ಇಮ್ರಾನ್ ವಾಪಸ್ ಆಗ್ತಿದ್ದಂತೆ ಶಾಶ್ವತ ಪ್ರತಿನಿಧಿ ಬದಲು..!

ವಿಶ್ವಸಂಸ್ಥೆ ಅಧಿವೇಶನ ಮುಗಿಸಿ ಇಮ್ರಾನ್ ಖಾನ್ ಪಾಕಿಸ್ತಾನಕ್ಕೆ ವಾಪಸ್ಸಾದ 72 ಗಂಟೆಗಳಲ್ಲಿ ವಿಶ್ವಸಂಸ್ಥೆಯ ಶಾಶ್ವತ ಪ್ರತಿನಿಧಿಯನ್ನು ಬದಲಾಯಿಸಿದೆ. ಇಮ್ರಾನ್ ಖಾನ್ ಅವರು ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ಸಭೆಯಲ್ಲಿ ಭಾಗಿಯಾಗಿದ್ದರು. ಮತ್ತು ಅವರಿಗೆ ವಿಶ್ವಸಂಸ್ಥೆಯಲ್ಲಿ ಅವರಿಗೆ ಪಾಕ್‍ನ ಶಾಶ್ವತ ಪ್ರತಿನಿಧಿ ಮಲೀಲಾ ಲೋಧಿ ಮಾರ್ಗದರ್ಶನ ನೀಡಿದ್ದರು. ಆದ್ರೆ ಇದೀಗ ಮಲೀಲಾ ಲೋದಿ ಜಾಗಕ್ಕೆ ಮುನಿರ್ ಅಕ್ರಂ ಅವರನ್ನು ನಿಯೋಜಿಸಲಾಗಿದೆ. ಇವತ್ತು 15 ವರ್ಷಗಳ ಹಿಂದೆ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. 2003ರಲ್ಲಿ ಅವರ ವಿರುದ್ಧ ಕೌಟುಂಬಿಕ ಕಲಹ ಆರೋಪ ಕೇಳಿಬಂದಿತ್ತು. ಪತ್ನಿ ಮರಿಜಾನಾಗೆ ಥಳಿಸಿದ್ದ ಅಕ್ರಂರನ್ನು ಪಾಕಿಸ್ತಾನ ವಾಪಸ್ ಕರೆಸಿಕೊಂಡಿತ್ತು. ಈಗ ಪುನಃ ಅವರನ್ನು ವಿಶ್ವಸಂಸ್ಥೆಗೆ ಶಾಶ್ವತ ಪ್ರತಿನಿಧಿಯಾಗಿ ಕಳುಹಿಸಲು ನಿರ್ಧರಿಸಿದೆ.

ಈವರೆಗೆ ಶಾಶ್ವತ ಪ್ರತಿನಿಧಿಯಾಗಿದ್ದ ಮಲೀಲಾ ಲೋದಿ ಪಾಕಿಸ್ತಾನದ ರಾಯಭಾರಿಯಾಗಿಯೂ ಕೆಲಸ ಮಾಡಿದ್ದರು.

Contact Us for Advertisement

Leave a Reply