ಪಾಕಿಸ್ತಾನದಲ್ಲಿ ಎಲೆಕ್ಟ್ರಾನಿಕ್ ಮತ ಎಣಿಕೆ ಕಾನೂನು ಪಾಸ್!

masthmagaa.com:

ಪಾಕಿಸ್ತಾನದಲ್ಲಿ ಎಲೆಕ್ಟ್ರಾನಿಕ್ ಮತ ಎಣಿಕೆ ವ್ಯವಸ್ಥೆಯನ್ನು ಸಂಸತ್​​​​​​ನಲ್ಲಿ ಪಾಸ್ ಮಾಡಲಾಗಿದೆ. ಈ ಮೂಲಕ ಇಮ್ರಾನ್ ಖಾನ್ ಸರ್ಕಾರ ಮುಂದಿನ ಚುನಾವಣೆಗೆ ಸಿದ್ಧತೆ ಮಾಡ್ಕೊಳ್ತಿದೆ ಅಂತ ವಿಪಕ್ಷಗಳು ಬಾಯಿ ಬಡ್ಕೊಂಡ್ರೂನೂ ಕೇರ್ ಮಾಡ್ದೆ ಕಾಯ್ದೆಯನ್ನು ಪಾಸ್ ಮಾಡಲಾಗಿದೆ. ವಿಪಕ್ಷ ನಾಯಕರು ಕಾಯ್ದೆಯ ಪ್ರತಿಯನ್ನು ಹರಿದು ಎಸೆದು, ಇಮ್ರಾನ್ ಖಾನ್ ಮತ ಕಳ್ಳ ಅಂತ ಘೋಷಣೆಗಳನ್ನು ಕೂಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರತಿ ಪಕ್ಷ ನಾಯಕ ಶಹಬಾಸ್ ಷರೀಫ್, ಇದು ಪಾಕಿಸ್ತಾನದ ಸಂಸತ್​ ಇತಿಹಾಸದಲ್ಲೇ ಕರಾಳ ದಿನ. ನಾವು ಇದನ್ನು ವಿರೋಧಿಸ್ತೀವಿ ಅಂತ ಹೇಳಿದ್ರು. ಈ ಕಾನೂನು ಪರವಾಗಿ 221 ಮತಗಳು ಬಿದ್ರೆ, ವಿರುದ್ಧ 203 ಮತ ಬಿದ್ದಿವೆ. ಸರ್ಕಾರ ಹಲವು ತಿಂಗಳಿಂದ ಈ ಕಾನೂನು ಪಾಸ್ ಮಾಡ್ಕೊಳ್ಳಕ್ಕೆ ಟ್ರೈ ಮಾಡ್ತಿತ್ತು. ಆದ್ರೆ ಅದು ಸಾಧ್ಯವಾಗಿರಲಿಲ್ಲ. ಈಗ ಕಾಯ್ದೆ ಪಾಸ್ ಆಗಿದ್ದು, ವಿದೇಶಗಳಲ್ಲಿರೋ ಪಾಕಿಸ್ತಾನದ ಜನ ಕೂಡ ಆನ್​ಲೈನ್​​ನಲ್ಲಿ ಮತದಾನ ಮಾಡಬಹುದಾಗಿದೆ. ವಿದೇಶಗಳಲ್ಲಿ ಸುಮಾರು 90 ಲಕ್ಷಕ್ಕೂ ಹೆಚ್ಚು ಪಾಕಿಗಳು ನೆಲೆಸಿದ್ದು, ಅವರ ನಡುವೆ ಇಮ್ರಾನ್ ಖಾನ್ ಫುಲ್ ಫೇಮಸ್​.. ಫುಲ್ ಬೆಂಬಲ ಇದೆ. ಇದು ಮುಂದಿನ ಚುನಾವಣೆಯಲ್ಲಿ ಇಮ್ರಾನ್ ಖಾನ್​​ಗೆ ಲಾಭವಾಗಲಿದೆ ಅನ್ನೋದು ಲೆಕ್ಕಾಚಾರ.. ಅಂದಹಾಗೆ ಪಾಕಿಸ್ತಾನದಲ್ಲಿ 2023ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

-masthmagaa.com

Contact Us for Advertisement

Leave a Reply