13 ವರ್ಷಗಳಿಂದ ಕದ್ದು ಕೂತಿದ್ದ ‘ಉಗ್ರ ಇಲಿ’ ಪತ್ತೆ

masthmagaa.com:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಾಕಿಸ್ತಾನ ಮೂಲದ ಉಗ್ರನನ್ನ ಅರೆಸ್ಟ್ ಮಾಡಲಾಗಿದೆ. ಈತನ ಹೆಸರು ಮೊಹಮ್ಮದ್ ಅಶ್ರಫ್​ ಅಂತ. ಈತ ಪಾಕಿಸ್ತಾನದ ಪಂಜಾಬ್ ಮೂಲದವನು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​​ಐ ಈತನನ್ನ ಬಾಂಗ್ಲಾದೇಶದಿಂದ ಭಾರತಕ್ಕೆ ಕಳಿಸಿದೆ. ಕಳೆದ 13 ವರ್ಷದಿಂದ ಭಾರತದಲ್ಲಿ ವಾಸವಿರೋ ಈತ ಸ್ಲೀಪರ್ ಸೆಲ್​ ರೀತಿ ಇದ್ದ. ಡಾಕುಮೆಂಟ್ಸ್​ಗಾಗಿ ಭಾರತ ಮೂಲದ ಮಹಿಳೆಯನ್ನ ಮದ್ವೆಯಾಗಿದ್ದ. ಬೇರೆ ಹೆಸರಿನಲ್ಲಿ ಫೇಕ್ ಐಡಿ ಕಾರ್ಡ್​ಗಳನ್ನ ಹೊಂದಿದ್ದ. ಅದರಲ್ಲಿ ಆಧಾರ್ ಕಾರ್ಡ್, ಭಾರತದ ಪಾಸ್​ಪೋರ್ಟ್ ಕೂಡ ಸೇರಿವೆ. ಥೈಲ್ಯಾಂಡ್​, ಸೌದಿ ಅರೇಬಿಯಾಗೆಲ್ಲಾ ಹೋಗಿ ಬಂದಿದ್ದಾನೆ. ಈತನ ಬಳಿಯಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ. ಹಬ್ಬಕ್ಕೂ ಮೊದಲು ಈತನನ್ನ ಅರೆಸ್ಟ್ ಮಾಡಿರೋದು ಒಳ್ಳೇದೇ ಆಯ್ತು. ಈ ಮೂಲಕ ದೊಡ್ಡ ಉಗ್ರ ಕೃತ್ಯವನ್ನ ನಾವು ತಪ್ಪಿಸಿದ್ದೀವಿ ಅಂತ ದೆಹಲಿ ಪೊಲೀಸರ ಸ್ಪೆಷಲ್ ಸೆಲ್​ ಹೇಳಿದೆ. ವಿಚಾರಣೆ ವೇಳೆ ಜಮ್ಮು ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾಗಿ ಹೇಳಿದ್ದಾನೆ. ಈತನಿಗೆ ಐಎಸ್​​ಐ ಟ್ರೈನಿಂಗ್ ನೀಡಿದೆ. ಈತನ ಇತರ ಸಹಚರರಿಗಾಗಿ ಹುಡುಕಾಟ ನಡೆಸಲಾಗ್ತಿದೆ. ಪಾಕಿಸ್ತಾನ ಮೂಲದ ಈ ಉಗ್ರನನ್ನ 14 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply