ಪಾಕ್​ನಲ್ಲಿ ರಾಜಕಾರಣಿಯನ್ನು ಅಪಹರಿಸಿದ್ದವರ ಹತ್ಯೆ!

masthmagaa.com:

ಪಾಕಿಸ್ತಾನದಲ್ಲಿ ನಾಯಕರೊಬ್ಬರ ಅಪಹರಣ ಮತ್ತು ಹತ್ಯೆ ಕೇಸ್ ಆರೋಪಿಗಳು ಎನ್​​​ಕೌಂಟರ್​​ನಲ್ಲಿ ಸಾವನ್ನಪ್ಪಿದ್ದಾರೆ. ಜೂನ್ ತಿಂಗಳ ಅಂತ್ಯದಲ್ಲಿ ಬಲೂಚಿಸ್ತಾನದ ಪಿಶಿನ್​​​​ನ ಅವಾಮಿ ನ್ಯಾಷನಲ್ ಪಾರ್ಟಿಯ ನಾಯಕರಾದ ಮಾಲಿಕ ಉಬೇದುಲ್ಲಾ ಖಾಸಿಯವರನ್ನು ಅಪಹರಣ ಮಾಡಲಾಗಿತ್ತು. ಕಳೆದ ಗುರುವಾರ ಅಫ್ಘನ್ ನಿರಾಶ್ರಿತರ ಕೇಂದ್ರದ ಬಳಿ ಅವರ ಶವ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಒಬ್ಬನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ರು. ಆತನ ಹೇಳಿಕೆ ಆಧಾರದ ಮೇಲೆ ಮನೆಯೊಂದರ ಮೇಲೆ ದಾಳಿ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ನಾಲ್ವರು ಪ್ರಾಣ ಕಳ್ಕೊಂಡಿದ್ದಾರೆ. ಇದು ದುಡ್ಡಿಗಾಗಿ ನಡೆದಿದ್ದ ಅಪಹರಣ ಅಂತ ಗೊತ್ತಾಗಿದೆ. ಇನ್ನು ಖ್ವೆಟ್ಟಾದಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರು ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ.

-masthmagaa.com

 

Contact Us for Advertisement

Leave a Reply