ಪಾಕ್‌ನಲ್ಲಿ ಆತ್ಮಾಹುತಿ ದಾಳಿ: 5 ಜಪಾನೀಯರು ಬಚಾವ್, ಇಬ್ರು ಉಗ್ರರು ಬಲಿ!

masthmagaa.com:

ಉಗ್ರ ಪೋಷಕ ಪಾಕಿಸ್ತಾನದಲ್ಲಿ ಚೀನಾ ಪ್ರಜೆಗಳ ಬಳಿಕ ಈಗ ಜಪಾನ್‌ ನಾಗರಿಕರ ಮೇಲೂ ಆತ್ಮಾಹುತಿ ದಾಳಿ ನಡೆದಿದೆ. ಕರಾಚಿ ಬಳಿಯ ಲಂಧಿ ಪ್ರದೇಶದಲ್ಲಿ ಐವರು ಜಪಾನಿಯರು ಹೊರಟಿದ್ದ ವಾಹನವನ್ನ ಟಾರ್ಗೆಟ್‌ ಮಾಡಿ ಭಯೋತ್ಪಾದಕರು ಆತ್ಮಾಹುತಿ ದಾಳಿ ನಡೆಸಲು ಮುಂದಾದ್ರು. ಈ ವೇಳೆ ಸ್ವಲ್ಪದರಲ್ಲೆ ಜಪಾನಿಯರು ಪಾರಾಗಿದ್ದು, ಅವ್ರನ್ನ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಇನ್ನು ಇಬ್ಬರು ಉಗ್ರರನ್ನ ಪೋಲಿಸರು ಹೊಡೆದುರುಳಿಸಿದ್ದಾರೆ. ಅಂದ್ಹಾಗೆ ಕಳೆದ ಮಾರ್ಚ್‌ನಲ್ಲಿ ಇದೇ ರೀತಿ ಆತ್ಮಾಹುತಿ ದಾಳಿಯಲ್ಲಿ ಐವರು ಚೀನಿಯರನ್ನ ಹತ್ಯೆ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply