ಪಾಕ್‌ನಲ್ಲಿ ನಡೆದ ಆತ್ಮಾಹುತಿ ದಾಳಿಗೆ ಅಫ್ಘಾನ್‌ ಕಾರಣ: ಪಾಕಿಸ್ತಾನ

masthmagaa.com:

ಕಳೆದ ಮಾರ್ಚ್‌ ತಿಂಗಳಲ್ಲಿ ಪಾಕಿಸ್ತಾನದ ಖೈಬರ್‌ ಪಖ್ತುಂಕ್ವಾದಲ್ಲಿ ನಡೆದ ಆತ್ಮಾಹುತಿ ದಾಳಿಗೆ 5 ಚೀನಿ ಇಂಜಿನಿಯರ್‌ಗಳು ಮೃತಪಟ್ಟಿದ್ರು. ಈ ದಾಳಿಯನ್ನ ಅಫ್ಘಾನಿಸ್ತಾನ ಪ್ಲಾನ್‌ ಮಾಡಿದ್ದು. ಆತ್ಮಾಹುತಿ ದಾಳಿಕೋರ ಅಫ್ಘಾನ್‌ನ ಪ್ರಜೆ ಅಂತ ಪಾಕ್‌ನ ಇಂಟರ್‌-ಸರ್ವೀಸಸ್‌ ಪಬ್ಲಿಕ್‌ ರಿಲೇಶನ್ಸ್‌ನ ಮಹಾನಿರ್ದೇಶಕರಾದ ಮೇಜರ್‌ ಜನರಲ್‌ ಅಹ್ಮದ್‌ ಹೇಳಿದ್ದಾರೆ. ಈ ಮೂಲಕ ನಮ್ಮ ದೇಶದಲ್ಲಿ ನಡೆದ ದಾಳಿಯಲ್ಲಿ ಅಫ್ಘಾನಿಸ್ತಾನದ ಪಾತ್ರ ಇದೆ ಅನ್ನೋದನ್ನ ಪಾಕ್‌ ಅಧಿಕೃತವಾಗಿ ಹೇಳಿದೆ. ಇತ್ತೀಚಿಗಷ್ಟೇ ಎರಡೂ ದೇಶಗಳ ನಡುವೆ ಉಗ್ರರ ವಿಚಾರವಾಗಿ ಜಗಳ ಆಗಿತ್ತು. ಟಿಟಿಪಿ ಉಗ್ರರಿಗೆ ಅಫ್ಘಾನ್‌ ಆಶ್ರಯ ಕೊಡ್ತಿದೆ ಅಂತ ಪಾಕ್‌ ಸರ್ಕಾರ ದೂರಿತ್ತು. ಜೊತೆಗೆ ಭಾರತದೊಂದಿಗೆ ಯುದ್ದ ಮಾಡಿದ್ದಕ್ಕಿಂತ ಹೆಚ್ಚಾಗಿ ನಮಗೆ ಈ ಅಫ್ಘಾನಿಸ್ತಾನದಿಂದ ನಷ್ಟ ಆಗಿದೆ. ನಮಗೆ ತಾಲಿಬಾನಿಗಳು ತುಂಬಾ ಟ್ರಬಲ್‌ ಕೊಡ್ತಾರೆ ಅಂತ ಪಾಕಿಸ್ತಾನ ಹೇಳಿತ್ತು. ಇದಕ್ಕೆ ಅಫ್ಘಾನಿಸ್ತಾನ ಕೂಡ ರಿಯಾಕ್ಟ್‌ ಮಾಡಿ ಪಾಕಿಸ್ತಾನಕ್ಕೆ ಕ್ಲಾಸ್‌ ತಗೊಂಡಿತ್ತು. ಇದು ಎರಡೂ ದೇಶಗಳ ನಡುವಿನ ಕಿತ್ತಾಟಕ್ಕೆ ಮತ್ತಷ್ಟು ತುಪ್ಪ ಸುರಿದಿತ್ತು. ಆದ್ರೀಗ ಪಾಕ್‌ ತಾಲಿಬಾನಿಗಳು ಉಗ್ರರಿಗೆ ಆಶ್ರಯ ಕೊಟ್ಟಿದ್ದಾರೆ ಅಂತ ಪಾಕ್‌ನ ಉನ್ನತ ಅಧಿಕಾರಿಯೇ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply