ಪಾಕಿಸ್ತಾನದಲ್ಲಿ ಬರಲಿದ್ಯಾ ಕೊರೋನಾದ 5ನೇ ಅಲೆ..?

masthmagaa.com:

ಪಾಕಿಸ್ತಾನದಲ್ಲಿ ಚಳಿಗಾಲದಲ್ಲಿ ಕೊರೋನಾದ 5ನೇ ಅಲೆ ಅಪ್ಪಳಿಸುವ ಭೀತಿ ಎದುರಾಗಿದೆ. ದೇಶದಲ್ಲಿ ಲಸಿಕೆ ಅಭಿಯಾನ ತುಂಬಾ ನಿಧಾನವಾಗಿ ನಡೀತಿರೋದು ಇದಕ್ಕೆ ಕಾರಣವಾಗಿದೆ. ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನಕ್ಕೆ ಚುರುಕು ಮುಟ್ಟಿಸಲು ಸರ್ಕಾರ ಪ್ರಯತ್ನಿಸ್ತಿದ್ರೂ ಇನ್ನೂ ಕೂಡ ಕೋಟಿಗಟ್ಲೆ ಜನ ಲಸಿಕೆ ಹಾಕಿಸಿಕೊಂಡಿಲ್ಲ ಅಂತ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಇಮ್ರಾನ್ ಖಾನ್​​ರ ಪ್ರಮುಖ ಸಲಹೆಗಾರರಾದ ಡಾ.ಫೈಸಲ್ ಸುಲ್ತಾನಾ ಹೇಳಿದ್ದಾರೆ. ಒಂದ್ವೇಳೆ ಲಸಿಕೆ ಅಭಿಯಾನ ವೇಗ ಪಡೆದುಕೊಳ್ಳದೇ ಇದ್ರೆ, ಇದೇ ರೀತಿ ಮುಂದುವರಿದ್ರೆ ದೇಶದಲ್ಲಿ 5ನೇ ಅಲೆ ಬರೋ ಚಾನ್ಸಸ್ ಜಾಸ್ತಿ ಇದೆ ಅಂತ ಕೂಡ ಸುಲ್ತಾನಾ ಎಚ್ಚರಿಸಿದ್ದಾರೆ. ಅಂದಹಾಗೆ ದೇಶದಲ್ಲಿ ಈವರೆಗೆ 26 ಪರ್ಸೆಂಟ್ ಜನ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದು, 20 ಪರ್ಸೆಂಟ್ ಜನ ಕನಿಷ್ಠ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಇನ್ನೂ ಕೂಡ 15 ಕೋಟಿಯಷ್ಟು ಜನ ಲಸಿಕೆ ಹಾಕಿಸಿಕೊಳ್ಳಬೇಕಿದೆ.

-masthmagaa.com

Contact Us for Advertisement

Leave a Reply