ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ: ಪಾಕ್‍ಗೆ ಅಮೆರಿಕಾ ವಾರ್ನಿಂಗ್

ಉಗ್ರ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಅವರಂತಹ ಉಗ್ರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಮೆರಿಕಾ ಪಾಕಿಸ್ತಾನಕ್ಕೆ ಸೂಚಿಸಿದೆ. ಅಲ್ಲದೆ ಗಡಿಯಲ್ಲಿ ಭಾರತಕ್ಕೆ ನುಸುಳೋ ಉಗ್ರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು. ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಅನ್ನೋದರ ಆಧಾರದ ಮೇಲೆ ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಘರ್ಷ ನಿಲ್ಲುತ್ತಾ ಮುಂದುವರಿಯುತ್ತಾ ಅನ್ನೋದು ನಿರ್ಧಾರವಾಗುತ್ತೆ. ಹೀಗಂತ ವಿಶ್ವಸಂಸ್ಥೆ ಮಹಾಸಭೆಯ 74ನೇ ಅಧಿವೇಶನದ ವೇಳೆ ವಿಶೇಷ ಮಾತುಕತೆಯಲ್ಲಿ ಅಮೆರಿಕಾದ ಪ್ರತಿನಿಧಿ ಎಲಿಸ್ ವೆಲ್ಸ್ ತಿಳಿಸಿದ್ದಾರೆ.

ಅಲ್ಲದೆ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆ ಅಧಿವೇಶನದ ಸಂದರ್ಭದಲ್ಲಿಯೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತಕತೆ ನಡೆಸಿದ್ದಾರೆ. ಆದ್ರೆ ಪ್ರಧಾನಿ ಮೋದಿ ಕಾಶ್ಮೀರದ ವಿಚಾರದಲ್ಲಿ ಯಾರ ಮಧ್ಯಸ್ಥಿಕೆಯೂ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಭಾರತ ಮತ್ತು ಪಾಕ್ ಎರಡೂ ದೇಶಗಳು ಒಪ್ಪಿದರೆ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದಾರೆ. ಅಲ್ಲದೆ ಗಡಿ ನುಸುಳುವಿಕೆ ನಿಲ್ಲಿಸಿ, ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಪಾಕ್ ಮುಂದಾಗಬೇಕು ಅಂತ ಎಲಿಸ್ ವೆಲ್ಸ್ ತಿಳಿಸಿದ್ದಾರೆ.

Contact Us for Advertisement

Leave a Reply