ಪಾಕ್ ಸೇನಾ ಮುಖ್ಯಸ್ಥನ ರಾಜಿನಾಮೆ ಕೇಳಿದವನಿಗೆ 5 ವರ್ಷ ಜೈಲು!

masthmagaa.com:

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾಗೆ ‘ನೀವು ಅಧಿಕಾರದಿಂದ ಕೆಳಗಿಳಿಯಿರಿ. ಸಾಕು ಇಷ್ಟು ವರ್ಷ ಮಾಡಿದ್ದು’ ಅಂತ ಲೆಟರ್ ಬರೆದ ವ್ಯಕ್ತಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಲೆಟರ್ ಬರೆದವನೂ ಸಾಮಾನ್ಯ ಜನ ಅಲ್ಲ. ಈತ ಪಾಕ್ ಸೇನೆಯ ನಿವೃತ್ತ ಜನರಲ್ ಜಫರ್ ಮೆಹ್ದಿ ಅಸ್ಕರಿ ಅನ್ನೋರ ಮಗ. ಜೆನರಲ್ ಬಾಜ್ವಾ 2016ರಲ್ಲಿ ಪಾಕ್ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದ್ರು. ಅದಾದ್ಮೇಲೆ ನಿರಂತರವಾಗಿ ತಮ್ಮ ಅವಧಿಯನ್ನ ವಿಸ್ತರಿಸಿಕೊಂಡೇ ಬಂದಿದ್ದಾರೆ. ಸ್ಥಾನ ಬಿಟ್ಟುಕೊಡ್ತಾನೆ ಇಲ್ಲ. ಹೀಗಾಗಿ ನೀವು ರಿಸೈನ್ ಮಾಡಿ ಅಂತ ಈ ಯುವಕ ನೇರವಾಗಿ ಬಾಜ್ವಾಗೇನೆ ಲೆಟರ್ ಬರೆದುಬಿಟ್ಟ. ರೊಚ್ಚಿಗೆದ್ದ ಬಾಜ್ವಾ ಎಲಾ ಇವನಾ.. ನನ್ನನ್ನೇ ರಿಸೈನ್ ಮಾಡಿ ಅಂತಿದಾನಲ್ಲ ಮಾಡ್ತೀನಿ ನಿಂಗೆ ತಡಿ ಅಂತ ಪಾಕಿಸ್ತಾನದ ಸೇನಾ ಕೋರ್ಟ್ ಮೂಲಕ 5 ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಮಾಡಿ ಒಳಗೆ ಹಾಕಿಸಿದ್ದಾರೆ.

-masthmagaa.com

Contact Us for Advertisement

Leave a Reply