ಇಂಧನ ಖಾಲಿ! ಸೇನಾಭ್ಯಾಸ ಕ್ಯಾನ್ಸಲ್! ಪಾಕ್‌ ಸೇನೆ ಗಾಡಿ ಬಂದ್!

masthmagaa.com:

ತೀವ್ರ ಆರ್ಥಿಕ ಬಿಕ್ಕಟ್ಟನ್ನ ಫೇಸ್‌ ಮಾಡ್ತಿರೋ ಪಾಕಿಸ್ತಾನಕ್ಕೆ ಈಗ ತನ್ನ ಮಿಲಿಟರಿ ಡ್ರಿಲ್‌ಗಳನ್ನ ಸಹ ಮಾಡೋಕೂ ಸಾಧ್ಯವಾಗದ ಪರಿಸ್ಥಿತಿ ಬಂದಿದೆ. ಪಾಕಿಸ್ತಾನದಲ್ಲಿ ಉಂಟಾಗಿರೋ ಇಂಧನ ಕೊರತೆಯಿಂದಾಗಿ ಡಿಸೆಂಬರ್‌ವರೆಗೆ ಶೆಡ್ಯುಲ್‌ ಮಾಡಲಾಗಿದ್ದ ಎಲ್ಲಾ ಮಿಲಿಟರಿ ಡ್ರಿಲ್‌ಗಳು ಹಾಗೂ ಯುದ್ಧಾಭ್ಯಾಸವನ್ನ ರದ್ಧು ಮಾಡಿದೆ ಅಂತ ತಿಳಿದು ಬಂದಿದೆ. ಪಾಕಿಸ್ತಾನದ ಮಿಲಿಟರಿ ಬಳಿ ಇರೋ ರಿಸರ್ವ್‌ ಫುಯೆಲ್‌ ಹಾಗೂ ಲ್ಯುಬ್ರಿಕೆಂಟ್‌ಗಳು ಖಲಿಯಾಗಿರೋ ಕಾರಣಕ್ಕೆ ಯುದ್ಧಭ್ಯಾಸಗಳನ್ನ ಕ್ಯಾನ್ಸಲ್‌ ಮಾಡಲಾಗಿದೆ. ಇನ್ನು ಪಾಕಿಸ್ತಾನದ T-80 ಯುದ್ಧ ಟ್ಯಾಂಕ್‌ಗಳು ಒಂದು ಕಿಲೋಮಿಟರ್‌ಗೆ 2 ಲೀಟರ್‌ ಇಂಧನವನ್ನ ಕುಡಿಯುತ್ತವೆ. ಹೀಗಾಗಿ ಪಾಕಿಸ್ತಾನ ಆರ್ಮಿ ತನ್ನ ಎಲ್ಲಾ ಸೇನಾಭ್ಯಾಸಗಳನ್ನ ನಿಲ್ಲಸಿರಬಹುದು ಅಂತ ಭಾರತದ ನಿವೃತ್ತ ಆರ್ಮಿ ಆಫಿಸರ್‌ ಒಬ್ರು ವಿಶ್ಲೇಷಣೆ ಮಾಡಿದ್ದಾರೆ. ಅಂದ್ಹಾಗೆ ಪಾಕಿಸ್ತಾನದಲ್ಲಿ ಈಗಾಗಲೇ ಹಣದುಬ್ಬರದಿಂದ ಅಲ್ಲಿನ ದಿನನಿತ್ಯದ ಬಳಕೆಯ ವಸ್ತುಗಳು ಬೆಲೆ ಗಗನಕ್ಕೇರಿ ಜನಗಳು ಪರದಾಡುತ್ತಿದ್ದಾರೆ. ಅಷ್ಟೆ ಅಲ್ದೆ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಮಾತ್ರವಲ್ಲದೆ ರಾಜಕೀಯ ಅಸ್ಥಿರತೆ ಕೂಡ ಇದೆ. ಮತ್ತೊಂದ್‌ ಕಡೆ ಪಾಕಿಸ್ತಾನ ತಾಲಿಬಾನಿಗಳ ಕಾಟ ಬೇರೆ ಇದ್ದು, ಆಗಾಗ ಸ್ಫೋಟಕ ದಾಳಿಗಳು ನಡೆಯುತ್ತಿವೆ. ಇಂಥಾ ಹೊತ್ತಲ್ಲೇ ಇಂಧನ ಕೊರತೆಯಿಂದ ಪಾಕಿಸ್ತಾನ ಆರ್ಮಿ ತನ್ನ ಎಲ್ಲಾ ಸೇನಾಭ್ಯಾಸಗಳನ್ನ ನಿಲ್ಲಿಸಿದೇ ಅನ್ನೋ ಮಾಹಿತಿ ಪಾಕಿಸ್ತಾನದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಅಂದಹಾಗೆ ಪಾಕಿಸ್ತಾನದಲ್ಲಿ ಪೆಟ್ರೋಲ್‌ ಬೆಲೆ ಒಂದು ಲೀಟರ್‌ಗೆ 262 ಪಾಕ್‌ ರೂಪಾಯಿ ಆಗಿದೆ. ಇನ್ನು IMFನಿಂದ ಸಾಲ ಪಡೆಯೋಕೆ ಶತಪ್ರಯತ್ನ ಮಾಡ್ತಿರೋ ಪಾಕಿಸ್ತಾನ ಸರ್ಕಾರ ತನ್ನ ಆರ್ಮಿಗೆ ಬೇಕಾದ ಇಂಧನವನ್ನ ಸ್ಟೋರ್‌ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ತೀರ ಅವಶ್ಯಕವಿರೋ ಮಿಲಿಟರಿ ಟ್ಯಾಂಕ್‌ಗಳು ಹಾಗೂ ಟ್ರಕ್‌ಗಳು ಸೇರಿದಂತೆ ಇತರ ವಾಹನಗಳನ್ನ ನಡೆಸೋಕೂ ಸಾಧ್ಯವಾಗದ ಸ್ಥಿತಿ ಬಂದಿದೆ ಅಂತ ಈ ಬಗ್ಗೆ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply