ನವಾಜ್‌ ಶರೀಫ್‌ 4ನೇ ಬಾರಿ ಪಾಕ್‌ ಪ್ರಧಾನಿಯಾಬೇಕು: ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್

masthmagaa.com:

ಪಾಕಿಸ್ತಾನದಲ್ಲಿ ಪ್ರಮುಖ ರಾಜಕೀಯ ಬೆಳವಳಿಗೆಯಾಗ್ತಿದ್ದು, ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌ (PML-N) ಮುಖ್ಯಸ್ಥ ನವಾಜ್‌ ಶರೀಫ್‌ ಪಾಕಿಸ್ತಾನಕ್ಕೆ ವಾಪಾಸ್‌ ಬರಬೇಕು. ಬಂದು ಮುಂದಿನ ಜನರಲ್‌ ಎಲೆಕ್ಶನ್‌ಗೆ ಅಭಿಯಾನ ಮಾಡಬೇಕು ಹಾಗೂ 4ನೇ ಬಾರಿ ಪಾಕ್‌ನ ಪ್ರಧಾನಿಯಾಗಬೇಕು ಅಂತ ಪ್ರಸ್ತುತ ಪಾಕ್‌ ಪ್ರಧಾನಿ ಹಾಗೂ ನವಾಜ್‌ ಶರೀಫ್‌ರ ಸಹೋದರ ಶೆಹಬಾಜ್‌ ಶರೀಫ್‌ ಹೇಳಿದ್ದಾರೆ. ಸೆಂಟ್ರಲ್‌ ಜನರಲ್‌ ಕೌನ್ಸಿಲ್‌ ಸಭೆಯನ್ನ ಉದ್ದೇಶಿಸಿ ಮಾತಾಡಿದ ಶೆಹಬಾಜ್‌, ತಮ್ಮ ಹಿರಿಯ ಸಹೋದರ ನವಾಜ್‌ ಶರೀಫ್‌ ಪಾಕಿಸ್ತಾನಕ್ಕೆ ವಾಪಸ್‌ ಆದಾಗ ಪಕ್ಷದ ಸಭೆ ಮಾಡಿ, ಪಕ್ಷದ ಅಧ್ಯಕ್ಷತೆಯನ್ನ ಅವ್ರಿಗೆ ವಾಪಸ್‌ ನೀಡೋಕೆ ಕಾಯ್ತಾ ಇದೀನಿ ಎಂದಿದ್ದಾರೆ. ಅದೇ ನವಾಜ್‌ ಶರೀಫ್‌ ವಾಪಾಸ್‌ ಬಂದ್ರೆ ರಾಜಕೀಯದ ಮ್ಯಾಪ್‌ ಹೇಗೆ ಚೇಂಜ್‌ ಆಗುತ್ತೆ ಅಂತ ನೀವು ನೋಡಬಹುದು ಅಂತ ಸಭೆಗೆ ಹಾಜರಾಗಿದ್ದ ಪಕ್ಷದ ನಾಯಕರಿಗೆ ಹೇಳಿದ್ದಾರೆ. ಅಂದ್ಹಾಗೆ ಪನಾಮ ಪೇಪರ್ಸ್‌ ಕೇಸ್‌ನಲ್ಲಿ ಪಾಕ್‌ ಸುಪ್ರೀಂಕೋರ್ಟ್‌ ನವಾಜ್‌ ಶರೀಫ್‌ ಅವ್ರನ್ನ ಯಾವುದೇ ಅಧಿಕಾರ ಹೊಂದಲು 2017ರಲ್ಲಿ ಅನರ್ಹಗೊಳಿಸಿದೆ. ಬಳಿಕ 2019ರಿಂದ ಆರೋಗ್ಯದ ಕಾರಣ ನೀಡಿ ನವಾಜ್ ಲಂಡನ್‌ನಲ್ಲಿ ವಾಸವಾಗಿದ್ದಾರೆ. ಇನ್ನೊಂದ್ ಕಡೆ ಆರ್ಥಿಕ ಸಂಕಷ್ಟದಲ್ಲಿರೊ ಪಾಕ್‌ಗೆ ಚೀನಾದಿಂದ ಬಿಗ್‌ ರಿಲೀಫ್‌ ಸಿಕ್ಕಿದೆ. 1 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 8200 ಕೋಟಿ ರೂಪಾಯಿ ಹಣವನ್ನ ಚೀನಾದಿಂದ ಪಾಕ್‌ ಪಡೆದುಕೊಂಡಿದೆ. IMF ಹಣವನ್ನ ನೀಡಲು ಲೇಟ್‌ ಮಾಡ್ತಿರೋ ಹೊತ್ತಲ್ಲಿ ಈ ಹಣ ಪಾಕ್‌ ಪಾಲಿಗೆ ‌ಪ್ರಾಣ ಉಳಿಸೋ ಸಂಜೀವಿನಿ ಆಗಿದೆ.

-masthmagaa.com

Contact Us for Advertisement

Leave a Reply