ಮಂಗಳ ಅಂಗಳದಲ್ಲಿ ಉತ್ಪತ್ತಿಯಾಯ್ತು ಆಮ್ಲಜನಕ!

masthmagaa.com:

ಮಂಗಳನ ಅಂಗಳದ ಮೇಲೆ ಜೀವಿಗಳ ವಾಸಯೋಗ್ಯ ವಾತಾವರಣ ಇದ್ಯಾ ಅನ್ನೋ ಬಗ್ಗೆ ವಿಜ್ಞಾನಿಗಳ ಅಧ್ಯಯನ ಮುಂದುವರೆದಿವೆ. ಇದೀಗ ನಾಸಾ ಡೆವಲಪ್‌ ಮಾಡಿರುವ ವಿಶೇಷ ಉಪಕರಣದಿಂದ ಮಂಗಳ ಗ್ರಹದ ಮೇಲೆ ಆಕ್ಸಿಜನ್‌ ಉತ್ಪಾದನೆ ಸಾಧ್ಯ ಅನ್ನೋದು ಗೊತ್ತಾಗಿದೆ. ಮಂಗಳನ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದ MOXIE ಅಂದ್ರೆ Mars Oxygen In-Situ Resource Utilisation Experiment ತನ್ನ ಆಪರೇಷನ್‌ಗಳನ್ನ ಸಕ್ಸಸ್‌ಫುಲ್‌ ಆಗಿ ಕಂಪ್ಲೀಟ್‌ ಮಾಡಿದೆ. ಈ ಡಿವೈಸ್‌ 2021ರಲ್ಲಿ ನಾಸಾ ಕಳಿಸಿದ್ದ ರೋವರ್‌, ಲ್ಯಾಂಡ್‌ ಆದಗಿನಿಂದಲೂ ಆಕ್ಸಿಜನ್‌ನ್ನ ಪ್ರೊಡ್ಯೂಸ್‌ ಮಾಡ್ತಿದೆ. ಈಗ ಒಟ್ಟು 122 ಗ್ರಾಮ್‌ ಆಕ್ಸಿಜನ್‌ನ್ನ ಉತ್ಪಾದಿಸಿದ್ದು, 98% ಉತ್ತಮ ಗುಣಮಟ್ಟವನ್ನ ಹೊಂದಿದೆ. ಜೊತೆಗೆ ಈ ಆಕ್ಸಿಜನ್‌ ಉಸಿರಾಟ ಹಾಗೂ ಇಂಧನ ಸೇರಿ ಎರಡೂ ಉದ್ಧೇಶಗಳಿಗೂ ಬಳಸಲು ಸೂಕ್ತವಾಗಿದೆ ಅಂತ ನಾಸಾ ಹೇಳಿದೆ.

-masthmagaa.com

Contact Us for Advertisement

Leave a Reply