ಪ್ಯಾಲಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡ್ಬೇಕು: ಭಾರತ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ವಿಶ್ವಸಂಸ್ಥೆಯಲ್ಲಿ ಮತ್ತೆ ಪ್ಯಾಲಸ್ತೀನ್ ಪರವಾಗಿ ಭಾರತ ಬ್ಯಾಟಿಂಗ್‌ ಮಾಡಿದೆ. ಪಾಲೆಸ್ತೇನ್‌ಗೆ ಪೂರ್ಣ‌ ಸದಸ್ಯತ್ವ ಪಡೆಯೊ ಪ್ರಸ್ತಾಪಕ್ಕೆ ನಮ್ಮ ಸಪೋರ್ಟ್‌ ಇದ್ದೇ ಇರುತ್ತೆ ಅಂತೇಳಿದೆ. ಪ್ಯಾಲಸ್ತೀನ್‌ನ ಜನರ ಸ್ವಾತಂತ್ಯಕ್ಕಾಗಿ ಟು ಸ್ಟೇಟ್‌ ಸೊಲ್ಯುಷನ್‌ ವಿಚಾರವನ್ನ ನಾವು ಒಪ್ಪುತ್ತೇವೆ, ವಿಶ್ವಸಂಸ್ಥೆಯ ಸದಸ್ಯನಾಗಲು ಪ್ಯಾಲಸ್ತೀನ್‌ಗೆ ಅನುಮೋದನೆ ಸಿಗುತ್ತೆ ಅಂತೇಳಿ ನಾವು ಭಾವಿಸುತ್ತೇವೆ..ಶಾಂತಿ ಸ್ಥಾಪನೆ ಆಗೋಕೆ ಇಸ್ರೇಲ್‌ ಮತ್ತು ಪಾಲೇಸ್ತೇನ್‌ ಎನ್ನೋ ಎರಡು ದೇಶಗಳ ಟು ನೇಷನ್‌ ಥಿಯರಿಯನ್ನ ನಾವು ಬೆಂಬಲಿಸ್ತೇವೆ. ಭಾರತ ಸದಾ ಈ ವಿಚಾರಕ್ಕೆ ಬದ್ದವಾಗಿದೆ ಅಂತ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ಹೇಳಿದ್ದಾರೆ. ಈ ಮೂಲಕ ಇಸ್ರೇಲ್‌ ಅಮೆರಿಕಗೆ ವಿಶ್ವಸಂಸ್ಥೆಯಲ್ಲಿ ಭಾರತ ಶಾಕ್‌ ಕೊಟ್ಟಿದೆ. ಯಾಕಂದ್ರೆ ಕಳೆದ ಕೆಲ ದಿನಗಳ ಹಿಂದಷ್ಟೇ ಪ್ಯಾಲಸ್ತೀನ್‌ಗೆ ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ನೀಡೊ ಪ್ರಸ್ತಾಪ ಮುಂದಿಡಲಾಗಿತ್ತು. ಇಸ್ರೇಲ್‌ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆ ಕಡೆ ಅಮೆರಿಕ ಕೂಡ ವಿಟೋ ಅಧಿಕಾರ ಚಲಾಯಿಸಿ ಪಾಲೇಸ್ತೇನ್‌ಗೆ ಒಂದು ದೇಶದ ಸ್ಥಾನಮಾನ ಸಿಗೋದನ್ನ ತಡೆ ಹಿಡಿದಿತ್ತು. ಈಗ ಈ ವಿಚಾರವಾಗಿ ಮಾತಾಡಿರೋ ಭಾರತ ಪಾಲೇಸ್ತೇನ್‌ ಒಂದು ದೇಶವಾಗಬೇಕು. ನಾವು ಅದಕ್ಕೆ ಬೆಂಬಲ ಕೊಟ್ಟೇ ಕೊಡ್ತೀವಿ ಅಂತೇಳಿದೆ.

-masthmagaa.com

Contact Us for Advertisement

Leave a Reply