ಪೆಂಡೋರಾ ಲೀಕ್​: ಅಂಬಾನಿ, ಸಚಿನ್, ಇಮ್ರಾನ್ ಖಾನ್​ ಶಾಕ್

masthmagaa.com:

ಪೆಂಡೋರಾ ಪೇಪರ್ಸ್ ಲೀಕ್ ಇಡೀ ವಿಶ್ವಾದ್ಯಂತ ದೊಡ್ಡ ಸಂಚಲನಕ್ಕೆ ಕಾರಣ ಆಗಿದೆ. ಭಾರತದ ಕುಬೇರರು ಸೇರಿದಂತೆ ವಿಶ್ವಾದ್ಯಂತ ಇರೋ ಶ್ರೀಮಂತರು, ರಾಜಕಾರಣಿಗಳು, ರಾಜ ಪರಿವಾರದವರು ವಿದೇಶಗಳಲ್ಲಿ ಸೀಕ್ರೆಟ್ ಆಸ್ತಿ ಮಾಡಿಟ್ಟಿದ್ದಾರೆ ಅಂತಾ ಪೆಂಡೋರಾ ಪೇಪರ್ಸ್ ಬಯಲು ಮಾಡಿದೆ. 1 ಕೋಟಿ 20 ಲಕ್ಷಕ್ಕೂ ಅಧಿಕ ರಹಸ್ಯ ದಾಖಲೆಗಳನ್ನ The International Consortium of Investigative Journalists ಸಂಗ್ರಹಿಸಿ ಲೀಕ್ ಮಾಡಿದೆ. ಇದನ್ನ ವಿಶ್ವಾದ್ಯಂತ ಇರೋ 14 ಲೀಗಲ್ ಮತ್ತು ಫಿನಾನ್ಶಿಯಲ್ ಕಂಪನಿಗಳಿಂದ ಸಂಗ್ರಹಿಸಲಾಗಿದೆ. ತೆರಿಗೆ ಕಳ್ಳತನ ಮಾಡೋಕೆ ಹೇಗೆ ತೆರಿಗೆ ಕಮ್ಮಿ ಇರೋ ಅಥವಾ ತೆರಿಗೆಯೇ ಇಲ್ಲದಿರೋ ದೇಶಗಳಲ್ಲ ಟ್ರಸ್ಟ್ ಗಳನ್ನ ಸ್ಥಾಪಿಸಿ ಅದರ ಮೂಲಕ ವಿಶ್ವಾದ್ಯಂತ ಅತಿ ದುಬಾರಿ ಆಸ್ತಿಗಳನ್ನ ಖರೀದಿ ಮಾಡಲಾಗಿದೆ ಅಂತ ಇದರಲ್ಲಿ ವಿವರಿಸಲಾಗಿದೆ. ಈ ಪೈಕಿ ಕನಿಷ್ಠ 300 ಭಾರತೀಯರ ಹೆಸರಿದೆ ಎನ್ನಲಾಗಿದ್ದು, ದುಡ್ಡೇ ಇಲ್ಲ ಮೈಲಾರ್ಡ್ ಅಂತ ಕೋರ್ಟ್ಲ್ ಅಲ್ಲಿ ಅಳೋ ಅನಿಲ್ ಅಂಬಾನಿ, ಸಚಿನ್ ತೆಂಡೂಲ್ಕರ್, ಬೈಯೋಕಾನ್ ನ ಕಿರಣ್ ಮಜುಂದಾರ್ ಶಾ, ಸಾಲ ಮಾಡಿ ಪರಾರಿಯಾಗಿರೋ ನೀರವ್ ಮೋದಿ, ನಟ ಜಾಕಿ ಶ್ರಾಫ್ ಹೆಸರುಗಳಿವೆ. ಜೊತೆಗೆ ಜೋರ್ಡಾನ್ ರಾಜ ತನ್ನ ಪ್ರಜೆಗಳಿಗೆ ಮೋಸ ಮಾಡಿ ವಿಶ್ವದೆಲ್ಲೆಡೆ ಖರೀದಿ ಮಾಡಿರೋ ಆಸ್ತಿ, ಜೆಕ್ ಗಣರಾಜ್ಯದ ಪ್ರಧಾನಿ ಆಂಡ್ರೆಜ್ ಬಾಬಿಸ್ ಫ್ರೆಂಚ್ ರಿವೆರಾದಲ್ಲಿ ಖರೀದಿಸಿರೋ ಆಸ್ತಿ, ಯುಕೆಯ ಕ್ವೀನ್ ಎಲಿಜಬೆತ್ 2 ಅವರ ಫ್ಯಾಮಿಲಿ ಅಜರ್ಬೈಜಾನ್ ನಲ್ಲಿ ಖರೀದಿ ಮಾಡಿರೋ ಆಸ್ತಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆಪ್ತರ ವಿದೇಶೀ ಗುಪ್ತ ಆಸ್ತಿಗಳು, ಮಾಜಿ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ತೆರಿಗೆ ಕಣ್ಣಾಮುಚ್ಚಾಲೆ.. ಈ ಎಲ್ಲವೂ ಈ ಪೆಂಡೋರಾ ಪೇಪರ್ಸ್ ನಲ್ಲಿ ಲೀಕ್ ಆಗಿದೆ

-masthmagaa.com

Contact Us for Advertisement

Leave a Reply