ಅಯ್ಯೋ! 18 ವರ್ಷಕ್ಕೇ ಮದುವೆ ಕಡ್ಡಾಯವಂತೆ!

masthmagaa.com:

ಪಾಕಿಸ್ತಾನದ ಸಿಂಧ್​​ನಲ್ಲಿ ಹೆಣ್ಮಕ್ಕಳನ್ನು ಅತ್ಯಾಚಾರದಿಂದ ಪಾರು ಮಾಡೋಕೆ ಶಾಸಕನೊಬ್ಬ ವಿಚಿತ್ರ ಕಾನೂನು ತರಲು ಹೊರಟಿದ್ದಾರೆ. ಈ ಕಾನೂನು ಅಸ್ತಿತ್ವಕ್ಕೆ ಬಂದ್ರೆ ಸಿಂಧ್ ಪ್ರಾಂತ್ಯದಲ್ಲಿ ಪ್ರತಿಯೊಬ್ಬರು 18 ವರ್ಷಕ್ಕೆ ಮದ್ವೆಯಾಗೋದು ಅನಿವಾರ್ಯವಾಗುತ್ತೆ. ಮುತ್ತಹಿದ ಮಜ್ಲಿಸ್ ಎ ಅಮಲ್ ಪಕ್ಷದ ಸೈಯದ್ ಅಬ್ದುಲ್ ರಶೀದ್ The Sindh Compulsory Marriage Act, 2021 ಕರಡನ್ನು ಸಿಂಧ್ ಅಸೆಂಬ್ಲಿಯ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಪೋಷಕರು ತಮ್ಮ ಮಕ್ಕಳು 18 ವರ್ಷ ತುಂಬಿದ ಕೂಡಲೇ ಮದುವೆ ಮಾಡಬೇಕು, ಇಲ್ಲದಿದ್ರೆ, ಯಾಕೆ ಲೇಟ್ ಅಂತ ಜಿಲ್ಲೆಯ ಡೆಪ್ಯುಟಿ ಕಮಿಷನರ್​​​ಗೆ ಕಾರಣ ನೀಡಬೇಕು. ಕಾರಣ ನೀಡದೇ ಇದ್ರೆ 500 ರೂಪಾಯಿ ದಂಡ ವಿಧಸಿಲಾಗುತ್ತೆ ಅಂತ ಕೂಡ ಈ ಮಸೂದೆಯಲ್ಲಿ ತಿಳಿಸಲಾಗಿದೆ. ಸಮಾಜದ ಒಳಿತಿಗಾಗಿ ಈ ಕಾನೂನು ಅಗತ್ಯ ಅಂತ ಕೂಡ ಶಾಸಕ ಸೈಯದ್ ಅಬ್ದುಲ್ ರಶೀದ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply