ಮಯನ್ಮಾರ್​​ನಲ್ಲಿ 30 ಮಂದಿಯನ್ನು ಹತ್ಯೆ ಮಾಡಿ, ಸುಟ್ಟ ಸೇನೆ!

masthmagaa.com:

ಮಯನ್ಮಾರ್​​ನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 30 ಮಂದಿಯನ್ನು ಹತ್ಯೆ ಮಾಡಿ, ಅವರ ಮೃತದೇಹಗಳನ್ನು ಸುಟ್ಟು ಹಾಕಲಾಗಿದೆ. ಮಯನ್ಮಾರ್​​​​ನ ಸಂಘರ್ಷದಿಂದ ಕೂಡಿದ ಜಾಗವಾದ ಕಯಾಹ್​​ನಲ್ಲಿ ಈ ಘಟನೆ ನಡೆದಿದೆ ಅಂತ ಕರೆನ್ನಿ ಹ್ಯೂಮನ್ ರೈಟ್ಸ್​ ಗ್ರೂಪ್ ತಿಳಿಸಿದೆ. ಜೊತೆಗೆ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಈ ರೀತಿಯ ಅಮಾನವೀಯ ಮತ್ತು ಭಯಾನಕ ಹತ್ಯೆಯನ್ನು ನಾವು ಖಂಡಿಸ್ತೀವಿ. ಇದು ಮಾನವ ಹಕ್ಕುಗಳ ಉಲ್ಲಂಘನೆ ಅಂತ ಕಿಡಿಕಾರಿದೆ. ಆದ್ರೆ ಸೇನೆ ಮಾತ್ರ ನಾವು ಗ್ರಾಮದಲ್ಲಿ ಶಸ್ತ್ರಸಜ್ಜಿತ ಉಗ್ರರನ್ನು ಹೊಡೆದುರುಳಿಸಿದ್ದೀವಿ ಅಷ್ಟೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply