ಭಾರತದ ವಿರುದ್ಧ ಪಾಕ್ ನಿಂದ ‘ಚೀನಾ ಅಸ್ತ್ರ’!

masthmagaa.com:

ಭಾರತ ರಫೇಲ್‌ ವಿಮಾನವನ್ನ ಖರೀದಿಸಿದಕ್ಕೆ ಕೌಂಟರ್‌ ಕೊಡುವ ಸಲುವಾಗಿ ಪಾಕಿಸ್ತಾನ ಚೀನಾದಿಂದ 25 multirole J-10C fighter jets ಖರೀದಿಸಿದೆ. ಮುಂದಿನ ವರ್ಷ ಮಾರ್ಚ್‌ 23 ಪಾಕಿಸ್ತಾನ್ ಡೇ ಸಮಾರಂಭದಲ್ಲಿ ಈ ಆಲ್ ವೆದರ್ ಜೆಟ್ ಗಳು ಭಾಗವಹಿಸಲಿದೆ ಅಂತ ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ. ಇದಕ್ಕೆ ಚೆಂಗ್ಡು J10 ಅಂತಾನೂ ಕರಿತಾರೆ. ವಿಗರಸ್ ಡ್ರಾಗನ್ ಅಂತಾನೂ ಕರಿತಾರೆ. ಇದೊಂದು ಸಿಂಗ್ ಇಂಜಿನ್ ಫೈಟರ್. ಚೀನಾ ಎದುರಾಳಿ ಅಮೆರಿಕ ನೇತೃತ್ವದ ನ್ಯಾಟೋ ಕೂಡ ಈ ವಿಮಾನಕ್ಕೆ ಬೇರೆದೇ ಕೋಡ್ ನೇಮ್ ಇಟ್ಟಿದೆ. ಅವ್ರು ಇದಕ್ಕೆ ಫೈರ್ ಬರ್ಡ್ ಅಂತ ಕರೀತಾರೆ. ಏರ್ ಟು ಏರ್ ಕದನಗಳಿಗೆ ಹೇಳಿ ಮಾಡಿಸಿದ ವಿಮಾನ ಇದು. ಭೂಮಿಯ ಮೇಲಿನ ಟಾರ್ಗೆಟ್ ಗಳನ್ನ ಸ್ಟ್ರೈಕ್ ಮಾಡಲೂ ಬಳಸಬೋದು. ಈ ಚೀನಾ ಮೇಡ್ ಯುದ್ಧ ವಿಮಾನಗಳು ಇಸ್ರೇಲಿನ IAI LAVI ಯುದ್ಧ ವಿಮಾನದ ಕಾಪಿ ಅಂತ ಆರೋಪ ಇದೆ. ಜೊತೆಗೆ ಅಮೆರಿಕದ F-16 ಯುದ್ಧ ವಿಮಾನಗಳಿಗೂ ಇದು ಹೋಲಿಕೆಯಾಗುತ್ತೆ. 2016ರಲ್ಲಿ ಚೀನಾದಲ್ಲಿ ತರಬೇತಿ ವೇಳೆ ಒಂದು J10 ಫೈಟರ್ ಪತನ ಆಗಿತ್ತು. ಚೀನಾದಲ್ಲಿ ತುಂಬಾ ಫೇಮಸ್ ಆಗಿದ್ದ ಲೇಡಿ ಫೈಟರ್ ಪೈಲಟ್ YU XU ಈ ದುರಂತದಲ್ಲಿ ಮೃತಪಟ್ಟಿದ್ರು. ಅಮೆರಿಕದ 40 ವರ್ಷ ಹಳೆಯ ಲೆಜೆಂಡರಿ F-16ಗೆ ಸರಿ ಸಮ ಅಂತ ಬ್ರಾಂಡ್ ಮಾಡಿ ಇದನ್ನ ಮಾರೋಕೆ ಚೀನಾ ಟ್ರೈ ಮಾಡ್ತಾನೆ ಇದೆ. ಎಲ್ಲ ಅಂತಾರಾಷ್ಟ್ರೀಯ ಏರೋ ಶೋಗಳಲ್ಲಿ ತಗೊಂಡೋಗಿ ಮಾರೋಕೆ ಟ್ರೈ ಮಾಡ್ತಾನೆ ಇದೆ. ಆದ್ರೆ ಇದುವರೆಗೂ ಒಂದೇ ಒಂದು ಫಾರಿನ್ ಕಂಟ್ರಿ ಇದನ್ನ ತಗೊಂಡಿರಲಿಲ್ಲ. ಆದ್ರೆ ಈಗ ಪಾಕಿಸ್ತಾನ ಬೇರೆ ಗತಿ ಇಲ್ಲದೆ ಈ ವಿಮಾನ ತಗೋತಿದೆ. ಇದಕ್ಕೆ ಪಾಕಿಸ್ತಾನದಲ್ಲೇ ವಿರೋಧ ಇದೆ. ಈಗಾಗಲೇ ಪಾಕಿಸ್ತಾನ ಚೀನಾದಿಂದ J17 ಥಂಡರ್ ಯುದ್ಧ ವಿಮಾನಗಳನ್ನ ತಗೊಂಡಿದೆ. ಅದರ ಇಂಜಿನ್ ಗಟ್ಟಿಮುಟ್ಟು ಇಲ್ಲ ಅಂತ ಪಾಕಿಸ್ತಾನ ವಾಯುಪಡೆ ಕಂಪ್ಲೇಂಟ್ ಮಾಡ್ತಾನೆ ಇದೆ. ರಿಪೇರಿ ಮಾಡಿಕೊಡಿ ಅಂದ್ರೂ ಚೀನಾ ಕೇರ್ ಮಾಡಲ್ಲ ಅಂತ ಸಿಟ್ಟಿದೆ. ಹೀಗಿರುವಾಗ ಮತ್ತೆ ಅದಕ್ಕಿಂತಲೂ ಕಡಿಮೆ ಶಕ್ತಿಯ J10 ಯಾಕೆ ಬೇಕಿತ್ತು ಅಂತ ಪಾಕಿಸ್ತಾನದಲ್ಲೇ ಪ್ರಶ್ನೆಗಳು ಎದ್ದಿವೆ. ಈಗಾಗಲೇ ಪಾಕಿಸ್ತಾನದ ಬಳಿ ಅಮೆರಿಕ ಬಿಟ್ಟಿಯಾಗಿ ಕೊಟ್ಟಿರೋ ಒಂದಷ್ಟು F-16 ಯುದ್ಧ ವಿಮಾನಗಳಿವೆ. ಈ J-10 ಅದಕ್ಕಿಂತಲೂ ಕಮ್ಮಿ ಶಕ್ತಿ ಹೊಂದಿದೆ. ಹೀಗಿರಬೇಕಾದರೆ ಈಗ ಅಷ್ಟೆಲ್ಲ ಖರ್ಚು ಮಾಡಿ ಇದನ್ನ ಯಾಕೆ ತಗೋಬೇಕಿತ್ತು ಅಂತ ವಿರೋಧ ಇದೆ. ಜೊತೆಗೆ ಭಾರತ ತಂದಿರೋ ರಫಾಯಲ್ ಮುಂದೆ ಇದು ಏನೇನೂ ಅಲ್ಲ. ಇದನ್ನ ತಗೋಳೋ ಬದಲು ಮೊದಲು J17 ಇಂಜಿನ್ ಸರಿ ಮಾಡಿಕೊಡಿ ಅಂತ ಚೀನಾಗೆ ಹೇಳಬೇಕಿತ್ತು ಅಂತ ಟೀಕೆ ಮಾಡಲಾಗ್ತಿದೆ. ಫ್ರೆಂಡ್ಸ್, ಈಗ ಭಾರತ ತಂದಿರೋ ರಫಾಯಲ್ ಜೆಟ್ಸ್ 4.5 ಜನರೇಶನ್. ಈ J-10 ಕೂಡ 4.5 ಜನರೇಶನ್ ಅಂತ ಚೀನಾ ಹೇಳಿಕೊಳ್ಳುತ್ತೆ. ಆದ್ರೆ ಇದರ ಸಾಮರ್ಥ್ಯದ ಬಗ್ಗೆ ಅನುಮಾನ ಇದೆ. ಯಾರೂ ನಂಬಲ್ಲ. ಇದುವರೆಗೆ ಯಾವುದೇ ಕದನಗಳಲ್ಲಿ ಭಾಗಿ ಆಗಿ ಇದರ ಸಾಮರ್ಥ್ಯ ಸಾಬೀತಾದ ಉದಾಹರಣೆ ಕೂಡ ಇಲ್ಲ. ಆದ್ರೆ ಫ್ರೆಂಚ್ ಮೇಡ್ ರಫಾಯಲ್ ಒಂದು ಪ್ರೂವನ್ ಫೈಟರ್. ಫ್ರಾನ್ಸ್ ಸೇರಿ ದಂತೆ ವಿಶ್ವಾದ್ಯಂತ ಹಲವಾರು ದೇಶಗಳ ವಾಯುಪಡೆಗಳ ಹಾಟ್ ಫೇವರಿಟ್ ರಫಾಯಲ್. IS ಉಗ್ರ ವಿರುದ್ಧ ಕಾರ್ಯಾಚರಣೆ ಸೇರಿದಂತೆ, ಹಲವಾರು ನ್ಯಾಟೋ ಕದನಗಳಲ್ಲಿ ಭಾಗಿಯಾಗಿ ಶಕ್ತಿ ಏನು ಅಂತ ತೋರಿಸಿದೆ ರಫಾಯಲ್. ಈಗ ಭಾರತದ ವಾಯುಪಡೆಯನ್ನ ಇದು ಸೇರಿಕೊಂಡಿದೆ. ಹೀಗಾಗಿ ಗಾಬರಿಯಾಗಿರೋ ಪಾಕಿಸ್ತಾನ, ವಿಶ್ವದ ಬೇರೆ ಯಾವುದೇ ದೇಶ ಖರೀದಿ ಮಾಡದ ಚೀನೀ ಆಟ ಸಾಮಾನು ಖರೀದಿಸ್ತಿದೆ. ಅಂದಹಾಗೆ ಇಲ್ಲಿ ಇನ್ನೊಂದು ವಿಚಾರ. ಪಾಕಿಸ್ತಾನದ ಬಳಿ ಈಗಾಗಲೇ ಅತ್ಯಂತ ಪವರ್ಫುಲ್ F-16 ಯುದ್ಧ ವಿಮಾನಗಳಿವೆ ಅಂತ ಹೇಳಿದ್ವಿ. ಇದನ್ನ ಪಾಕಿಸ್ತಾನಕ್ಕೆ ಕೊಡುವಾಗ ಅಮೆರಿಕ ಒಂದಷ್ಟು ಕಂಡೀಶನ್ ಹಾಕಿದೆ. ಉಗ್ರ ನಿಗ್ರಹ ಕಾರ್ಯಾಚರಣಗೆ ಬಳಸಬೇಕು. ಯಾವುದೇ ಕಾರಣಕ್ಕೂ ಭಾರತದ ವಿರುದ್ಧ ಬಳಸೋ ಹಾಗಿಲ್ಲ ಅಂತೆಲ್ಲ ಷರತ್ತಿದೆ. ಆದ್ರೆ ಕಂಡಿಷನ್ಸ್ ಫಾಲೋ ಮಾಡೋದು ಮರ್ಯಾದಸ್ತರು. ನಾವಲ್ಲ ಅನ್ನೋದು ಪಾಕಿಸ್ತಾನದ ಆಟಿಟ್ಯೂಡ್ ಅನ್ಸತ್ತೆ. ಇದೇ ಕಾರಣಕ್ಕೆ ಭಾರತೀಯ ವಾಯುಪಡೆ ಬಾಲಾಕೋಟ್ ಏರ್ ಸ್ಟ್ರೈಕ್ ಮಾಡಿದಾಗ ಮರುದಿನ ಪಾಕಿಗಳು ಕಾಶ್ಮೀರದ ಕಡೆ ಯುದ್ಧ ವಿಮಾನಗಳನ್ನ ಕಳಿಸಿದ್ರು. ಆಗ ಅಮೆರಿಕ ಹಾಕಿದ ಕಂಡೀಶನ್ ಉಲ್ಲಂಘಿಸಿ F-16 ಕಳಿಸಿದ್ರು. ಅದರಲ್ಲಿ ಒಂದು ವಿಮಾನವನ್ನ ನಮ್ಮ ವೀರ ಯೋಧ ಅಬಿನಂದನ್ ವರ್ಧಮಾನ್ ತಮ್ಮ ಪುರಾತನ ಕಾಲದ ರಷ್ಯನ್ ಮೇಡ್ ಮಿಗ್ 21 ಬೈಸನ್ ಬಳಸಿ ಹೊಡೆದು ಹಾಕಿದ್ರು. ಮಿಗ್ 21 1960 ದಶಕದ ವಿಮಾನ. ಭಾರೀ ಹಳೇದು. ಅದನ್ನ ಬಳಸಿನೇ ಅಭಿನಂದನ್ ಪಾಕಿಗಳ ಬಳಿಯಿದ್ಧ ಅತ್ಯಾಧುನಿಕ F-16 ಹೊಡೆದು ಹಾಕಿದ್ರು. ಯುದ್ಧ ವಿಮಾನ ಯಾವುದಿದ್ರೇನು? ಅದನ್ನ ಹಾರಿಸೋ ಪೈಲಟ್ ಎದೆಯಲ್ಲಿ ಧಮ್ ಇದ್ರೆ, ಟ್ಯಾಲೆಂಟ್ ಇದ್ರೆ ಹಳೇ ಮಿಗ್ ವಿಮಾನದಲ್ಲೂ F-16 ಹೊಡೀಬೋದು ಅಂತ ತೊರಿಸಿಕೊಟ್ಟಿದ್ರು ಭಾರತದ ವೀರ ಅಭಿನಂದನ್. ಈ ಮೂಲಕ ವಿಶ್ವದಲ್ಲಿ ಮೊದಲ ಬಾರಿಗೆ ಹಳೆಯ ಜನರೇಷನ್ನ ರಷ್ಯನ್ ವಿಮಾನವೊಂದು ಅಮೆರಿಕದ ಹೆಮ್ಮೆಯ f-16 ಹೊಡೆದು ಹಾಕಿದ ಮೊದಲ ಘಟನೆಯಾಗಿತ್ತು. ಅಮೆರಿಕಕ್ಕೆ ಬಹಳ ಮುಜುಗರ ಆಗಿತ್ತು. ಒಂದು f-16 ಬೀಳಿಸಿದ ನಂತರವಷ್ಟೇ ಅಭಿನಂದನ್ ವರ್ಧಮಾನ್ ಇದ್ದ ವಿಮಾನ ಪತನ ಆಗಿ ಆಮೇಲೆ ಅವ್ರು ಪ್ಯಾರಾಚೂಟ್ ಮೂಲಕ ಪಾಕ್ ಸೈಡಲ್ಲಿ ಲ್ಯಾಂಡ್ ಆಗಿದ್ದು. ಆಗ ಅಮೆರಿಕದ ಸಿಟ್ಟಿಗೆ ಗುರಿಯಾಗಬೇಕಾಗುತ್ತೆ ಅನ್ನೋ ಕಾರಣಕ್ಕೇನೇ ಈ ವಿಚಾರವನ್ನ ಮುಚ್ಚಿಡೋಕೆ ನಾನಾ ಸರ್ಕಸ್ ಮಾಡಿತ್ತು ಪಾಕಿಸ್ತಾನ. ಭಾರತ ದುಬಾರಿ ಬೆಲೆಯ ಹೈಫೈ ಯುದ್ಧ ವಿಮಾನ ರಫಾಯಲ್ ತಗೋತು ಅಂತ ಪಾಕಿಸ್ತಾನ ಈಗ ಗಾಬರಿಯಾಗಿ ಚೀನಾದ ಚೀಪ್ ಸರಕಿಗೆ ಮೊರೆ ಹೋಗೋವಾಗ ಇದೆಲ್ಲ ನೆನಪು ಮಾಡ್ಕೋಬೋದಿತ್ತು.

-masthmagaa.com

Contact Us for Advertisement

Leave a Reply