ಪಾಕಿಸ್ತಾನದ ಉಗ್ರ ಮುಖ ಮತ್ತೆ ಬಯಲು ಮಾಡಿದ ಅಮೆರಿಕ!

masthmagaa.com:

ಪಾಕಿಸ್ತಾನ ಉಗ್ರರಿಗೆ ನೆರವು ನೀಡೋದನ್ನು ಇನ್ನೂ ಬಿಟ್ಟಿಲ್ಲ ಅಂತ ಅಮೆರಿಕದ ಸ್ಟೇಟ್​​ ಡಿಪಾರ್ಟ್​​ಮೆಂಟ್ ತನ್ನ Country Reports on Terrorism 2020 ವರದಿಯಲ್ಲಿ ಹೇಳಿದೆ. ಪಾಕಿಸ್ತಾನ ಉಗ್ರ ನಿಗ್ರಹಿಸಲು ಸಣ್ಣ ಪ್ರಯತ್ನ ಮಾತ್ರ ಮಾಡಿದೆ. ಎಲ್ಲಾ ಉಗ್ರ ಸಂಘಟನೆಗಳ ವಿರುದ್ಧ ತಾರತಮ್ಯವಿಲ್ಲದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಹಲವು ಉಗ್ರ ಸಂಘಟನೆಗಳು ಈಗಲೂ ಪಾಕಿಸ್ತಾನದಿಂದಲೇ ಆಪರೇಟ್ ಮಾಡ್ತಿದ್ದು, ಪ್ರಮುಖವಾಗಿ ಭಾರತವನ್ನು ಟಾರ್ಗೆಟ್ ಮಾಡ್ತಿವೆ. ಇವುಗಳಲ್ಲಿ ಲಷ್ಕರ್ ಎ ತೊಯ್ಬಾ ಮತ್ತು ಜೈಷ್​ ಎ ಮೊಹ್ಮದ್​​ನಂತ ಉಗ್ರ ಸಂಘಟನೆಗಳು ಕೂಡ ಸೇರಿವೆ ಅಂತ ವರದಿಯಲ್ಲಿ ಹೇಳಲಾಗಿದೆ. ಜೊತೆಗೆ ಜೈಷ್ ಉಗ್ರ ಸಂಘಟನೆಯ ಸ್ಥಾಪಕ ಮಸೂದ್ ಅಝರ್​, 2008ರ ಮುಂಬೈ ದಾಳಿ ಪ್ಲಾನಿಂಗ್ ಮಾಡಿದ್ದ ಸಾಜಿದ್ ಮಿರ್​​ ಈಗಲೂ ಪಾಕಿಸ್ತಾನದಲ್ಲಿ ಆರಾಮಾಗಿ ಓಡಾಡ್ಕೊಂಡಿದ್ದಾರೆ. ಅವರ ವಿರುದ್ಧ ಪಾಕ್ ಕ್ರಮ ಕೈಗೊಂಡೇ ಇಲ್ಲ. ಪಾಕಿಸ್ತಾನದ ಒಳಗೆ ದಾಳಿಗಳನ್ನು ಮಾಡ್ತಿದ್ದ ತೆಹ್ರಿಕ್ ಎ ತಾಲಿಬಾನ್ ಪಾಕಿಸ್ತಾನ್, ಐಎಸ್​​​​​​​ ಉಗ್ರ ಸಂಘಟನೆಗಳ ವಿರುದ್ಧ ಮಾತ್ರ ಪಾಕ್ ಕೆಲ ಕ್ರಮ ಕೈಗೊಂಡಿದೆ. ಅಫ್ಘಾನಿಸ್ತಾನದ ಶಾಂತಿ ಪ್ರಕ್ರಿಯೆಯಲ್ಲಿ ಒಂದಷ್ಟು ಸಹಕಾರ ನೀಡಿದ್ರೂ, ಅಲ್ಲಿ ದಾಳಿ ನಡೆಸುತ್ತಿದ್ದ ಹಕ್ಕಾನಿ ಉಗ್ರ ಸಂಘಟನೆ ಕೂಡ ಪಾಕಿಸ್ತಾನದಿಂದಲೇ ಆಪರೇಟ್ ಆಗ್ತಿತ್ತು ಅಂತ ಕೂಡ ಅಮೆರಿಕದ ಸ್ಟೇಟ್ ಡಿಪಾರ್ಟ್​ಮೆಂಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ಭಾರತದ ಭದ್ರತಾ ಪಡೆಗಳು ಎಲ್ಲಾ ರೀತಿಯ ಉಗ್ರ ಚಟುವಟಿಕೆಗಳನ್ನು ನಿಗ್ರಹಿಸುವ, ಅವರ ಪ್ಲಾನಿಂಗ್​​ಗಳನ್ನು ಹಾಳು ಮಾಡೋ ಕೆಲಸ ಮಾಡ್ತಿವೆ. ಕಳೆದ ನವೆಂಬರ್​​​​ವರೆಗಿನ ಅಂಕಿ ಅಂಶಗಳ ಪ್ರಕಾರ ಐಎಸ್ ಉಗ್ರ ಸಂಘಟನೆಯಲ್ಲಿ ಭಾರತ ಮೂಲದ 66 ಮಂದಿ ಫೈಟರ್​​ಗಳಿದ್ದಾರೆ ಅಂತ ವರದಿಯಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply