ಟಿಟಿಪಿ ಉಗ್ರರ ದಾಳಿಗೆ ಪಾಕಿಸ್ತಾನದ ಸೇನಾ ಕ್ಯಾಪ್ಟನ್ ಹತ್ಯೆ

masthmagaa.com:

ಪಾಕಿಸ್ತಾನದಲ್ಲಿ ಟಿಟಿಪಿ ಅಂದ್ರೆ ತೆಹ್ರೀಕ್ ಇ ತಾಲಿಬಾನ್ ಹಾವಳಿ ಮುಂದುವರಿದಿದೆ. ಅಫ್ಘಾನಿಸ್ತಾನದ ಗಡಿಯಲ್ಲಿರೋ ವಜಿರಿಸ್ತಾನ್​ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 27 ವರ್ಷದ ಕ್ಯಾಪ್ಟನ್ ಸಿಕಂದರ್ ಪ್ರಾಣ ಕಳ್ಕೊಂಡಿದ್ದಾರೆ ಅಂತ ಸೇನೆ ಮಾಹಿತಿ ನೀಡಿದೆ. ಇಲ್ಲಿ ಉಗ್ರರಿರೋ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಕಾರ್ಯಾಚರಣೆಗೆ ನಡೆಸಲಾಯ್ತು. ಈ ವೇಳೆ ಉಗ್ರರು ಮತ್ತು ಸೇನೆ ನಡುವೆ ಗುಂಡಿನ ಚಕಮಕಿ ನಡೀತು. ಆಗ ಪಂಜಾಬ್ ಮೂಲದ ಸಿಕಂದರ್ ಪ್ರಾಣ ಬಿಟ್ಟಿದ್ದಾರೆ. ಟಿಟಿಪಿಯ ಕಮಾಂಡರ್ ಖವಾಜಾ ದಿನ್ ಅಲಿಯಾಸ್ ಶೇರ್ ಖಾನ್ ಕೂಡ ಪ್ರಾಣ ಬಿಟ್ಟಿದ್ದಾರೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ.. ಮಂಗಳವಾರದಿಂದ ನಡೆದ ಒಟ್ಟಾರೆ ಕಾಯಾಚರಣೆಯಲ್ಲಿ ಉಗ್ರ ಸಂಘಟನೆಯ ನಾಲ್ವರು ಕಮಾಂಡರ್​ಗಳು ಸೇರಿದಂತೆ 10 ಮಂದಿ ಉಗ್ರರನ್ನು ಹೊಡೆದು ಹಾಕಿದ್ದೀವಿ ಅಂತ ತಿಳಿಸಿದೆ. ಅಂದಾಗೆ ಅಫ್ಘಾನಿಸ್ತಾನ ಗಡಿಯಲ್ಲಿ ಆಕ್ಟಿವ್ ಆಗಿರೋ ಈ ಉಗ್ರ ಸಂಘಟನೆ ಪಾಕಿಸ್ತಾನದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಅದ್ರಲ್ಲೂ ಆಗಸ್ಟ್ 15ರಂದು ಅಫ್ಘಾನಿಸ್ತಾದಲ್ಲಿ ತಾಲಿಬಾನಿಗಳು ಅಧಿಕಾರ ವಶಕ್ಕೆ ಪಡೆದ ಬಳಿಕವಂತೂ ಈ ದಾಳಿಯ ಪ್ರಮಾಣ ಜಾಸ್ತಿಯಾಗಿದೆ.

ಮತ್ತೊಂದ್ಕಡೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಕೂಡ ಜಾಸ್ತಿಯಾಗುತ್ತಲೇ ಇದೆ. ಇದೀಗ ಸಿಖ್ ಸಮುದಾಯದ ಸತ್ನಾಂ ಸಿಂಗ್ ಅನ್ನೋರನ್ನ ಪೇಶಾವರದಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಹೀಗಾಗಿ ನಮಗೆ ರಕ್ಷಣೆ ನೀಡ್ಬೇಕು ಅಂತ ಪಾಕ್ ಸರ್ಕಾರದ ಬಳಿ ಸಿಖ್ ಸಮುದಾಯ ಮನವಿ ಮಾಡಿದೆ.

-masthmagaa.com

Contact Us for Advertisement

Leave a Reply