ಮಕ್ಕಳ ಎದುರೇ ಹೆಂಡತಿ ಕೊಂದು, ಕಡಾಯಿಯಲ್ಲಿ ಕುದಿಸಿದ ವ್ಯಕ್ತಿ: ಪಾಕ್‌ನಲ್ಲಿ ಭೀಕರ ಘಟನೆ!

masthmagaa.com:

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಕೊಂದು ತನ್ನ 6 ಮಕ್ಕಳ ಎದುರೇ ಆಕೆಯನ್ನ ಕಡಾಯಿಯಲ್ಲಿ ಕುದಿಸಿದ ಭೀಕರ ಘಟನ ಪಾಕಿಸ್ತಾನದಲ್ಲಿ ವರದಿಯಾಗಿದೆ. ಮೊದಲು ತಲೆದಿಂಬಿನಿಂದ ಆಕೆಯನ್ನ ಉಸಿರುಗಟ್ಟಿ ಸಾಯಿಸಿ ನಂತರ ಕಡಾಯಿಯಲ್ಲಿ ಕುದಿಸಿದ್ದಾನೆ ಅಂತ ಆತನ ಮಕ್ಕಳು ಹೇಳಿಕೆ ನೀಡಿದ್ದಾರೆ. ಇನ್ನು ಹೆಂಡತಿಯ ಈ ರೀತಿ ಭೀಕರ ಕೊಲೆಗೆ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ. ಆಶಿಕ್‌ ಅನ್ನೋ ಈತ ಸಿಂಧ್ ಪ್ರಾಂತ್ಯದ ಗುಲ್ಶನ್‌- ಎ- ಇಕ್ಬಾಲ್‌ ಏರಿಯಾದ ಖಾಸಗಿ ಶಾಲೆಯೊಂದರ ಅಡುಗೆ ಮನೆಯಲ್ಲಿ ಈ ಕೃತ್ಯ ಎಸೆಗಿದ್ದಾನೆ. ಈ ಶಾಲೆಯಲ್ಲಿ ವಾಚ್‌ಮ್ಯಾನ್‌ ಆಗಿ ಕೆಲಸ ಮಾಡ್ತಿದ್ದು, ನೌಕರರ ಕ್ವಾಟರ್‌ನಲ್ಲಿ ವಾಸಿಸುತಿದ್ದ ಅಂತ ಗೊತ್ತಾಗಿದೆ. ಜೊತೆಗೆ ಈ ಶಾಲೆ ಕಳೆದ 8-9 ತಿಂಗಳಿನಿಂದ ಮುಚ್ಚಿತ್ತು ಅಂತ ಹೇಳಲಾಗಿದೆ. ಇನ್ನು ಈ ದುಷ್ಕೃತ್ಯ ಮಾಡಿದ ಈ ಹಂತಕ 6 ಮಕ್ಕಳಲ್ಲಿ ಮೂವರನ್ನ ಕರೆದುಕೊಂಡು ಪರಾರಿಯಾಗಿದ್ದಾನೆ. ಬಳಿಕ 15 ವರ್ಷದ ಮಗಳು ಪೊಲೀಸರಿಗೆ ಹೇಳಿದ ಮೇಲೆ ವಿಚಾರ ಬೆಳಕಿಗೆ ಬಂದಿದೆ. ಅಂದ್ಹಾಗೆ ಈ ಹಿಂದೆ ಕೂಡ ಇದೇ ಸಿಂಧ್‌ ಪ್ರಾಂತ್ಯದಲ್ಲಿ ಇದೇ ರೀತಿಯ ಘಟನೆಯೊಂದು 2011ರಲ್ಲಿ ನಡೆದಿತ್ತು. ಆಗ ವ್ಯಕ್ತಿಯೊಬ್ಬ ತನ್ನ ಮೊದಲ ಪತ್ನಿಯ ಅನುಮತಿ ಇಲ್ದೇ ಬೇರೆ ಮದ್ವೆ ಆಗೋಕೆ ಬಯಸಿದ್ದ. ವಿಷಯ ತಿಳಿದ ಮಹಿಳೆ ಗಂಡನನ್ನ ಕೊಂದು ಅವನ ದೇಹದ ಭಾಗಗಳನ್ನ ಅಡುಗೆ ಮಾಡಲು ಪ್ರಯತ್ನಿಸಿದ್ಲು. ಈಕೆಯನ್ನ ಪೊಲೀಸರು ಅರೆಸ್ಟ್‌ ಮಾಡಿದ್ರು.

 

-masthmagaa.com

Contact Us for Advertisement

Leave a Reply