ಪಾಕಿಸ್ತಾನದಲ್ಲಿ ಕೊರೋನಾ ಸಾವಿನ ಸಂಖ್ಯೆ ದಾಖಲೆ!

masthmagaa.com:

ಭಾರತದಲ್ಲಿ ಕೊರೋನಾ ಸೋಂಕಿನಿಂದ ಮೃತಪಡುತ್ತಿರೋರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗ್ತಿರುವಂತೆ ಅತ್ತ ಪಕ್ಕದ ಪಾಕಿಸ್ತಾನದಲ್ಲೂ ಸಾವಿನ ಸಂಖ್ಯೆ ದಾಖಲೆ ಬರೆದಿದೆ. ಮಂಗಳವಾರ ಪಾಕ್​ನಲ್ಲಿ 201 ಸೋಂಕಿತರು ಮೃತಪಟ್ಟಿದ್ದಾರೆ. ಕೊರೋನಾ ಶುರುವಾದಾಗಿನಿಂದ ದೃಢಪಟ್ಟ ಅತಿಹೆಚ್ಚು ಸಾವು ಇದಾಗಿದೆ. ಈ ಹಿಂದಿನ ದಾಖಲೆ 157 ಇತ್ತು. ಈ ಮೂಲಕ ಪಾಕ್​ನಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 17,530ಕ್ಕೆ ಏರಿಕೆಯಾಗಿದೆ. ಪಾಕ್​ನಲ್ಲಿ ನಿನ್ನೆ 5,600 ಕೇಸ್​ ವರದಿಯಾಗಿದೆ.
ಹೀಗೆ ಭಾರತ, ಪಾಕಿಸ್ತಾನ ಸೇರಿ ಜಗತ್ತಿನ ಬಹುತೇಕ ದೇಶಗಳಲ್ಲಿ ಕೊರೋನಾದ 2ನೇ ಅಲೆ, 3ನೇ ಅಲೆ, 4ನೇ ಅಲೆ ಏಳ್ತಿದ್ರೆ ಕೊರೋನಾ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಕಳೆದ 24 ಗಂಟೇಲಿ ಕೇವಲ 12 ಹೊಸ ಕೇಸ್​ ದೃಢಪಟ್ಟಿದೆ. ಎಲ್ಲವೂ ವಿದೇಶಿ ಪ್ರಯಾಣದ ಹಿನ್ನೆಲೆ ಹೊಂದಿದ್ದೇ ಆಗಿವೆ. ಅದ್​ಬಿಟ್ರೆ ರೋಗ ಲಕ್ಷಣ ಇಲ್ಲದ 17 ಕೇಸ್ ವರದಿಯಾಗಿದೆ. ರೋಗ ಲಕ್ಷಣ ಇಲ್ಲದಿದ್ರೆ ಚೀನಾದಲ್ಲಿ ಅದನ್ನ ಪಾಸಿಟಿವ್ ಅಂತ ಪರಿಗಣಿಸಲ್ಲ.

-masthmagaa.com

Contact Us for Advertisement

Leave a Reply