ಭಾರತಕ್ಕೆ ನುಸುಳಲು 4 ಸಾವಿರ ಉಗ್ರರು ರೆಡಿ..! ಶಾಕಿಂಗ್ ರಿಪೋರ್ಟ್…

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮುಗಿದ ಬಳಿಕ ಗಡಿ ನಿಯಂತ್ರಣ ರೇಖೆ ಬಳಿ ದೊಡ್ಡ ದುಷ್ಕøತ್ಯ ಎಸಗಲು ಪಾಕಿಸ್ತಾನ ಸಿದ್ಧವಾಗಿದೆ. ಈಗಾಗಲೇ ಗಡಿ ನಿಯಂತ್ರಣ ರೇಖೆ ಬಳಿ ಸಿದ್ಧತೆ ಆರಂಭಿಸಿದ್ದು, ನಾಗರಿಕರನ್ನು ಬಳಸಿ ದಾಳಿ ನಡೆಸಬಹುದು ಎಂದು ಕೇಂದ್ರ ಗುಪ್ತಚರ ಇಲಾಖೆ ಸೇನೆಗೆ ಎಚ್ಚರಿಸಿದೆ. ಪಾಕಿಸ್ತಾನ ಸೇನೆ ಮತ್ತು ಜಮಾತ್ ಉಲ್ ಅಲ್ ಹದೀಸ್ ಉಗ್ರ ಸಂಘಟನೆಯ 3 ಸಾವಿರದಿಂದ 4 ಸಾವಿರ ಯುವಕರು ಅಕ್ಟೋಬರ್ ಮೊದಲ ವಾರದಲ್ಲಿ ಭಾರತದ ಗಡಿ ನುಸುಳಲು ಸಿದ್ಧವಾಗಿದ್ದಾರೆ. ಇವರಿಗೆ ಒಂದು ತಿಂಗಳ ಕಾಲ ತರಬೇತಿ ನೀಡಲಾಗಿದೆ. ಜಮಾತ್ ಉಲ್ ಅಲ್ ಹದೀಸ್ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಸ್ಥಾಪಿಸಿದ ಹೊಸ ಉಗ್ರ ಸಂಘಟನೆಯಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಬಂದು ಸೇನೆ ವಿರುದ್ಧ ದಾಳಿ ನಡೆಸಿ, ಸೇನೆಯೂ ಅವರ ಮೇಲೆ ದಾಳಿ ನಡೆಸುವಂತೆ ಪ್ರಚೋದಿಸೋದು. ಈ ಮೂಲಕ ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹಿಂಸಾಚಾರವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯೋದು ಪಾಕ್ ಉದ್ದೇಶವಾಗಿದೆ.

Contact Us for Advertisement

Leave a Reply