ಇಮ್ರಾನ್ ಖಾನ್ ಟೈಮಲ್ಲಿ ಪಾಕಿಸ್ತಾನದಲ್ಲಿ ಪತ್ರಿಕಾ ಸ್ವಾತಂತ್ರ ಮಾಯ: ವರದಿ

masthmagaa.com:

ಮಾಧ್ಯಮ ಸ್ವಾತಂತ್ರ್ಯದ ವಿಚಾರವಾಗಿ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಪ್ರಕಟಿಸಿದ ವರದಿಯಿಂದ ಪಾಕಿಸ್ಥಾನ ಕೆಂಡಾಮಂಡಲವಾಗಿದೆ. ಇದ್ರಲ್ಲಿ ಮಾಧ್ಯಮ ಸ್ವಾತಂತ್ರ್ಯದ ದೃಷ್ಟಿಯಿಂದ ಪ್ರಪಂಚದ 37 ಮಂದಿ ಅತಿ ಕೆಟ್ಟ ಆಡಳಿತಗಾರರ ಪಟ್ಟಿಯಲ್ಲಿ ಇಮ್ರಾನ್ ಖಾನ್ ಹೆಸರು ಸೇರಿಸಲಾಗಿದೆ. ಪ್ಯಾರಿಸ್ ಮೂಲದ ರಿಪೋರ್ಟರ್ಸ್​ ವಿಥೌಟ್ ಬಾರ್ಡರ್ಸ್​ ಅನ್ನೋ ವರದಿಗಾರರ ಗುಂಪೊಂದು ಪ್ರೆಸ್ ಫ್ರೀಡಂ ಪ್ರಿಡೆಕ್ಟರ್ಸ್​ ಗ್ಯಾಲರಿ- ಓಲ್ಡ್​ ಟೈರಂಟ್ಸ್​, ಟೂ ವುಮನ್ & ಯೂರೋಪಿಯನ್ ಅನ್ನೋ ಹೆಸರಲ್ಲಿ ಈ ವರದಿ ಪ್ರಕಟಿಸಿದೆ. ಈ ವರದಿಯ ಪ್ರಕಾರ, ಪಾಕಿಸ್ತಾನದಲ್ಲಿ 2018ರಲ್ಲಿ ಇಮ್ರಾನ್ ಖಾನ್ ಪ್ರಧಾನಿಯಾದ ಬಳಿಕ ಸೆನ್ಸಾರ್​ಶಿಪ್​ ಪ್ರಕರಣಗಳು ಜಾಸ್ತಿಯಾಗ್ತಿವೆ. ನ್ಯೂಸ್​ಪೇಪರ್ ಹಂಚಿಕೆಯಲ್ಲಿ ಅಡಚಣೆ ಮಾಡಲಾಗಿದೆ. ಮೀಡಿಯಾ ಸಂಸ್ಥೆಗಳಿಗೆ ಜಾಹೀರಾತುಗಳನ್ನು ತಡೆಯುವ ಬೆದರಿಕೆಯೊಡ್ಡಲಾಗಿದೆ. ಟಿವಿ ಸಿಗ್ನಲ್​​ಗಳನ್ನು ಕೂಡ ಜಾಮ್ ಮಾಡಲಾಗಿದೆ ಅಂತ ಹೇಳಲಾಗಿದೆ. ಅಷ್ಟೇ ಅಲ್ಲ.. ರೆಡ್​ ಲೈನ್ ದಾಟಿದ ಪತ್ರಕರ್ತರಿಗೆ ಬೆದರಿಕೆಯೊಡ್ಡಲಾಗಿದ್ದು, ಕಿಡ್ನಾಪ್ ಮಾಡಿ ಟಾರ್ಚರ್ ಕೂಡ ಕೊಡಲಾಗಿದೆ ಅಂತ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಈ ಬಗ್ಗೆ ಪ್ರಕರಟಣೆ ಹೊರಡಿಸಿರುವ ಪಾಕಿಸ್ತಾನ ಮಾಹಿತಿ ಸಚಿವಾಲಯ, ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ಪ್ರಧಾನಿ ಇಮ್ರಾನ್ ಖಾನ್ ವಾಕ್ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯದಲ್ಲಿ ನಂಬಿಕೆ ಇಟ್ಟಿದ್ದಾರೆ. ಈ ವರದಿಗಾರರ ಗುಂಪು ಪಾಕಿಸ್ತಾನದಲ್ಲಿ ಮಾಧ್ಯಮ ಸೆನ್ಸಾರ್​ಶಿಪ್​​ ಅಡಿಯಲ್ಲಿದೆ ಅನ್ನೋ ನಿರ್ಧಾರಕ್ಕೆ ಬಂದಿರೋದು ಆಶ್ಚರ್ಯ ಹುಟ್ಟಿಸಿದೆ ಅಂತ ಹೇಳಿದೆ. ಅಲ್ಲದೆ ಪಾಕಿಸ್ತಾನ ಪತ್ರಕರ್ತರು ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ನಿರ್ವಹಿಸಲು ಬೇಕಾದ ಎಲ್ಲಾ ರೀತಿಯ ಅನುಕೂಲಕರ ವಾತಾವರಣ ಕಲ್ಪಿಸಿದೆ. ಈ ವರದಿ ಸಾಕ್ಷ್ಯಗಳೇ ಇಲ್ಲದೆ ಪಾಕಿಸ್ತಾನದ ಚುನಾಯಿತ ಪ್ರತಿನಿಧಿಯನ್ನು ಪ್ರಶ್ನಿಸುವ ಪ್ರಯತ್ನವಾಗಿದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply