1971ರಲ್ಲಿ ಬಾಂಗ್ಲಾದಲ್ಲಿ ನಡೆದ ನರಮೇಧ ಹೇಗಿತ್ತು ಗೊತ್ತಾ..?

masthmagaa.com:

1971ರಲ್ಲಿ ಪಾಕಿಸ್ತಾನ ಅಂದಿನ ಪೂರ್ವ ಪಾಕಿಸ್ತಾನ ಅಂದ್ರೆ ಇಂದಿನ ಬಾಂಗ್ಲಾದೇಶದಲ್ಲಿ ನಡೆಸಿದ್ದ ನರಸಂಹಾರದ ಕುರಿತು ಹಿಂದೂ ಅಮೆರಿಕನ್ ಫೌಂಡೇಶನ್ ಅನ್ನೋ ಒಂದು ಸಂಸ್ಥೆ ವೆಬ್​ಸೈಟ್ ಲಾಂಚ್ ಮಾಡಿ, ಮಾಹಿತಿ ನೀಡಿದೆ. ಆದ್ರೆ ಇದ್ರಿಂದ ಪಾಕಿಸ್ತಾನ ರೊಚ್ಚಿಗೆದ್ದಿದ್ದು, ಈ ಸಂಸ್ಥೆಗೆ ಬೆದರಿಕೆ ಒಡ್ಡೋಕೆ ಶುರು ಮಾಡಿದೆ. ಪಾಕಿಸ್ತಾನದ ಟೆಲಿ ಕಮ್ಯೂನಿಕೇಷನ್ ಅಥಾರಿಟಿ ಅಂದ್ರೆ ವೆಬ್ ಅನಾಲಿಸಿಸ್ ಡಿವಿಷನ್​ ಈ ಸಂಸ್ಥೆಗೆ ಕರೆ ಮಾಡಿದ್ದು, ಈಗಿಂದೀಗಲೇ ಬೆಂಗಾಲಿ ನರಮೇಧ ಕುರಿತ ವೆಬ್​ ಪೇಜ್​ನ್ನು ತೆಗೆದು ಹಾಕುವಂತೆ ಒತ್ತಾಯಿಸಿದೆ. ಈ ವೆಬ್​ಪೇಜ್​ನಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಪಶ್ಚಿಮ ಪಾಕಿಸ್ತಾನದಿಂದ ನೇಮಕವಾಗ್ತಿದ್ದ ಮಿಲಿಟರಿ ಅಧಿಕಾರಿಗಳು ಯಾವೆಲ್ಲಾ ರೀತಿ ದಬ್ಬಾಳಿಕೆ ನಡೆಸಿದ್ರು ಅನ್ನೋದನ್ನ ಡೀಟೇಲಾಗಿ ಹೇಳಲಾಗಿದೆ. 1971ರ ಯುದ್ಧಕ್ಕೂ 10 ತಿಂಗಳ ಮುನ್ನ ಪೂರ್ವ ಪಾಕಿಸ್ತಾನದಲ್ಲಿ ಬಾಂಗ್ಲಾ ವಿಮೋಚನಾ ಚಳವಳಿ ಶುರುವಾಯ್ತು. ಆದ್ರೆ ಬಂಗಾಳಿಗರನ್ನ ಕಂಪ್ಲೀಟಾಗಿ ಸರ್ವನಾಶ ಮಾಡಿದ್ರೆ, ಈ ವಿಮೋಚನೆ ಚಳವಳಿಯನ್ನು ಹತ್ತಿಕ್ಕಬಹುದು ಅನ್ನೋದು ಪಾಕ್ ಸೇನಾ ಅಧಿಕಾರಿಗಳು ಭಾವಿಸಿದ್ರು. ಹೀಗಾಗಿ 1971ರ ಭಾರತ ಪಾಕಿಸ್ತಾನ ಯುದ್ಧ ಮುಗಿಯೋವರೆಗೂ, ಪಾಕ್ ಸೇನೆ ಸೋತು ಡಿಸೆಂಬರ್ 16ರಂದು ಭಾರತಕ್ಕೆ ಶರಣಾಗೋವರೆಗೂ ನರಸಂಹಾರ ನಡೆಸಿದ್ರು ಅಂತ ಈ ವರದಿಯಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ.. 15 ಲಕ್ಷ ಬಂಗಾಳಿಗಳನ್ನು ಸ್ಥಳಾಂತರ ಮಾಡಲಾಯ್ತು. ಇನ್ನುಳಿದಂತೆ 1 ಕೋಟಿಯಷ್ಟು ಹಿಂದೂಗಳು ಮತ್ತು ಬಂಗಾಳಿ ಮಾತನಾಡುವ ಮುಸ್ಲಿಮರು ಭಾರತಕ್ಕೆ ಓಡಿಹೋದ್ರು.. ಈ ಅವಧಿಯಲ್ಲಿ ಪಾಕ್ ಸೇನೆಯ ಈ ನರಮೇಧ, ಹಿಂಸಾಚಾರದಲ್ಲಿ 20ರಿಂದ 30 ಲಕ್ಷ ಮಂದಿ ಸಾವನ್ನಪ್ಪಿದ್ರು. 2ರಿಂದ 4 ಲಕ್ಷ ಮಹಿಳೆ ಮತ್ತು ಹೆಣ್ಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಅತ್ಯಾಚಾರ ಕ್ಯಾಂಪ್ ಮಾಡಿ, ದೊಡ್ಡ ಮಟ್ಟದಲ್ಲಿ ಅತ್ಯಾಚಾರ ನಡೆಸಲಾಗಿತ್ತು ಅಂತ ಈ ವರದಿಯಲ್ಲಿ ತಿಳಿಸಲಾಗಿದೆ. ಇದ್ರಿಂದ ಕೆರಳಿರೋ ಪಾಕ್, ನಿಮ್ಮ ವೆಬ್​ಸೈಟ್​​ನಲ್ಲಿ ನಮ್ಮ ಸೇನೆಯನ್ನು ನಗೆಪಾಟಲು ಮಾಡಲಾಗಿದ್ದು, ದೇಶದ ಸೇನೆಗೆ ಅವಮಾನ ಮಾಡಲಾಗಿದೆ. ಇದ್ರಿಂದ ಜನಸಾಮುದಾಯದಲ್ಲಿ ಅಶಾಂತಿಗೂ ಕಾರಣವಾಗಿದ್ದು, ದೇಶದ ಭದ್ರತೆಗೂ ಧಕ್ಕೆಯಾಗುತ್ತೆ ಅಂತ ಕಿಡಿಕಾರಿದೆ. ಆದ್ರೂ ಕೂಡ ಹಿಂದೂ ಅಮೆರಿಕನ್ ಫೌಂಡೇಷನ್ ಈ ವೆಬ್​​ಪೇಜ್​​ ತೆಗೆದು ಹಾಕದಿರಲು ನಿರ್ಧರಿಸಿದೆ. ಆದ್ರೆ ಪಾಕಿಸ್ತಾನದಲ್ಲಿ ಈ ವೆಬ್​ಪೇಜ್ ಓಪನ್ ಆಗದಂತೆ ಬ್ಲಾಕ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply