ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯ ಹತ್ಯೆ!

masthmagaa.com:

ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದ ಸಿಕ್ಕರ್​​ ಎಂಬಲ್ಲಿ ಹಿಂದೂ ಯುವತಿಯ ಹತ್ಯೆಯಾಗಿದೆ. ಕೊಲೆಯಾದ ಯುವತಿಯನ್ನ 18 ವರ್ಷದ ಪೂಜಾ ಓದ್‌ ಅಂತ ಗುರ್ತಿಸಲಾಗಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದು ಮತ್ತು ಕ್ರಿಶ್ಚಿಯನ್‌ ಸಮುದಾಯದ ಹುಡುಗಿಯರನ್ನು ಅಪಹರಣ ಮಾಡಿ, ಬಲವಂತವಾಗಿ ಮತಾಂತರ ಮಾಡಲಾಗ್ತಿದೆ ಅಂತ ಆರೋಪ ಕೇಳಿ ಬರ್ತಿದೆ. ಅದೇ ರೀತಿ ಈ ಯುವತಿಯನ್ನು ಕೂಡ ಅಪಹರಣ ಮಾಡಲಾಗಿತ್ತು. ಆದ್ರೆ ಈಕೆ ಅಪಹರಣಕಾರರಿಂದ ತಪ್ಪಿಸಿಕೊಂಡು ಬರುವಾಗ ಗುಂಡಿನ ದಾಳಿ ನಡೆಸಲಾಗಿದೆ. ಇದ್ರಿಂದ ಯುವತಿ ಪ್ರಾಣ ಕಳ್ಕೊಂಡಿದ್ದಾಳೆ. ಹೀಗಾಗಿ ಅಪಹರಣಕಾರರು ಈಕೆಯನ್ನು ರಸ್ತೆ ಮಧ್ಯದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಕಳೆದ ಶುಕ್ರವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇನ್ನುಈ ಬಗ್ಗೆ ಹಲವು ಮಾನವ ಹಕ್ಕು ಸಂಘಟನೆಗಳು ಘಟನೆಯನ್ನು ಖಂಡಿಸಿದ್ದು, ಪಾಕ್‌ ಸರ್ಕಾರದ ವಿರುದ್ದ ಕಿಡಿಕಾರಿವೆ. ಅಂದಹಾಗೆ ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ 1.60 ಪರ್ಸೆಂಟ್​​ನಷ್ಟು ಹಿಂದೂ ಧರ್ಮದವರಿದ್ದು ಪಂಜಾಬ್‌ ಪ್ರಾಂತ್ಯದಲ್ಲಿ 6.51 ಪರ್ಸೆಂಟ್ ಹಿಂದೂಗಳು ವಾಸವಾಗಿದ್ದಾರೆ.

-masthmagaa.com

Contact Us for Advertisement

Leave a Reply