ದೇಶದಲ್ಲಿ ಕೊರೋನಾ ಅವಧಿಯಲ್ಲಿ ಹೆಚ್ಚಾಯ್ತಾ ಶ್ರೀಮಂತರ ಸಂಖ್ಯೆ?

masthmagaa.com:

ಮಧ್ಯಮ ಮತ್ತು ಕೆಳವರ್ಗದವರ ಮೇಲಿನ ಕೊರೋನಾ ಕರಿ ನೆರಳು ಇನ್ನೂ ಸಂಪೂರ್ಣವಾಗಿ ಮಾಯವಾಗಿಲ್ಲ. ಆದ್ರೆ ಈ ಕೊರೋನಾ ಅವಧಿಯಲ್ಲಿ ಯಾರೆಲ್ಲಾ ಜಾಸ್ತಿ ಶ್ರೀಮಂತರಾಗಿದ್ದಾರೆ.. ಯಾರೆಲ್ಲಾ ಬಡವರಾಗಿದ್ದಾರೆ ಅಂತ ಅಂತಾರಾಷ್ಟ್ರೀಯ ಚಾರಿಟಿ ಸಂಸ್ಥೆ ಆಕ್ಸ್​​ಫಮ್​ ನಡೆಸಿರೋ ಅಧ್ಯಯನ ಹೇಳಿದೆ. ಆಕ್ಸ್’ಫ್ಯಾಮ್ ಒಂದು ಲೆಫ್ಟ್ ವಿಂಗ್ ಐಡಿಯಾಲಜಿಯ, ಅಂದ್ರೆ ಎಡಪಂತೀಯ ವಿಚಾರಧಾರೆಗಳ ಪ್ರತಿಪಾದಕ ಅಂತ ಇದರ ಹುಟ್ಟೂರು ಬ್ರಿಟನ್ ಸೇರಿ ವಿಶ್ವದ ಹಲವು ದೇಶಗಳಲ್ಲಿ ಆರೋಪ ಇದೆ. ಆದ್ರೂ ಇವರು ಸಾಕಷ್ಟು ಉತ್ತಮ ಸಮಾಜ ಸೇವೆಯ ಕೆಲಸ ಕೂಡ ಮಾಡಿದ್ದಾರೆ. ಹೀಗಾಗಿ ಇವರ ಸಿದ್ದಾಂತದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಜಸ್ಟ್ ಇವರು ಮುಂದಿಟ್ಟಿರೋ ಡೇಟಾ ಬಗ್ಗೆ ಮಾತ್ರ ನೋಡಣ. ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಶತಕೋಟಿ ಕುಳಗಳ ಒಟ್ಟು ಆಸ್ತಿ 23.4 ಲಕ್ಷ ಕೋಟಿ ಇದ್ದಿದ್ದು, ಈಗ 53.28 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಆಗಿದೆ., ಇದು ದೇಶದ ಬಡವರ್ಗದ 55 ಕೋಟಿ ಜನರ ಒಟ್ಟು ಆಸ್ತಿಗೆ ಸಮನಾಗಿದೆ ಅಂತ ಗೊತ್ತಾಗಿದೆ. ಭಾರತದಲ್ಲಿ ನಗರ ಭಾಗದಲ್ಲಿ ಮೇ ತಿಂಗಳಲ್ಲಿ ನಿರುದ್ಯೋಗ 15 ಪರ್ಸೆಂಟ್ ಏರಿಕೆಯಾಗಿದೆ. ಆಹಾರದ ಕೊರತೆ ಎದುರಿಸುತ್ತಿದೆ. ಇವೆಲ್ಲದ್ರ ನಡುವೆಯೂ ಈಗ ಫ್ರಾನ್ಸ್​, ಸ್ವೀಡನ್, ಸ್ವಿಜರ್​ಲ್ಯಾಂಡ್​ ಒಟ್ಟಿಗೆ ಸೇರಿಸಿದ್ರೆ ಎಷ್ಟು ಮಂದಿ ಕೋಟಿ ಕುಳಗಳಿದಾರೋ ಅದಕ್ಕಿಂತಲೂ ಜಾಸ್ತಿ ಶತಕೋಟಿ ಕುಳಗಳು ಭಾರತದಲ್ಲಿದ್ದಾರೆ ಅಂತ ಗೊತ್ತಾಗಿದೆ. 2016ರ ಬಳಿಕ ಸಂಪತ್ತಿನ ತೆರಿಗೆ ಮತ್ತು ಕಾರ್ಪೊರೇಟ್ ಟ್ಯಾಕ್ಸ್ ಕಡಿಮೆ ಮಾಮಾಡಲಾಗಿದೆ. ಬದಲಿಗೆ ಪರೋಕ್ಷ ತೆರಿಗೆಯನ್ನು ಜಾಸ್ತಿ ಮಾಡಲಾಗಿದೆ. ಇದು ಕೂಡ ಶ್ರೀಮಂತರು ಶ್ರೀಮಂತರಾಗುತ್ತಲೇ ಸಾಗಲು ಕಾರಣವಾಯ್ತು. ಸಾಮಾನ್ಯ ಜನರು ಮಾತ್ರ ಜಾಸ್ತಿ ತೆರಿಗೆ ಕಟ್ಟುವಂತಾಯ್ತು ಅಂತ ಕೂಡ ಹೇಳಲಾಗ್ತಿದೆ. ಹೀಗಾಗಿ ಸರ್ಕಾರ ದೇಶದ ಟಾಪ್ ಶ್ರೀಮಂತರ ಮೇಲೆ 1 ಪರ್ಸೆಂಟ್ ಹೆಚ್ಚುವರಿ ಟ್ಯಾಕ್ಸ್ ಹಾಕಬೇಕು. ಅ ದುಡ್ಡನ್ನು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಅಂತ ಆಕ್ಸ್’ಫ್ಯಾಮ್ ವರದಿ ಹೇಳಿದೆ. ಜೊತೆಗೆ ಇದಕ್ಕೆಲ್ಲ ಭಾರತದ ವ್ಯವಸ್ಥೆಯೇ ಕಾರಣ… ಈ ವ್ಯವಸ್ಥೆ ಶ್ರೀಮಂತರ ನಿಯಂತ್ರಣದಲ್ಲಿದೆ. ಇಲ್ಲಿ ಎಲ್ಲವೂ ಶ್ರೀಮಂತರ ಅನುಕೂಲಕ್ಕೆ ತಕ್ಕಂತೆ ನಡೆಯುತ್ತೆ ಆರೋಪಿಸಿದೆ ಆಕ್ಸ್’ಫ್ಯಾಮ್. ಇವ್ರು ಎಡಪಂತೀಯರು ಅದಕ್ಕೆ ಹೀಗ್ ಹೇಳ್ತಿದಾರೆ ಅಂತ ಟೀಕೆ ಬಂದೇ ಬರುತ್ತೆ ಅಂತ ಇವರಿಗೆ ಗೊತ್ತಿತ್ತು ಅನ್ಸತ್ತೆ. ಅದಕ್ಕೆ ತಮ್ಮ ವಾದಕ್ಕೆ ಆಧಾರವಾಗಿ ಕೆಲ ಖ್ಯಾತನಾಮರ ಹೇಳಿಕೆಗಳನ್ನ ತಗೊಂಡಿದ್ದಾರೆ. ಮೊದಲ ಹೇಳಿಕೆ ಯಾರದ್ದು ಗೊತ್ತಾ? RSS ಮುಖ್ಯಸ್ಥ ಮೋಹನ್ ಭಾಗವತ್ ಅವರದ್ದು.

‘2019ರಲ್ಲಿ ಮಾತನಾಡಿದ್ದ RSS ಮೋಹನ್ ಭಾಗವತ್ ಅವರೂ ಅಸಮಾನತೆ ಬಗ್ಗೆ ಮಾತನಾಡಿದ್ದರು. ದೊಡ್ಡ ಪ್ರಮಾಣದ ಆರ್ಥಿಕ ಪ್ರಗತಿ ಆಗಿದೆ. ಆದರೆ ಈಗಲೂ ಶ್ರೀಮಂತಿಕೆ ಅನ್ನೋದು ಕೆಲವೇ ಕೆಲವರ ನಿಯಂತ್ರಣದಲ್ಲಿದೆ ಅಂತ ಮೋಹನ್ ಭಾಗವತ್ ಹೇಳಿದ್ದರು.’
-OXFAM ವರದಿ’

-masthmagaa.com

Contact Us for Advertisement

Leave a Reply