ಅಸ್ಟ್ರಾಜೆನೆಕಾ ಲಸಿಕೆ ಪ್ರಯೋಗ ಪುನಾರಂಭಕ್ಕೆ ಗ್ರೀನ್ ಸಿಗ್ನಲ್

masthmagaa.com:

ಕೋವಿಡ್-19 ಲಸಿಕೆಯ ಪ್ರಯೋಗವನ್ನು ಮುಂದುವರಿಸೋದಾಗಿ ಅಸ್ಟ್ರಾಜೆನೆಕಾ ತಿಳಿಸಿದೆ. ಅಸ್ಟ್ರಾಜೆನೆಕಾ ಮತ್ತು ಆಕ್ಸ್​ಫರ್ಡ್​​​ ಸಹಯೋಗದಲ್ಲಿ ಅಭಿವೃದ್ಧಿಪಡಿಸ್ತಿದ್ದ ಕೊರೋನಾ ಲಸಿಕೆಯ ಪ್ರಯೋಗ 3ನೇ ಹಂತದಲ್ಲಿದೆ. ಆದ್ರೆ ಲಸಿಕೆ ಹಾಕಿಸಿಕೊಂಡ ಸ್ವಯಂ ಸೇವಕರಲ್ಲಿ ಒಬ್ಬರಿಗೆ ವಿವರಿಸಲಾಗದ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಯೋಗವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮೆಡಿಸಿನ್ಸ್​ ಹೆಲ್ತ್ ರೆಗ್ಯುಲೇಟರಿ ಅಥಾರಿಟಿ ಲಸಿಕೆ ಸುರಕ್ಷಿತವಾಗಿದೆ ಎಂದು ಗ್ರೀನ್ ಸಿಗ್ನಲ್ ನೀಡಿದ್ದರಿಂದ ಪುನಃ ಪ್ರಯೋಗ ಆರಂಭಿಸೋದಾಗಿ ಅಸ್ಟ್ರಾಜೆನೆಕಾ ತಿಳಿಸಿದೆ.

ಅಸ್ಟ್ರಾಜೆನೆಕಾ ಪ್ರಯೋಗ ನಿಲ್ಲಿಸಿದ ಬೆನ್ನಲ್ಲೇ ಭಾರತದಲ್ಲಿ ಈ ಲಸಿಕೆ ಪ್ರಯೋಗ ನಡೆಸುತ್ತಿರುವ ಸೀರಂ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ಪ್ರಯೋಗವನ್ನು ನಿಲ್ಲಿಸಿತ್ತು. ಅದ್ರ ಬೆನ್ನಲ್ಲೇ ಇಂದು ಡ್ರಗ್ಸ್​ ಕಂಟ್ರೋಲರ್ ಜೆನೆರಲ್ ಆಫ್ ಇಂಡಿಯಾ ಕೂಡ ಸೀರಂ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯಾಗೆ ನೋಟಿಸ್ ನೀಡಿ, ಮತ್ತು 3ನೇ ಹಂತದ ಮಾನವ ಪ್ರಯೋಗಗಳಿಗೆ ಹೊಸದಾಗಿ ನೇಮಕಾತಿ ಮಾಡಿಕೊಳ್ಳದಂತೆಯೂ ಸೂಚಿಸಿತ್ತು.

-masthmagaa.com

Contact Us for Advertisement

Leave a Reply