ಡದಿ ಗ್ಯಾಲಾಕ್ಸಿ ಅಂತ ಆಶ್ಚರ್ಯ ಚಕಿತ ರಾಗ್ಬೋದು. ಆದ್ರೆ ತಡೀರಿ. ಇನ್ನೂ ಇದೆ ಆಶ್ಚರ್ಯ ಪಡೋಕೆ. ಈಗ ನಾಸಾ ಹಬಲ್ ಟೆಲಿಸ್ಕೋಪ್ ಮೂಲಕ ಸರೆ ಹಿಡಿದಿರೋ ಚಿತ್ರ ಒಂದು ಗ್ಯಾಲಕ್ಸಿ ಕ್ಲಸ್ಟರ್ ದು. ಅಂದ್ರೆ ಗ್ಯಾಲಾಕ್ಸಿಗಳ ಸಮೂಹದ್ದು. ಹೌದು. ಒಂದೊಂದು ಗ್ಯಾಲಾಕ್ಸಿ ಕ್ಲಸ್ಟರ್ ನಲ್ಲೂ ನೂರರಿಂದ 1೦೦೦ ಗ್ಯಾಲಾಕ್ಸಿಗಳಿರುತ್ತವೆ. ಇಷ್ಟಕ್ಕೇ ಮುಗಿದಿಲ್ಲ. ಇಂತಹ ಅಸಂಖ್ಯ ಗ್ಯಾಲಾಕ್ಸಿ ಕ್ಲಸ್ಟರ್ ಗಳು ಸೇರಿ ಸೂಪರ್ ಕ್ಲಸಸ್ಟರ್ಗಳು ಫಾರ್ಮ್ ಆಗುತ್ತವೆ. ಉದಾಹರಣೆಗೆ ಭೂಮಿ ಸೌರ ಮಂಡಲದಲ್ಲಿದೆ, ಸೌರ ಮಂಡಲ ಮಿಲ್ಕಿ ವೇ ಗ್ಯಾಲಾಕ್ಸಿ ಅಥವಾ ನಕ್ಷತ್ರಪುಂಜದಲ್ಲಿದೆ. ಈ ಮಿಲ್ಕಿವೇ ಗ್ಯಾಲಾಕ್ಸಿ ಲೋಕಲ್ ಗ್ರೂಪ್ ಅನ್ನೋ ಗ್ಯಾಲಕ್ಸಿ ಗ್ರೂಪ್ ನಲ್ಲಿದೆ. ಈ ಗ್ಯಾಲಾಕ್ಸಿ ಗ್ರೂಪ್ ನಲ್ಲೇ 54 ಗ್ಯಾಲಾಕ್ಸಿಗಳಿವೆ. ಈ ಲೋಕಲ್ ಗ್ರೂಪ್ ಗ್ಯಾಲ;ಆಕ್ಸಿ ವಿಗ್ರೋ ಸುಪರ್ ಕಲ್ಸ್ಟರ್ನ ಭಾಗ. ಈ ವಿರ್ಗೋ ಸೂಪರ್ ಕ್ಲಸ್ಟರ್ ಕೂಡ ತನಗಿಂತಲೂ ದೊಡ್ಡದಾದ ಲಾನಿಯಾಕಿಯಾ ಸೂಪರ್ ಕ್ಲಸ್ಟರ್ ನ ಭಾಗ. ತಲೆ ತಿರುಗ್ತಿದ್ರೆ ಚೂರ್ ತಡೀರಿ, ಮಾನವ ಅಬ್ಸರ್ವ್ ಮಾಡಲು ಸಾಧ್ಯ ಇರೋ ಬ್ರಹ್ಮಾಂಡದಲ್ಲಿ ಇಂತಹ ಕನಿಷ್ಟ 1 ಕೋಟಿ ಸೂಪರ್ ಕ್ಲಸ್ಟರ್ ಗಳೇ ಇವೆಅಂತ ಅಂದಾಜು ಮಾಡಲಾಗಿದೆ.

ಈಗ ನಾಸಾ ತೆಗೆದಿರೋ ACO S 295 ಹೆಸರಿನ ಗ್ಯಾಲಾಕ್ಸಿ ಕ್ಲಸ್ಟರ್ ನಲ್ಲೂ ಸ್ಪಷ್ಟವಾಗಿ ಹಲವು ಗ್ಯಾಲಕ್ಸಿಗಳು ಕಾಣ್ತಿವೆ. ಈ ನಕ್ಷತ್ರಪುಂಜ ಭೂಮಿಯಿಂದ ೩೫೦ ಲೈಟ್ ಇಯರ್ಸ್ / 350 ಜ್ಯೋತಿರ್ವರ್ಷಗಳಷ್ಟು ದೂರ ಇದೆ.

ಈ ಚಿತ್ರ ಎಷ್ಟು ಇಂಪಾರ್ಟೆಂಟ್ ಅನ್ನೊದಕ್ಕೆ ಇದಕ್ಕೆ ಬಂದಿರೋ ಪ್ರತಿಕ್ರಿಯೆಗಳೇ ಸಾಕ್ಷಿ. ಇಂತಹ ಚಿತ್ರಗಳನ್ನ ನೊಡಿದ್ರೆ ಮೈ ಜುಮ್ ಅನ್ನುತ್ತೆ. ನಾವೇನು ಭಾಳ ಇಂಪಾರ್ಟೆಂಟ್ ಅಲ್ಲಾ ಅಂತಾ ಸಾರಿ ಹೇಳುತ್ತೆ ಅಂತ ಒಬ್ರು, ಈ ಇಡೀ ವಿಶ್ವವನ್ನ ಗಿಫ್ಟಾಗಿ ಸ್ವೀಕರಿಸೋಕೆ ಈ ಜನ್ಮ ಸಿಕ್ಕಿದೆ. ಆದ್ರೆ ಈ ಮನುಕುಲ ತನ್ನ ಧೂಳಿನ ಕಣ ಸಮಾನ ಅಸ್ತಿತ್ವವನ್ನ ತನ್ನನ್ನ ತಾನು ನಿಂದಿಸುತ್ತಾ ವೇಸ್ಟ್ ಮಾಡಿಕೊಳ್ತಿದೆ ಅಂತಾ ಇನ್ನೊಬ್ರು.. ಈ ರೀತಿ ಸಾವಿರಾರು ಜನ ವೆರೈಟಿ ವೆರೈಟಿ ಫಿಲೋಸಾಫಿಕಲ್ ಕಾಮೆಂಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply