ಮತ್ತಷ್ಟು ಹೆಚ್ಚಿದ ಪಾಕಿಸ್ತಾನದ ಸಾಲದ ಹೊರೆ!

masthmagaa.com:

ಈಗಾಗಲೇ ಆರ್ಥಿಕ ದುಸ್ಥಿತಿಯಿಂದ ಬಳಲುತ್ತಿರುವ ಪಾಕಿಸ್ತಾನದ ಸಾಲ ಮತ್ತೆ ಜಾಸ್ತಿಯಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಸರ್ಕಾರ ಹೆಚ್ಚು ಸಾಲ ಮಾಡಿದೆ. ಕಳೆದ ಹಣಕಾಸು ವರ್ಷದಲ್ಲಿ 8 ಪರ್ಸೆಂಟ್ ಅಂದ್ರೆ 2.89 ಟ್ರಿಲಿಯನ್​ನಷ್ಟು ಜಾಸ್ತಿಯಾಗಿದೆ. ಅಂದ್ರೆ ಪಾಕಿಸ್ತಾನ ರೂಪಾಯಿ ಲೆಕ್ಕದಲ್ಲಿ 2.89 ಲಕ್ಷ ಕೋಟಿ​​​​ ರೂಪಾಯಿಯಷ್ಟು ಸಾಲ ಜಾಸ್ತಿಯಾಗಿದೆ. ಜುಲೈ 5ರಂದು ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಅಂದಹಾಗೆ ಪಾಕಿಸ್ತಾನದಲ್ಲಿ ಜುಲೈ 1ರಿಂದ ಜೂನ್ 30ರವರೆಗೆ ಹಣಕಾಸು ವರ್ಷ ಅಂತ ಪರಿಗಣಿಸಲಾಗುತ್ತೆ. ಕಳೆದ ವರ್ಷ ಜೂನ್ ಅಂತ್ಯದಲ್ಲಿ ಪಾಕಿಸ್ತಾನ ಸರ್ಕಾರದ ಸಾಲ 35.107 ಲಕ್ಷ ಕೋಟಿ
ಪಾಕಿಸ್ತಾನದ ರೂಪಾಯಿಯಷ್ಟಿತ್ತು. ಆದ್ರೆ ಈ ವರ್ಷ ಮೇ ಅಂತ್ಯಕ್ಕೆ ಆ ಮೊತ್ತ ಜಾಸ್ತಿಯಾಗಿ, 37.997 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅದೇ ಕಳೆದ ವರ್ಷ ಮೇನಿಂದ ಈ ವರ್ಷದ ಮೇಲೆ ಲೆಕ್ಕ ಹಿಡಿದ್ರೆ ಸಾಲದ ಪ್ರಮಾಣದಲ್ಲಿ 10.17 ಪರ್ಸೆಂಟ್​​ನಷ್ಟು ಏರಿಕೆಯಾಗಿದೆ. ಒಟ್ಟಾರೆ ಸಾಲದಲ್ಲಿ ಸರ್ಕಾರದ ಆಂತರಿಕ ಸಾಲ 26.065 ಲಕ್ಷ ಕೋಟಿಯಷ್ಟಿದ್ದು, ವಿದೇಶಿ ಸಾಲ 11.931 ಲಕ್ಷ ಕೋಟಿಯಷ್ಟಿದೆ.

-masthmagaa.com

Contact Us for Advertisement

Leave a Reply