ಪಾಕ್ ಪ್ರಧಾನಿ ಇಂಗ್ಲೆಂಡ್ ಪ್ರವಾಸ ರದ್ದು.. ಕಾರಣ ಏನ್ ಗೊತ್ತಾ?

masthmagaa.com:

ಮುಂದಿನ ತಿಂಗಳು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಯುನೈಟೆಡ್ ಕಿಂಗ್​ಡಮ್​ನಲ್ಲಿ ನಡೆಯಲಿರುವ ಇಂಗ್ಲೆಂಡ್-ಪಾಕಿಸ್ತಾನ ಕ್ರಿಕೆಟ್ ಟೂನಿರ್ಯ ಓಪನಿಂಗ್ ಸೆರೆಮನಿಯಲ್ಲಿ ಭಾಗಿಯಾಗಬೇಕಿತ್ತು. ಆದ್ರೆ ಈ ಪ್ರವಾಸವನ್ನು ಆಂತರಿಕ ಭದ್ರತೆ, ದೇಶದ ರಾಜಕೀಯ ಮತ್ತು ಪ್ರಾದೇಶಿಕ ಪರಿಸ್ಥಿತಿಯ ಕಾರಣ ಕೊಟ್ಟು ಇದ್ದಕ್ಕಿದ್ದಂತೆ ಕ್ಯಾನ್ಸಲ್ ಮಾಡಲಾಗಿದೆ. ಅಂದಹಾಗೆ ಜೂನ್ 7ನೇ ತಾರೀಕು ಇಮ್ರಾನ್ ಖಾನ್​​ಗೆ ಕರೆ ಮಾಡಿದ್ದ ಬೋರಿಸ್ ಜಾನ್ಸನ್, ಯುನೈಟೆಡ್ ಕಿಂಗ್​​ಡಮ್​​​ಗೆ ಬನ್ನಿ ಅಂತ ಆಹ್ವಾನ ನೀಡಿದ್ರು. ಕ್ರಿಕೆಟ್​​ ಟೂರ್ನಿಯ ಓಪನಿಂಗ್ ಸೆರೆಮನಿ ಜೊತೆಗೆ ಬೋರಿಸ್ ಜಾನ್ಸನ್ ಜೊತೆಗೆ ಭೇಟಿಗೂ ಟೈಂ ಫಿಕ್ಸ್ ಆಗಿತ್ತು. ಆದ್ರೆ ಕೇವಲ ಮ್ಯಾಚ್​​​ ನೋಡೋಕೆ ಮತ್ತು ಬೋರಿಸ್ ಜಾನ್ಸನ್ ಭೇಟಿಯಾಗೋಕೆ ಯುನೈಟೆಡ್ ಕಿಂಗ್​​ಡಮ್​​ಗೆ ಹೋದ್ರೆ ಟೀಕೆಯನ್ನು ಎದುರಿಸಬೇಕಾಗುತ್ತೆ ಅಂತ ಇದ್ದಕ್ಕಿದ್ದಂತೆ ಪ್ರವಾಸ ಕ್ಯಾನ್ಸಲ್ ಮಾಡಲಾಗಿದೆ ಅನ್ನೋ ಚರ್ಚೆ ಶುರುವಾಗಿದೆ. ಯಾಕಂದ್ರೆ ಕಳೆದ ತಿಂಗಳು ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಯುನೈಟೆಡ್ ಕಿಂಗ್​ಡಮ್ ಪ್ರಧಾನಿ ಬೋರಿಸ್ ಜಾನ್ಸನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಭೇಟಿಯಾಗಿದ್ರು. ಈ ವೇಳೆ ಮುಂದಿನ 10 ವರ್ಷಗಳಿಗೆ ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಸಂಬಂಧ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ರು. ಇದ್ರಿಂದ ಪಾಕಿಸ್ತಾನ ಬುಡಕ್ಕೆ ಕೆಂಡ ಇಟ್ಟಂಗೆ ಆಗಿದೆ. ಭಾರತದ ಜೊತೆಗೆ ಇಷ್ಟೆಲ್ಲಾ ಒಪ್ಪಂದ ಮಾಡ್ಕೊಂಡಿರುವಾಗ ನಾವು ಹಾಗೇ ಹೋಗ್ಬಂದ್ರೆ ಮರ್ಯಾದೆ ಇರುತ್ತಾ.. ಹೀಗಾಗಿ ಸದ್ಯಕ್ಕೆ ಪ್ರವಾಸ ಮುಂದೂಡಿಕೆ ಮಾಡಲಾಗಿದೆ ಅಂತ ಮಾಧ್ಯಮಗಳು ವರದಿ ಮಾಡಿವೆ.

-masthmagaa.com

Contact Us for Advertisement

Leave a Reply