ಪಾಕಿಸ್ತಾನದಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಸಮುದಾಯ! ಕಾರಣವೇನು?

masthmagaa.com:

ಪಾಕಿಸ್ತಾನದಲ್ಲಿ ಹಿಂದೂ ಸಮುದಾಯದವರು ಹಾಗೂ ಇತರ ಅಲ್ಪ ಸಂಖ್ಯಾತರನ್ನ ಅಪಹರಿಸುತ್ತಿರುವ ಕೇಸ್‌ಗಳು ಹೆಚ್ಚಾಗುತ್ತಿವೆ. ಇದೀಗ ಪಾಕಿಸ್ತಾನದ ದಕ್ಷಿಣ ಸಿಂದ್‌ನ ಕಾಶ್ಮೋರ್‌ನಲ್ಲಿ ಹಿಂದೂ ಸಮುದಾಯದ ಕೆಲ ಮಂದಿಯನ್ನು ಡಕಾಯಿತರು ಅಪಹರಣ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಕಿಡ್ನಾಪ್‌ ಆಗೀರೋರನ್ನ ಶೀಘ್ರ ಬಿಡುಗಡೆಗೆ ಆಗ್ರಹಿಸಿ ಅಲ್ಪಸಂಖ್ಯಾತ ಸಮುದಾಯಗಳು ಸೆಪ್ಟೆಂಬರ್‌ 1ರಿಂದ ಪ್ರತಿಭಟನೆ ನಡೆಸುತ್ತಿವೆ. ಈ ಪ್ರತಿಭಟನೆಯ ನೇತೃತ್ವವನ್ನ Pakistan Peoples Party (PPP)ಯ ಅಲ್ಪ ಸಂಖ್ಯಾತ ವಿಭಾಗದ ವೈಸ್‌ ಪ್ರೆಸಿಡೆಂಟ್‌ ಡಾ. ಚಂದ್‌ ಮಹಾರ್‌ ವಹಿಸಿದ್ದಾರೆ. ಹಿಂದೂ ಸಮುದಾಯಕ್ಕೆ ಸೇರಿದ ಮುಖಿ ಜಗದೀಶ್ ಕುಮಾರ್, ಸಾಗರ್ ಕುಮಾರ್ ಮತ್ತು ಜೈದೀಪ್ ಕುಮಾರ್ ಅನ್ನೋರನ್ನ ಇತ್ತೀಚೆಗೆ ಡಕಾಯಿತರು ಅಪಹರಿಸಿ ಬಂಧನದಲ್ಲಿಟ್ಟಿದ್ದಾರೆ. ಅಂದ್ಹಾಗೆ ಕಳೆದ 40 ದಿನಗಳಿಂದ ಮುಸ್ಲಿಂ ವೈದ್ಯ ಮುನೀರ್ ನೈಜ್ ಅನ್ನೋರು ಕೂಡ ಸೆರೆಯಲ್ಲಿದ್ದಾರೆ ಅಂತ ಮಹಾ‌ರ್‌ ಹೇಳಿದ್ದಾರೆ.

ಇತ್ತ ಪಾಕಿಸ್ತಾನದ ನೌಕಾಪಡೆಯ ಹೆಲಿಕಾಪ್ಟರ್ ಪತನಗೊಂಡಿದ್ದು ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಟೆಕ್ನಿಕಲ್‌ ಪ್ರಾಬ್ಲಂನಿಂದ ನಿಯಂತ್ರಣ ಕಳೆದುಕೊಂಡು ಪತನವಾಗಿದೆ. ಘಟನೆಯಲ್ಲಿ ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಸಿಬ್ಬಂದಿ ಮೃತಪಟ್ಟಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply