ಮಾರ್ಚ್​ 31ರೊಳಗೆ ಆಧಾರ್​ ಜೊತೆ ಪ್ಯಾನ್​ ಲಿಂಕ್ ಮಾಡದಿದ್ದರೆ ಏನಾಗುತ್ತೆ..?

ಮಾರ್ಚ್​ 31ರೊಳಗೆ ಆಧಾರ್ ಕಾರ್ಡ್​ ಜೊತೆ ಪ್ಯಾನ್ ಕಾರ್ಡ್​ ಲಿಂಕ್ ಮಾಡಬೇಕು ಅಂತ ಆದಾಯ ತೆರಿಗೆ ಇಲಾಖೆ ಈ ಹಿಂದೆಯೇ ಹೇಳಿದೆ. ಇದೀಗ ಹೊಸದಾಗಿ ಅಧಿಸೂಚನೆ ಹೊರಡಿಸಿರೋ ಐಟಿ ಇಲಾಖೆ, ಆಧಾರ್ ಜೊತೆ ಪ್ಯಾನ್ ಲಿಂಕ್​ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯ ಆಗುವುದಲ್ಲದೆ, ನಿಷ್ಕ್ರಿಯವಾದ ಪ್ಯಾನ್​ ಕಾರ್ಡ್​ ಬಳಸಿದ್ರೆ 10,000 ರೂಪಾಯಿ ದಂಡ ವಿಧಿಸಲು ಅವಕಾಶವಿದೆ ಅಂತ ತಿಳಿಸಿದೆ. ಅಂದ್ರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272ಬಿ ಪ್ರಕಾರ, ಯಾವುದಾದರು ವ್ಯಕ್ತಿ ನಿಷ್ಕ್ರಿಯ ಅಥವಾ ಅಮಾನ್ಯವಾದ ಪ್ಯಾನ್​ ಕಾರ್ಡ್ ಬಳಸಿದ್ರೆ ದಂಡ ವಿಧಿಸಲು ಅವಕಾಶವಿದೆ.

ಆದ್ರೆ ನಿಷ್ಕ್ರಿಯ ಪ್ಯಾನ್ ಕಾರ್ಡ್​ಗಳನ್ನ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ವಹಿವಾಟುಗಳಿಗೆ ಬಳಸಬಹುದು. ಅಂದ್ರೆ ಬ್ಯಾಂಕ್ ಅಕೌಂಟ್​ ಓಪನ್ ಮಾಡಲು ಅಥವಾ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಐಡಿ ಪ್ರೂಫ್​ ಆಗಿ ಬಳಸಬಹುದು. ಆದ್ರೆ ನಿಷ್ಕ್ರಿಯ ಪ್ಯಾನ್​ ಕಾರ್ಡ್​ಗಳನ್ನ ಬಳಸಿ 50 ಸಾವಿರ ರೂಪಾಯಿಗೂ ಹೆಚ್ಚು ಮೊತ್ತದ ವಹಿವಾಟು ನಡೆಸಿದಾಗ ದಂಡ ಹಾಕಬಹುದು. ಮಾರ್ಚ್​ 31ರೊಳಗೆ ಆಧಾರ್ ಜೊತೆ ಪ್ಯಾನ್​ ಕಾರ್ಡ್ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಭವಿಷ್ಯದಲ್ಲಿ ಆಧಾರ್ ಜೊತೆ ಲಿಂಕ್ ಮಾಡಿದ ಕೂಡಲೇ ನಿಮ್ಮ ಪ್ಯಾನ್​ ಕಾರ್ಡ್ ಆಕ್ಟಿವ್ ಆಗಲಿದೆ.

Contact Us for Advertisement

Leave a Reply