ದಕ್ಷಿಣ ಸುಡಾನ್‌ನಲ್ಲಿರೊ ಭಾರತೀಯ ಶಾಂತಿಪಾಲಕರಿಗೆ UN ಪದಕ !

masthmagaa.coom:

ದಕ್ಷಿಣ ಸುಡಾನ್‌ನಲ್ಲಿ ಯುನೈಟೆಡ್ ನೇಷನ್ಸ್ ಮಿಷನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ 1,100 ಕ್ಕೂ ಹೆಚ್ಚು ಭಾರತೀಯ ಶಾಂತಿಪಾಲಕರಿಗೆ UN ಪದಕಗಳನ್ನು ನೀಡಲಾಗಿದೆ. ಅಂದ್ಹಾಗೆ ದಕ್ಷಿಣ ಸುಡಾನ್‌ 2013 ಮತ್ತು 2018 ರಲ್ಲಿ ಭೀಕರ ನಾಗರಿಕ ಯುದ್ದವನ್ನ ಕಂಡಿತ್ತು. ಅದ್ರಲ್ಲಿ ಸುಮಾರು 40,000 ದಷ್ಟು ಜನ್ರು ಮೃತಪಟ್ಟಿದ್ರು ಮತ್ತು ಲಕ್ಷಾಂತರ ಜನ್ರನ್ನ ಸ್ಥಳಾಂತರಗೊಳಿಸಲಾಗಿತ್ತು. ಅ ನಂತ್ರ ದಕ್ಷಿಣ ಸುಡಾನ್‌ನಲ್ಲಿ ಯುದ್ದ ತಡೆಯಲು, ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪಿಸೋಕೆ, UN ಶಾಂತಿಪಾಲನಾ ಮಿಷನ್‌ ಅನ್ನ ಜಾರಿಗೊಳಿಸಿತು. ಹೀಗೆ ಕಲಹ ಮತ್ತು ಹಾನಿಗೊಳಗಾದ ದೇಶದಲ್ಲಿ ಶಾಂತಿಪಾಲಕರ ಅಸಾಧಾರಣ ಸೇವೆಗಾಗಿ ಅವ್ರನ್ನ ಗೌರವಿಸಲಾಗಿದೆ.

-masthmagaa.com

Contact Us for Advertisement

Leave a Reply