2050ರ ವೇಳೆಗೆ 50 ಕೋಟಿಯಷ್ಟು ಜನರಿಗೆ ಆಗಲಿದೆ ನೀರಿನ ತೊಂದ್ರೆ!

masthmagaa.com:

2050ರ ವೇಳೆ ವಿಶ್ವದ ಸುಮಾರು 500 ಕೋಟಿಯಷ್ಟು ಜನರಿಗೆ ನೀರು ಸಿಗೋದಿಲ್ಲ ಅಂತ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ವಿಶ್ವದ ನಾಯಕರು ಅಗತ್ಯ ಕ್ರಮ ಕೈಗೊಳ್ಳಬೇಕು ಅಂತ ಕೂಡ ಸಲಹೆ ನೀಡಿದೆ. 2018ರಲ್ಲಿ 360 ಕೋಟಿ ಜನರು ವರ್ಷದಲ್ಲಿ ಕನಿಷ್ಠ ಒಂದು ತಿಂಗಳ ಮಟ್ಟಿಗಾದ್ರೂ ನೀರಿನ ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ಹತ್ತಿರದಲ್ಲೇ ಇರೋ ನೀರಿನ ಗಂಡಾಂತರ ಎದುರಿಸಲು ಸಿದ್ಧರಾಗಬೇಕು ಅಂತ ವಿಶ್ವ ಹವಾಮಾನ ಸಂಸ್ಥೆಯ ಮುಖ್ಯಸ್ಥ ಪೆಟ್ಟೇರಿ ಟಲಾಸ್ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply