ಮತ್ತೆ 3 ಹೊಸ ಯೋಜನೆಗಳನ್ನ ಲಾಂಚ್‌ ಮಾಡಲಿವೆ ಚೀನಾ-ಪಾಕ್‌!

masthmagaa.com:

ಚೀನಾ ಸರ್ವಾಧಿಕಾರಿ ಷಿ ಜಿನ್‌ಪಿಂಗ್‌ ಮೂರನೇ ಅವಧಿಗೆ ಅಧ್ಯಕ್ಷ ಆಗ್ತಿರೋ ಹೊತ್ತಲ್ಲೇ ತಮ್ಮ ಚಡ್ಡಿ ದೋಸ್ತ್‌ ಪಾಕಿಸ್ತಾನಕ್ಕೆ ಮೂರು ಗಿಫ್ಟ್‌ಗಳನ್ನ ಕೊಡೋಕೆ ಮುಂದಾಗಿದ್ದಾರೆ. ಪಾಕಿಸ್ತಾನ್‌ ಮತ್ತು ಚೀನಾ ಜೊತೆಯಾಗಿ ಮತ್ತೆ ಹೊಸ 3 ಯೋಜನೆಗಳನ್ನ ಲಾಂಚ್‌ ಮಾಡೋಕೆ ನಿರ್ಧಾರ ಮಾಡಿವೆ. ಈಗಾಗಲೇ ಇರೊ ಚೀನಾ-ಪಾಕಿಸ್ತಾನ್‌ ಎಕನಾಮಿಕ್‌ ಕಾರಿಡಾರ್(‌CPEC)ನ ಜೊತೆ ಎರಡು ದೇಶಗಳು ಆರೋಗ್ಯ, ಕೃಷಿ, ವಿಜ್ಞಾನ ಹಾಗೂ ತಂತ್ರಜ್ಞಾನದಂತ ಕ್ಷೇತ್ರಗಳಲ್ಲೂ ದ್ವೀಪಕ್ಷೀಯ ಸಂಬಂಧಗಳನ್ನ ಗಟ್ಟಿಗೊಳಿಸೋಕೆ ಮುಂದಾಗಿವೆ. ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ನಡೆದ ಚೀನಾ ಎಕನಾಮಿಕ್‌ ನೆಟ್(‌CEN) ಕಾರ್ಯಕ್ರಮದಲ್ಲಿ ಮಾತಾಡಿದ ಅಲ್ಲಿನ ಪಾಕ್‌ ರಾಯಭಾರಿ ಮೊಯಿನುಲ್‌ ಹಕ್‌, ಈ ನೂತನ ಯೋಜನೆಗಳ ಬಗ್ಗೆ ಹೇಳಿದ್ದಾರೆ. ಚೀನಾ-ಪಾಕಿಸ್ತಾನ್‌ ಗ್ರೀನ್‌ ಕಾರಿಡಾರ್‌, ಚೀನಾ-ಪಾಕಿಸ್ತಾನ್‌ ಹೆಲ್ತ್‌ ಕಾರಿಡಾರ್‌ ಮತ್ತು ಚೀನಾ-ಪಾಕಿಸ್ತಾನ್‌ ಡಿಜಿಟಲ್‌ ಕಾರಿಡಾರ್ ಅನ್ನೋ ಮೂರು ಯೋಜನೆಗಳು ಸದ್ಯದ್ರಲ್ಲೆ ಲಾಂಚ್‌ ಆಗಲಿವೆ. ಮೊದಲ ಯೋಜನೆ ಪಾಕ್‌ನ ಕೃಷಿ, ಆಹಾರ ಭದ್ರತೆಯತ್ತ ಫೋಕಸ್‌ ಮಾಡಿದ್ರೆ, ಎರಡನೇ ಯೋಜನೆ ಆರೋಗ್ಯ ಕ್ಷೇತ್ರದತ್ತ ಗಮನಹರಿಸಿದೆ. ಜೊತೆಗೆ ಮೂರನೇ ಯೋಜನೆ ಪಾಕ್‌ನ ಐಟಿ ಇಂಡಸ್ಟ್ರಿಯನ್ನ ಉತ್ತೇಜಿಸೋಕೆ ಸಹಕಾರಿಯಾಗಲಿದೆ ಅಂತ ಹೇಳಲಾಗಿದೆ. ಪಾಕಿಸ್ತಾನ ಪ್ರತಿಭೆಯ ದೊಡ್ಡ ಭಂಡಾರವಾಗಿದೆ, ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಮಾನವ ಸಂಪನ್ಮೂಲ ಹೊಂದಿದೆ. ಸೋ ಚೀನಾದ ಸಾಫ್ಟವೇರ್‌ ಅಭಿವೃದ್ದಿಯಲ್ಲಿ ನಾವು ಪ್ರಮುಖ ಪಾತ್ರ ವಹಿಸ್ತೀವಿ. ಆದ್ದರಿಂದ ನಾವು ಜೊತೆಯಾಗಿ ಕೆಲಸ ಮಾಡ್ತಿದೀವಿ ಅಂತ ಮೊಯಿನುಲ್‌ ಹಕ್‌ ಹೇಳಿದ್ದಾರೆ. ಈ ಯೋಜನೆಗಳು ಮುಂದಿನ ತಿಂಗಳು ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್‌ ಚೀನಾಕ್ಕೆ ಹೋದಾಗ ಅಧಿಕೃತವಾಗಿ ಲಾಂಚ್‌ ಆಗುತ್ವೆ ಅಂತ ಹೇಳಿದ್ದಾರೆ. ಅಂದ್ಹಾಗೆ CPEC 2015ರಲ್ಲಿ ಲಾಂಚ್‌ ಆಗಿತ್ತು.

-masthmagaa.com

Contact Us for Advertisement

Leave a Reply