X ಓನರ್‌ ಮಸ್ಕ್‌ ಮೇಲೆ Xನ Ex-ಸಿಇಒ ಪರಾಗ್‌ ಅಗರ್ವಾಲ್‌ ಕೇಸ್!

masthmagaa.com:

ಈಗ ʻX’ ಆಗಿರೋ‌ ಹಿಂದಿನ ಟ್ವಿಟರ್‌ ಮಾಜಿ ಸಿಎಒ ಭಾರತ ಮೂಲದ ಪರಾಗ್‌ ಅಗರ್‌ವಾಲ್‌ ಟೆಸ್ಲಾ ಹಾಗೂ X ದೊರೆ ಇಲಾನ್‌ ಮಸ್ಕ್‌ ವಿರುದ್ಧ ಕೋರ್ಟಿಗೆ ಹೋಗಿದ್ದಾರೆ. ಸಿಇಒ ಹುದ್ದೆ ಅವಧಿ ಮುಗಿಯೋಕೆ ಮುಂಚೆ ಕೆಳಗಿಳಿಸಿದ್ದಕ್ಕೆ ಸಿವೆರನ್ಸ್ (severance) ಅಂದ್ರೆ, ಬೇರ್ಪಡುವಿಕೆ ಹಣ ಕೊಟ್ಟಿಲ್ಲ ಅಂತ ಮಸ್ಕ್‌ ಮೇಲೆ ಕೇಸ್‌ ಹಾಕಿದ್ದಾರೆ. 2022ರ ಅಕ್ಟೋಬರ್‌ನಲ್ಲಿ ಇಲಾನ್‌ ಮಸ್ಕ್‌ ಟ್ವಿಟರ್‌ ಖರೀಧಿಸಿದಾಗ ಸಿಇಒ ಪರಾಗ್‌ ಅಗರ್ವಾಲ್‌ ಸೇರಿ ಕಂಪನಿಯ ಪ್ರಮುಖ ಹುದ್ದೆಗಳಲ್ಲಿದ್ದೋರನ್ನ ಫೈರ್‌ ಮಾಡಿದ್ರು. ಸಾವಿರಾರು ಜನರನ್ನ ಲೇ ಆಫ್‌ ಮಾಡಿದ್ರು. ಪರಾಗ್‌ ನಿರ್ಗಮನದ ನಂತರ ಈ ವಿಚಾರವಾಗಿ ಬಹಳಷ್ಟು ಡಿಸ್‌ಕಶನ್‌ ನಡೆದಿತ್ತು. ಆಮೇಲೆ ಮಸ್ಕ್‌ ಕೂಡ ಪರಾಗ್‌ ಬಗ್ಗೆ ಹಲವು ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಅಲ್ದೇ ಇತ್ತೀಚೆಗೆ ಮಸ್ಕ್‌ ಅವರು ಪರಾಗ್‌ಗೆ ಟ್ವಿಟರ್‌ ಅಕೌಂಟ್‌ ಒಂದನ್ನ ಬ್ಲಾಕ್‌ ಮಾಡೋಕೆ ಹೇಳಿದ್ರು. ಆದ್ರೆ ಪರಾಗ್‌ ಇದಕ್ಕೆ ನಿರಾಕರಿಸಿದ್ದಕ್ಕೆ ಅವರನ್ನ ವಜಾ ಮಾಡಲಾಯ್ತು ಅನ್ನೋ ವಿಚಾರ ಕೂಡ ಹರಿದಾಡಿತ್ತು. ಇದೀಗ ಪರಾಗ್‌ ಹಾಗೂ ಇನ್ನಿತರ ಮಾಜಿ ನೌಕರರು ಸೇರಿ ಮಸ್ಕ್‌ ಸುಮಾರು $128 ಮಿಲಿಯನ್‌ ಹಣ ಕೊಡ್ಬೇಕು ಅಂತ ಕೇಸ್‌ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply