ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚುನಾವಣೆ..? ಯಾವಾಗ ಗೊತ್ತಾ..?

masthmagaa.com:

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜುಲೈ 25ಕ್ಕೆ ಚುನಾವಣೆ ನಡೆಸೋದಾಗಿ ಅಲ್ಲಿನ ಚುನಾವಣಾ ಅಧಿಕಾರಿ ಘೋಷಿಸಿದ್ಧಾರೆ. ಪಿಒಕೆಯ ಮುಜಫರಾಬಾದ್​​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಅಧಿಕಾರಿ ಅಬ್ದುಲ್ ರಶೀದ್ ಸುಲೇಹರಿಯಾ, ಜುಲೈ 25ರಂದು ಕಾಶ್ಮೀರದ ಜನ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ನಾಮಪತ್ರ ಸಲ್ಲಿಸುವವರು ಜೂನ್​​ 21ರ ಒಳಗಾಗಿ ಸಲ್ಲಿಸಬಹುದು. ಜುಲೈ 3ರಂದು ಅಂತಿಮ ಪಟ್ಟಿ ಬಿಡುಗೆ ಮಾಡಲಾಗುತ್ತೆ ಅಂತ ತಿಳಿಸಿದ್ದಾರೆ. ಅಂದಹಾಗೆ ವಿಧಾನಸಭೆಯ 45 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಳೆದ ವರ್ಷ ಗಿಲ್ಗಿಟ್ ಬಲ್ಟಿಸ್ತಾನದಲ್ಲೂ ಪಾಕ್ ಚುನಾವಣೆ ನಡೆಸಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ಭಾರತ, ಮಿಲಿಟರಿ ವಶದಲ್ಲಿರೋ ಪ್ರದೇಶದಲ್ಲಿ ಪರಿಸ್ಥಿತಿ ಬದಲಾಯಿಸಿದ್ರೆ, ಅದಕ್ಕೆ ಕಾನೂನು ಮಾನ್ಯತೆ ಇರೋದಿಲ್ಲ. ಗಿಲ್ಗಿಟ್ ಬಲ್ಟಿಸ್ತಾನ, ಕಾಶ್ಮೀರ ಮತ್ತು ಲಡಾಕ್ ಭಾರತ ಅವಿಭಾಜ್ಯ ಅಂಗ ಅಂತ ಹೇಳಿತ್ತು. ಆದ್ರೂ ಕೂಡ ಪಾಕಿಸ್ತಾನ ಚುನಾವಣೆ ನಡೆಸಿಯೇ ಬಿಟ್ಟಿತ್ತು. ಅದ್ರಲ್ಲಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್ ಇ ಇನ್ಸಾಫ್ ಪಕ್ಷ ವಿಧಾನಸಭೆಯ ಒಟ್ಟು 33 ಸ್ಥಾನಗಳ ಪೈಕಿ 22ರಲ್ಲಿ ಗೆದ್ದು, ಅಧಿಕಾರಕ್ಕೆ ಏರಿದೆ. ಅಂದಹಾಗೆ 1947ರಲ್ಲಿ ಸ್ವಾತಂತ್ರ್ಯದ ಬಳಿಕ ಎರಡೂ ದೇಶಗಳ ನಡುವೆ ಯುದ್ಧವಾಗಿತ್ತು. ಆಗ ಕದನ ವಿರಾಮ ಘೋಷಣೆಗೂ ಮುನ್ನ ಭಾರತದ ಈ ಭಾಗವನ್ನು ಆಕ್ರಮಿಸಿಕೊಂಡು ಕುಳಿತುಬಿಟ್ಟಿತ್ತು ಪಾಕಿಸ್ತಾನ..ಅಲ್ಲಿಂದ ಭಾರತ ಇದನ್ನ ಪಾಕ್ ಆಕ್ರಮಿತ ಕಾಶ್ಮೀರ ಅಂತಲೇ ಕರೆದುಕೊಂಡು ಬಂದಿದೆ. ಅದೇ ಪಾಕಿಸ್ತಾನ ಆಜಾದ್ ಕಾಶ್ಮೀರ್ ಅಂತ ಕರ್ಕೊಂಡು ಬಂದಿದೆ.

-masthmagaa.com

Contact Us for Advertisement

Leave a Reply