ಅಫ್ಘಾನಿಸ್ತಾನ ಪ್ರವಾಸ ಕೈಗೊಂಡ ಪಾಕ್ ವಿದೇಶಾಂಗ ಸಚಿವ!

masthmagaa.com:

ಮತ್ತೊಂದ್ಕಡೆ ಅಫ್ಘಾನಿಸ್ತಾನದ ಜೊತೆಗಿನ ಫ್ರೆಂಡ್ಶಿಪ್ ಗಟ್ಟಿ ಮಾಡ್ಕೊಳ್ಳಕ್ಕೆ ಪಾಕಿಸ್ತಾ ನ ಎಲ್ಲಾ ಕಸರತ್ತು ಮಾಡ್ತಾ ಇದೆ. ಈ ನಡುವೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಷಿ ಅಫ್ಘಾನಿಸ್ತಾನ ಪ್ರವಾಸ ಕೈಗೊಂಡಿದ್ದಾರೆ. ಇಲ್ಲಿ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಆಮಿರ್ ಖಾನ್ ಮೊಠಾಕಿಯನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇನ್ನು ಶಾ ಮೊಹ್ಮದ್ ಖುರೇಷಿ ಜೊತೆಗೆ ಐಎಸ್​ಐನ ನಿರ್ಗಮಿತ ಮುಖ್ಯಸ್ಥ ಫೈಜ್ ಹಮೀದ್ ಕೂಡ ಸಾಥ್ ಕೊಟ್ಟಿದ್ದಾರೆ. ತಾಲಿಬಾನಿಗಳು ಟೇಕೋವರ್ ಮಾಡಿದ ಬಳಿಕ ಅಫ್ಘಾನಿಸ್ತಾನಕ್ಕೆ ಇವರ 2ನೇ ಪ್ರಯಾಣ ಇದಾಗಿದೆ.

-masthmagaa.com

Contact Us for Advertisement

Leave a Reply