ಪನ್ನೂನ್‌ ಹತ್ಯೆ ಸಂಚಿನ ವಿಚಾರ: ಭಾರತದ ಬೆಂಬಲಕ್ಕೆ ನಿಂತ ರಷ್ಯಾ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಹತ್ಯೆ ಸಂಚಿನ ವಿಚಾರವಾಗಿ ರಷ್ಯಾ ಭಾರತದ ಬೆಂಬಲಕ್ಕೆ ನಿಂತಿದೆ. ಪನ್ನೂನ್‌ ಹತ್ಯೆ ಸಂಚಿನಲ್ಲಿ ಭಾರತದ ಕೈವಾಡ ಇದೆ ಅನ್ನೊದಕ್ಕೆ ಅಮೆರಿಕ ಸೂಕ್ತ ದಾಖಲೆಗಳನ್ನ ಒದಗಿಸಿಲ್ಲ ಅಂತ ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ದೇ ಸಾಕ್ಷಿಗಳಿಲ್ಲದೇ ಈ ವಿಷಯದಲ್ಲಿ ವದಂತಿಗಳನ್ನ ಸ್ವೀಕರಿಸಲು ಸಾಧ್ಯವಿಲ್ಲ ಅಂತ ರಷ್ಯಾ ವಿದೇಶಾಂಗ ವಕ್ತಾರರಾದ ಮರಿಯಾ ಜಖರೋವಾ ಹೇಳಿದ್ದಾರೆ.
ಜೊತೆಗೆ ಅಮೆರಿಕದ ಸುದ್ದಿ ವಾಹಿನಿ ವಾಶಿಂಗಟನ್‌ ಪೋಸ್ಟ್‌ ಅಮೆರಿಕದ ಪರವಾಗಿ ವರದಿ ಮಾಡುತ್ತೆ. ಬೇರೆ ದೇಶಗಳ ಬಗ್ಗೆ ಕೆಟ್ಟದಾಗಿ ಬರೆಯುತ್ತೆ ಅಂತ ರಷ್ಯಾ ಹೇಳಿದೆ. ಅಲ್ದೇ ಭಾರತ ಸೇರಿದಂತೆ ಹಲವು ದೇಶಗಳ ವಿರುದ್ದ ಅಮೆರಿಕ ಈ ರೀತಿ ಆರೋಪಗಳನ್ನ ಮಾಡ್ತಾನೆ ಬಂದಿದೆ. ತನ್ನ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಾಗಿದೆ ಅಂತೇಳಿ ಅಮೆರಿಕ ಭಾರತಕ್ಕೆ ಈ ರೀತಿ ಅಗೌರವ ತೋರ್ತಿರೊದು ತಪ್ಪು ಕಲ್ಪನೆ ಅಂತ ಜಖರೋವಾ ಹೇಳಿದ್ದಾರೆ. ಇನ್ನು ವಸಾಹತು ಶಾಹಿ ಕಾಲದಿಂದಲೂ ಅಮೆರಿಕ ಹೀಗೆ ಮಾಡ್ತಿದೆ ಅನ್ನೊ ನನಗೆ ಗೊತ್ತು. ಈ ಆರೋಪ ಭಾರತಕ್ಕೆ ಮಾತ್ರ ಸಿಮೀತ ಅಲ್ಲ. ಜೊತೆಗೆ ಇವರು ಭಾರತದ ಆಂತರಿಕ ರಾಜಕೀಯವನ್ನ ಇಂಬೆಲ್ಯಾನ್ಸ್‌ ಮಾಡೋಕೆ ಪ್ರಯತ್ನ ಮಾಡ್ತಿದ್ದಾರೆ. ಭಾರತದ ಚುನಾವಣೆಯನ್ನ ಕಾಂಪ್ಲೆಕ್ಸ್‌ ಮಾಡೋಕೆ ಯತ್ನಿಸ್ತಿದ್ದಾರೆ ಅಂತ ರಷ್ಯಾ ದೂರಿದೆ. ಅಂದ್ರೆ ಭಾರತದ ವಿರುದ್ದ ವರದಿ ಮಾಡ್ತಾ, ಭಾರತದ ಚುನಾವಣೆಯಲ್ಲಿ ಪ್ರಭಾವ ಬೀರೋಕೆ ಅವರು ಪ್ರಯತ್ನ ಮಾಡ್ತಿದ್ದಾರೆ ಅನ್ನೋ ಅರ್ಥದಲ್ಲಿ ರಷ್ಯಾ ಅಮೆರಿಕ ವಿರುದ್ದ ಆರೋಪ ಮಾಡಿದೆ.

-masthmagaa.com

Contact Us for Advertisement

Leave a Reply